ಕವಯತ್ರಿ ಸವಿತಾ ನಾಗಭೂಷಣ ಅವರು ರಚಿಸಿರುವ ಆಯ್ದ ಐವತ್ತು ಕವನಗಳ ಸಂಗ್ರಹವೇ ಈ ಪುಸ್ತಕ. ’ಹಳ್ಳಿಯ ದಾರಿ’ಯಲ್ಲಿನ ಸವಿತಾ ಅವರ ಈ ಕವನಗಳು ಸಂಕೀರ್ಣ ಬದುಕನ್ನು ಆಳವಾಗಿ ನೋಡದೇ ಸರಳ ಆಯ್ಕೆಗಳಲ್ಲಿ ತೃಪ್ತಿಪಡುವ ಮೃದು ಕವನಗಳಾಗಿವೆ. ಇವರ ಅಪರೂಪದ ಕವನಗಳು ಸ್ಪಂದನಶೀಲ ವ್ಯಕ್ತಿತ್ವದ ಹಿಂದೆ ಇರುವಂತದ್ದು. ಇಲ್ಲಿರುವ ಅನೇಕ ಕವನಗಳು ಸವಿತಾ ಅವರು ನಡೆದು ಬಂದ ಕಾವ್ಯದಾರಿಯ ಹೆಜ್ಜೆ ಗುರುತುಗಳನ್ನು ಪರಿಚಯಿಸುತ್ತವೆ. ಅವರ ಐದು ಕವನ ಸಂಕಲನಗಳಿಂದ ಆರಿಸಿದಂತಹ ಐವತ್ತು ಕವನಗಳು 'ಹಳ್ಳಿ ದಾರಿ'ಯಲ್ಲಿ ಪ್ರಕಟವಾಗಿದೆ.
ಚಿಕ್ಕಮಗಳೂರಿನಲ್ಲಿ ಜನಿಸಿದ ಸವಿತಾ ನಾಗಭೂಷಣ ಅವರು ಬೆಳೆದದ್ದು ಮತ್ತು ಶಿಕ್ಷಣ ಪಡೆದದ್ದು ಶಿವಮೊಗ್ಗದಲ್ಲಿ. ಮಲೆನಾಡಿನ ಅನುಭವದ ಹಿನ್ನೆಲೆಯಲ್ಲಿ ಅವರ ಬಹಳಷ್ಟು ಕವಿತೆಗಳಲ್ಲಿ ಗಿಡ-ಮರ, ಹಸಿರು-ಹೂ-ಹಣ್ಣು ಮತ್ತು ಹೊಳೆ-ಮಳೆ- ಮೋಡಗಳ ಜೀವಂತ ರೂಪಕ ಒಳಗೊಂಡಿರುತ್ತವೆ. ವರ್ತಮಾನದ ಮನುಷ್ಯನ ಆಳದ ಸಂತೋಷ-ನೆಮ್ಮದಿ, ದುಃಖ- ವಿಷಾದಗಳನ್ನು ಅಂತಃಕರಣಪೂರ್ವಕವಾಗಿ ದಾಖಲಿಸುತ್ತವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾವ್ಯಕ್ಕಾಗಿ ನೀಡುವ ಪ್ರಶಸ್ತಿ ಪಡೆದ ಮೊದಲ ಕವಯತ್ರಿಯಾದ (ನಾ ಬರುತ್ತೇನೆ ಕೇಳು) ಸವಿತಾ ಅವರ ಎಲ್ಲ ಸಂಕಲನಗಳಿಗೆ ವಿವಿಧ ಸಂಘ-ಸಂಸ್ಥೆಗಳ ಬಹುಮಾನ -ಪ್ರಶಸ್ತಿ ಸಂದಿವೆ. ಅವರ ವಿಶಿಷ್ಟ ಕಾದಂಬರಿ ’ಸ್ತ್ರೀಲೋಕ’ಕ್ಕೆ ಎಂ.ಕೆ. ಇಂದಿರಾ ಮತ್ತು ಬಿ.ಎಚ್. ಶ್ರೀಧರ್ ...
READ MORE