'ಸೂರ್ಯಶ್ರೀ' ಕಾವ್ಯನಾಮದಲ್ಲಿ ಕವಿ ಪೂರೀಗಾಲಿ ಮರಡೇಶಮೂರ್ತಿ ರಚಿಸಿರುವ ಈ ಕವಿತಾ ಸಂಕಲನವು 1994ರಲ್ಲಿ ಪ್ರಥಮ ಆವೃತಿಯಾಗಿ ಪ್ರಕಟಗೊಂತು. ನಲವತ್ತಕ್ಕು ಹೆಚ್ಚು 'ಹನಿಗಳ’ನ್ನು ಹೊಂದಿರುವ ಇದು ಒಂದು ಚುಟುಕು ಸಂಕಲನ ಎನ್ನಬಹುದು. ಕಡಲಕನ್ಯೆ, ನಿತ್ಯ ಮುತ್ತೈದೆ, ನಲ್ಲನಲ್ಲೆ, ಹುಡುಗ -ಹುಡುಗಿ, ವಿಪರ್ಯಾಸ, ಗೆಳತಿ, ಇಳಿಯನ ಹೃದಯ, ಸೌಂದರ್ಯ, ಕುತೂಹಲ ಕವಿತೆಗಳು ನಮ್ಮನ್ನು ಎದುರುಗೊಂಡಷ್ಟೇ ಮುಖ್ಯವಾಗಿ ಮನಮುಟ್ಟುತ್ತವೆ.
ಕವಿ, ಕಾದಂಬರಿಕಾರ ಪೂರೀಗಾಲಿ ಮರಡೇಶಮೂರ್ತಿ ಅವರು ಮೂಲತಃ ಮಂಡ್ಯದವರು. ವಚನ ಸಾಹಿತ್ಯದಲ್ಲಿ ತಮ್ಮೊಳಗಿನ ಅರಿವನ್ನು ಅಭಿವ್ಯಕ್ತಿಸಿದ್ದಾರೆ. ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ’ಸಿಂಧೂರ ಬಿಂದು’ ಅವರ ಮೊದಲ ಕಾದಂಬರಿ. ಸುಮಾರು 3 ದಶಕಗಳ ಕಾಲ ಸಾಹಿತ್ಯ ಕೈಂಕರ್ಯ ನಡೆಸಿರುವ ಇವರು 50 ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನದಡಿ 25 ವರ್ಷಗಳಿಂದ ಯುವಪೀಳಿಗೆಗೆ ಸಾಹಿತ್ಯ ಕಾರ್ಯಕ್ರಮಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಡೆಸುತ್ತಾ ಬಂದಿದ್ದಾರೆ. ’ನೀಲಿಬಾನಿನ ತಾರೆಗಳು, ಹನಿಗಳು, ಕಾವ್ಯಕನ್ನಿಕೆ’ ಅವರ ಪ್ರಮುಖ ಕವನ ಸಂಕಲನಗಳು. ’ಒಲವಿನ ಕನಸು, ಅವಳು ಭೂಮಿಕೆ, ಸುಳಿ, ಸೂರ್ಯ ...
READ MORE