ಗ್ರಾಫಿಟಿಯ ಹೂವು

Author : ಆಕರ್ಷ ರಮೇಶ್ ಕಮಲ

Pages 88

₹ 90.00




Year of Publication: 2019
Published by: ಬಹುರೂಪಿ
Address: 1, ನಾಕುತಂತಿ, ಬಸಪ್ಪ ಲೇಜೌಟ್, ಆರ್.ಎಂ.ವಿ 2ನೇ ಹಂತ, ಸಂಜಯನಗರ, ಬೆಂಗಳೂರು -560094
Phone: 7019182729

Synopsys

ಕಿರುಚಿತ್ರ ನಿರ್ದೇಶಕ, ಕವಿ ಆಕರ್ಷ ರಮೇಶ್ ಕಮಲ ಅವರ ಮೊದಲ ಪ್ರಕಟಿತ ಕವನ ಸಂಕಲನ ’ಗ್ರಾಫಿಟಿಯ ಹೂವು’. 

ಕಾವ್ಯ ಶೈಲಿಯ ನಿರೂಪಣೆ, ಕವಿತೆಯ ವಸ್ತುಗಳ ಆಯ್ಕೆ ಇವರ ಕವಿತೆಗಳಲ್ಲಿ ಕೊಂಚ ವಿಭಿನ್ನವಾಗಿ ಕಾಣುತ್ತದೆ. ಇಲ್ಲಿರುವ ಕವಿತೆಗಳಿಗೆ ಯಾವುದೇ ಶೀರ್ಷಿಕೆಗಳಿಲ್ಲದ ಒಟ್ಟು 48 ಕವಿತೆಗಳ ಗುಚ್ಛ. 

’ಗ್ರಾಫಿಟಿಯ ಹೂವು’  ಕವಿಯು ಕಂಡುಂಡ ಅನುಭವಗಳ ಸುತ್ತ ಕವಿತೆಗಳನ್ನು ಕಟ್ಟುತ್ತಾರೆ. ನಗರ ಜೀವನದ ಅನುಭವಗಳು, ಸಹಜ-ಅಸಹಜನೀಯ ಭಾವಗಳ ಸುತ್ತ, ತಳಮಳ, ಒಂಟಿತನ, ನಗರ ಜೀವನದ ಯಾತನೆ, ಹೀಗೆ ಹಲವಾರು ವಸ್ತು ವಿಷಯಗಳ ಸುತ್ತ ಗ್ರಾಫಿಟಿಯ ಹೂವು ಸಂಚರಿಸ ತೊಡಗುತ್ತದೆ. ಇಲ್ಲಿರುವ ಬಹುತೇಕ ಕವಿತೆಗಳು ಕವಿಯೊಬ್ಬನ ಸ್ವಗತವಾಗಿರದೇ ನಗರ ಜೀವನಕ್ಕೆ ಬೇಸತ್ತು, ಒಳಬದುಕಿನ ಏಕಾಂತಕ್ಕೆ ಹಾತೊರೆಯಬಲ್ಲ ಮನಸ್ಸುಗಳಿಗೆ  ಕಾಡುತ್ತದೆ. 

 

About the Author

ಆಕರ್ಷ ರಮೇಶ್ ಕಮಲ
(18 December 1984)

