ಹಕ್ಕಿ ಪಲ್ಟಿ

Author : ಎಸ್. ಮಂಜುನಾಥ್ (ಜೀವಯಾನ)

Pages 64

₹ 12.00




Year of Publication: 1987
Published by: ಕನ್ನಡ ಸಂಘ
Address: ಕ್ರೈಸ್ಟ್ ಕಾಲೇಜು, ಹೊಸೂರ್ ರೋಡ್, ಬೆಂಗಳೂರು- 560029

Synopsys

‘ಹಕ್ಕಿ ಪಲ್ಟಿ’ ಕವಿ, ಲೇಖಕ ಎಸ್. ಮಂಜುನಾಥ್ ಅವರ ಕವನ ಸಂಕಲನ. ಈ ಕೃತಿಗೆ ಹಿರಿಯ ಲೇಖಕ ಡಾ. ಯು.ಆರ್. ಅನಂತಮೂರ್ತಿ ಬೆನ್ನುಡಿ ಬರೆದಿದ್ದಾರೆ. ‘ಸ್ವಂತ ಜೀವನದ ದಾರುಣವಾದ ಕಷ್ಟಕೋಟಲೆ ಗಳಿಂದ ಮಂಜುನಾಥ ಮೂಕನಾಗಿಲ್ಲವೆಂಬುದು ನನಗೆ ಅವನಲ್ಲಿ ವಿಶೇಷ ಗೌರವವನ್ನೂ, ಅಭಿಮಾನವನ್ನೂ ತಂದಿದೆ ಎನ್ನುತ್ತಾರೆ ಯು.ಆರ್. ಅನಂತ ಮೂರ್ತಿ. ಈ ಪದ್ಯಗಳನ್ನು, 'ಇನ್ನೂ ಆಗಿಲ್ಲ, ಆದರೆ ಆಗಲಿವೆ' ಎಂಬ ಈ ಪದ್ಯಗಳನ್ನು ಅವುಗಳನ್ನು ಮೊದಲು ಕಂಡಾಗಿನ ನೆನಪಿನಲ್ಲ, ಈಗ ಯಾವುದೋ ಕನ್ನಡವಿಲ್ಲದ ಪರದೇಶದಲ್ಲಿ ಓದಿದ ಸುಖದಲ್ಲಿ ಹೆಸರಿಸುವುದರಲ್ಲಿ ನನಗೆ ಸಂತೋಷವಿದೆ.

ಮಂಜುನಾಥ ನಿಜವಾದ ಕವಿಯಾದ್ದರಿಂದ, ಅಂದರೆ ಮಾತಿನ ಮಾಂತ್ರಿಕ ಶಕ್ತಿ ತಿಳಿದವನಾದ್ದರಿಂದ-ತೀರಾ ಅತೃಪ್ತನಾಗಿ ಬರೆಯುತ್ತಿದ್ದಾನೆ. ಅವನ ತತ್ಪರತೆಯನ್ನು ಬಲ್ಲ ನಾನು ಖಡಾ ಖಂಡಿತವಾಗಿ ಅವನ ಪದ್ಯಗಳ ಬೆಲೆ ಕಟ್ಟಲಾರೆ. ಪ್ರಯತ್ನ ಮತ್ತು ಅದೃಷ್ಟಗಳಿಂದ ಅವನ ಅನುರಕ್ತಿಗೆ, ಮಾಂತ್ರಿಕಶಕ್ತಿ ದೊರೆತೀತೆಂಬ ಭರವಸೆ ನನಗಿದೆ ಎಂಬುದು ಅನಂತ ಮೂರ್ತಿಯವರ ಮಾತು. 

About the Author

ಎಸ್. ಮಂಜುನಾಥ್ (ಜೀವಯಾನ)

ಕಾವ್ಯ ಜೋಗಿ ಎಂದೆ ಹೆಸರುವಾಸಿಯಾದ ಎಸ್. ಮಂಜುನಾಥ್ ಅವರು 1960 ಜೋಗದಲ್ಲಿ ಜನಿಸಿದರು. ತಾಳಗುಪ್ಪ ಹಾಸನ ಹಾಗೂ ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಇಂಗ್ಲಿಷ್ ಎಂ.ಎ ಪದವೀಧರರು.  ’ಹಕ್ಕಿ ಪಲ್ಟಿ', 'ಬಾಹು ಬಲಿ' 'ನಂದ ಬಟ್ಟಲು' 'ಮೌನದ ಮಣಿ' ಕಲ್ಲ ಪಾರಿವಾಳಗಳ ಬೇಟ' 'ಜೀವಯಾನ' ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ಮುದ್ದಣ ಪ್ರಶಸ್ತಿ, ಪು.ತಿ.ನ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿಗಳು ದೊರಕಿವೆ. ಇವರ ಮತ್ತೊಂದು ಕೃತಿ ‘ಸುಮ್ಮನಿರುವ ಸುಮಾನ’ ಎಂಬ ತಾವೋ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.   ...

READ MORE

Related Books