ದೀಪ್ತಿ ಅವರ ಎರಡನೇ ಕವನ ಸಂಕಲನ-ಗ್ರೀನ್ ರೂಮಿನಲ್ಲಿ.. ಮುಂಬೈನ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ ದೊರತಿದೆ. ಇಲ್ಲಿನ ಕವಿತೆಗಳಲ್ಲಿ ಸ್ವಯಂ ಅನುಭವವೇ ಕೇಂದ್ರ. ಈ ಕವಿತೆಗಳಲ್ಲಿ ರಾಧಾ ಮಾಧವರ ವಿನ್ಯಾಸಗಳನು ಒಳಗೊಂಡ ಗಂಡು ಹೆಣ್ಣಿನ ಸಂಬಂಧವು ಚೆನ್ನಾಗಿ ನಿರೂಪಿಸಲ್ಪಟ್ಟಿವೆ. ಕೃತಿ ಕುರಿತು ಲೇಖಕಿ ಶುಭ ಮರವಂತೆ ಅವರು “ತುಂಟತನದೊಂದಿಗೆ ಬದುಕಿನ ಬಗ್ಗೆ ಆಳವಾದ ನಂಬಿಕೆ ವಿಶ್ವಾಸದ ಮೂಲಕ ಬರೆಯುವ ದೀಪ್ತಿಗೆ ಮಹಿಳೆಯಾಗಿ ಅಲ್ಲಿಯ ಶೋಷಣೆ ನೋವುಗಳನ್ನು ಹಟಕ್ಕೆ ಬಿದ್ದು ವರ್ಣಿಸುವ ಉತ್ಸಾಹವಿಲ್ಲ. ಸ್ತ್ರೀವಾದ ಚಿಂತನೆಯ ಎಳೆಗಳು ಕವಿತೆಯ ಭಾಗವಾಗಿ ಸಹಜವಾಗಿ ಗೋಚರಿಸುತ್ತವೆಯೇ ಹೊರತು ಯಾವ ಕವಿತೆಯೂ ಅದರ ಮುಖವಾಣಿಯಾಗುವುದಿಲ್ಲ” ಎಂದು ಕವಿತೆಗಳ ಒಳನೋಟವನ್ನು ತೆರೆದಿಟ್ಟಿದ್ದಾರೆ.
ದೀಪ್ತಿ ಭದ್ರಾವತಿ -ದಕ್ಷಿಣ ಕನ್ನಡದ ಮರವಂತೆ ಮೂಲದವರು. ಚಿಕ್ಕಮಂಗಳೂರಿನ ನಕ್ಕರಿಕೆ ಎಂಬ ಕುಗ್ರಾಮದಲ್ಲಿ ಹುಟ್ಟಿದ್ದು, ಹೆಸರು ಕೇವಲ ದೀಪ್ತಿ ಮಾತ್ರ ಆದರೆ ಭದ್ರಾವತಿಯ ಜೊತೆ ಅವಿನಾಭಾವ ಸಂಬಂಧ ಇರುವುದರಿಂದ ಹಾಗೂ ಅವರ ಜೀವನದಲ್ಲಿ ಬಾಲ್ಯದಿಂದ ಯೌವನದವರೆಗೆ ಭದ್ರಾವತಿಯ ಕೊಡುಗೆ ತುಂಬಾ ಇರುವುದರಿಂದ ದೀಪ್ತಿ ಭದ್ರಾವತಿ ಎಂಬ ಹೆಸರಿನಿಂದ ಕಾವ್ಯವನ್ನು ಬರೆಯುತ್ತಾರೆ. ದೀಪ್ತಿಯವರು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವೀಧರರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನೂ ಹಾಗೂ ಹಿಂದಿಯಲ್ಲಿ ವಿಶಾರದ ಪದವಿಯನ್ನು ಪಡೆದಿದ್ದಾರೆ. ಪದವಿಪೂರ್ವದಲ್ಲಿ ವಿಜ್ಞಾನದ ವಿದ್ಯಾರ್ಥಿನಿಯಾಗಿದ್ದ ಇವರಿಗೆ ಸಾಹಿತ್ಯ ಕ್ಷೇತ್ರದ ಆಕರ್ಷಣೆ ಬೇರೆ ಬೇರೆ ಪದವಿಗಳಿಗೆ ಅನುವು ಮಾಡಿಕೊಟ್ಟಿತ್ತು. ಪ್ರಸ್ತುತ ಸರಕಾರಿ ...
READ MORE