ಆಕರ್ಷ ರಮೇಶ್ ಕಮಲ ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ತಂದೆ ಎಸ್. ರಮೇಶ್ ವಕೀಲರು. ತಾಯಿ - ಎಂ.ಆರ್. ಕಮಲ ಕನ್ನಡದ ಪ್ರಸಿದ್ದ ಕವಯತ್ರಿ, ಲೇಖಕಿ. ಅಮೆರಿಕಾದ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ವ್ಯಾಸಂಗವನ್ನು ಮಾಡಿ ಕೆಲಕಾಲ ಅಮೆರಿಕಾ, ಸ್ವಿಟ್ಸರ್ಲ್ಯಾಂಡ್, ಮತ್ತು ಫ್ರಾನ್ಸ್,  ದೇಶಗಳಲ್ಲಿ ನೆಲೆಸಿದ್ದರು.  ವೃತ್ತಿಯಲ್ಲಿ ಬೆಂಗಳೂರಿನ ಖಾಸಗೀ ಕಂಪೆನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಹಲವಾರು ಆಸಕ್ತಿಗಳತ್ತ ಮುಖ ಮಾಡಿರುವ ಆಕರ್ಷ ಪ್ರೆಸೆಂಟ್ ಸರ್, ಮರೀಚಿ ಎಂಬ ಕಿರುಚಿತ್ರಗಳನ್ನು ನಿರ್ದೇಶಿಸಿ ಸಿನೆಮಾ ರಂಗಕ್ಕೆ ಪ್ರವೇಶಿಸಿದ್ದಾರೆ. ಇವರ ಈ ಕಿರುಚಿತ್ರಗಳು ಅಂತರಾಷ್ಟ್ರೀಯ ಚಲನ ...

READ MORE

Conversation

Reviews

ಪಲ್ಲವಿ ವಿಬ್ಬೆ ಅವರು ಬರೆದಿರುವ ’ಗ್ರಾಫಿಟಿಯ ಹೂವು’ ಬಗೆಗಿನ ಓದಿನ ಟಿಪ್ಪಣೆ

ಗ್ರಾಫಿಟಿಯ ಹೂವು ಪುಸ್ತಕ ಬಿಡುಗಡೆ - ಅವಧಿ

ಚಾಂದ್ ಪಾಷಾ ಬರೆದಿರುವ ’ಗ್ರಾಫಿಟಿಯ ಹೂವು’ ಪುಸ್ತಕದ ವಿಮರ್ಶೆ

ಸಚಿನ್ ಅಂಕೋಲಾ ಬರೆದಿರುವ ಅನಿಸಿಕೆ

ಪುಸ್ತಕ ಬಿಡುಗಡೆ ಕಾರ್ಯಕ್ರಮ

ಭಾವಗಳಿಗೆ ಚ್ಯುತಿ ತಾರದಂತೆ ಪದ್ಯ ಕಟ್ಟುವ ಶೈಲಿ ಮಹತ್ವದ್ದು. ಚಿಕ್ಕ ಸಾಲುಗಳಲ್ಲಿಯೇ ಹೇಳಬೇಕಾದ ಸಾರ ಅದರೊಳಗೆ ಹುದುಗಿದ್ದರೆ ಅದಕ್ಕಿಂತ ಮಿಗಿಲಾದ ಕೌಶಲವಿಲ್ಲ. ರಸ್ತೆಯಲ್ಲಿ, ಬಸ್ ನಿಲ್ದಾಣದಲ್ಲಿ, ಆಫೀಸಿನಲ್ಲಿ, ಹೊಟೇಲ್‌ಗಳಲ್ಲಿ ಹೀಗೆ ವಿವಿಧ ತಾಣಗಳಲ್ಲಿ ನಮಗಾದ ಅನುಭವಗಳನ್ನು ಮೆಲುಕು ಹಾಕುತ್ತಾ ಕೂತರೆ ತಾನಾಗಿಯೇ ಪದಗಳು ಹುಟ್ಟುತ್ತವೆ. ಕವಿ ಆಕರ್ಷ ರಮೇಶ್ ಕಮಲ ಅವರು 'ಗ್ರಾಫಿಟಿಯ ಹೂವು' ಸಂಕಲನದಲ್ಲಿ ಇಂತಹ ಪ್ರಯತ್ನ ಮಾಡಿದ್ದಾರೆ. ವಿದೇಶದಲ್ಲಿ ತಮಗಾದ ಅನುಭವ, ಅಲ್ಲಿನ ಆಚಾರ-ವಿಚಾರ, ಜನರೊಂದಿಗಿನ ಗುದ್ದಾಟಗಳನ್ನು ಕವಿತೆಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಆಧುನಿಕ ಬದುಕಿಗೆ ಕನ್ನಡಿ ಹಿಡಿದಂತೆ ತೂಗುತ್ತವೆ ಇಲ್ಲಿನ ಪದ್ಯಗಳು. ನಿತ್ಯ ಬದುಕಿನಲ್ಲಿ ಎದುರಾಗುವ ಸನ್ನಿವೇಶಗಳನ್ನು ಆಧರವಾಗಿಟ್ಟುಕೊಂಡು ಒಮ್ಮೆ ವ್ಯಂಗ್ಯವಾಗಿ ರಂಜಿಸಿದರೆ, ಮಗದೊಮ್ಮೆ ಗಾಢ ಚಿಂತನೆಗೆ ಹಚ್ಚುತ್ತವೆ. ನಮ್ಮ ಯೌವ್ವನ ಮತ್ತು ಮುಪ್ಪಿನ ಹಂತವನ್ನು ಕವಿ ಒಂದು ಅಂಗಿಯ ಉದಾಹರಣೆಯೊಂದಿಗೆ ಹೋಲಿಸುತ್ತಾ ಓದುಗರ ಮನ ಮುಟ್ಟುತ್ತಾರೆ. ಅವರ ವಿಮಾನ ಪ್ರಯಾಣದಲ್ಲಿ ಕಂಡ ಭೂದೃಶ್ಯವನ್ನು ಬೇಸರದಿಂದ ವಿವರಿಸಿದ್ದಾರೆ. ತಾಂತ್ರಿಕ ಯುಗದಲ್ಲಿ ಪ್ರಕೃತಿಗೆ ಆಗುತ್ತಿರುವ ಗಾಯ, ಕರಗುತ್ತಿರುವ ಬೆಟ್ಟ-ಗುಟ್ಟಗಳು ಹೀಗೆ ನಿಸರ್ಗ ವಿನಾಶದ ಬಗ್ಗೆ ಕಳವಳದ ದನಿ ಕವಿತೆಯಲ್ಲಿ ವ್ಯಕ್ತಗೊಂಡಿದೆ. 'ಮಹಾಸಾಗರದಲ್ಲಿ ಕಣ್ಣೀರೆ ನೀರಿನ ಮೂಲ' ಎನ್ನುವ ಸಾಲು ಮನಕಲಕುವಂತಿದೆ.

ಕಾರ್ಮಿಕ ಕುಟುಂಬದ ಮಗುವಿನ ಸ್ನಾನದ ಪರಿ ಮತ್ತು ಅಪಾರ್ಟ್‌ಮೆಂಟಿನಲ್ಲಿ ಶವರ್ ಕೆಳಗೆ ನಿಂತು ಉಳ್ಳವರ ಮಗು ಮಾಡುವ ಸ್ನಾನದ ಬಗೆಯನ್ನು ವಿವರಿಸುತ್ತಾ, ಎರಡೂ ಕುಟುಂಬಗಳ ಸ್ಥಿತಿ, ಸಮಯ ಮತ್ತು ಆ ಕ್ಷಣವನ್ನು ಹೇಗೆ ಕಳೆಯುತ್ತಾರೆ ಎಂಬ ದೃಶ್ಯವನ್ನು ಕಣ್ಣಿಗೆ ಕಟ್ಟಿಕೊಡುವಂತೆ ಅಕ್ಷರಗಳಲ್ಲಿ ಚಿತ್ರಿಸಿದ್ದಾರೆ. - “ಅವಳು ಕವಿತೆ ಬರೆದುಕೊಡಿ ಎಂದರೆ' ಕವಿತೆಯಲ್ಲಿ ಪ್ರೇಯಸಿಗೆ ಹೇಗೆ ಕವಿತೆ ಬರೆದುಕೊಡಬೇಕೆಂಬ ಟಿಪ್ಸ್ ನೀಡುತ್ತಾ ಓದುಗರಲ್ಲಿ ಕಿರುನಗೆಯನ್ನೂ ಮೂಡಿಸಿದ್ದಾರೆ.

ಕೃಪೆ: ಪ್ರಜಾವಾಣಿ (2020 ಜನವರಿ 26)

Related Books