`ಗೋಪಿ ಮತ್ತು ಗಾಂಡಲೀನ-50' ಕವಿ ಬಿ.ಆರ್. ಲಕ್ಷ್ಮಣರಾವ್ ಅವರು ಬರೆದ ಕವನ ಸಂಕಲನಕ್ಕೆ ಇದೀಗ 50 ವರ್ಷ. ವಿಮರ್ಶಕ ಕೆ. ಸತ್ಯನಾರಾಯಣ ಅವರು ಈ ಕೃತಿಯ ಕುರಿತು ಬರೆಯುತ್ತಾ, ‘ವಿಮರ್ಶೆ, ವ್ಯಾಖ್ಯಾನ, ಅಭಿಪ್ರಾಯಗಳಿಗೆ ಯಾವ ರೀತಿಯ ಪಾತ್ರವೂ ಇಲ್ಲ. ಹೀಗಿದ್ದೂ ಕವಿ, ಪ್ರಕಾಶಕ ಇಬ್ಬರಿಗೂ ಹೊಸ ತಲೆಮಾರಿನವರ ಸ್ಪಂದನವನ್ನು ಕೂಡ ಈ ಸಂಭ್ರಮದ ಭಾಗವನ್ನಾಗಿ ಮಾಡಿಕೊಳ್ಳಬೇಕೆಂಬ ಭಾವನೆ ಇರುವುದು ಕಾವ್ಯರಸಿಕರ, ಕಾವ್ಯಲೋಕದ ಭವಿಷ್ಯದ ದೃಷ್ಟಿಯಿಂದ ಆಶಾದಾಯಕವಾದದ್ದು’ ಎಂದು ಅಭಿಪ್ರಾಯಪಟ್ಟಿದ್ದಾರೆ. . ಹೊಸ ತಲೆಮಾರಿನ ಸ್ಪಂದನದೊಂದಿಗೆ ಎಂಬ ಉಪಶೀರ್ಷಿಕೆಯೊಂದಿಗೆ ಮತ್ತೇ ಈ ಕವನ ಸಂಕಲನ ಪ್ರಕಟಗೊಂಡಿದ್ದು, ಅಂದಿನ ತಾಜಾತನ ಉಳಿಸಿಕೊಂಡಿದ್ದು ಈ ಕವನ ಸಂಕಲನದ ವೈಶಿಷ್ಟ್ಯ.
ಕವಿ, ಕತೆಗಾರ, ವಿಮರ್ಶಕ ಹಾಗೂ ಚಲನಚಿತ್ರಕಾರ ಬಿ.ಆರ್. ಲಕ್ಷ್ಮಣರಾವ್ ಅವರು 1946 ಸೆಪ್ಟೆಂಬರ್ 9ರಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಗಟ್ಟ ತಾಲ್ಲೂಕಿನ ಚೀಮಂಗಲದಲ್ಲಿ ಜನಿಸಿದರು. ತಂದೆ ರಾಜಾರಾವ್. ತಾಯಿ ವೆಂಕಟಲಕ್ಷ್ಮಮ್ಮ. ಚಿಂತಾಮಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಚಿಂತಾಮಣಿಯ ಪ್ರೌಢಶಾಲೆ ಉಪಾಧ್ಯಾಯರಾಗಿ ವೃತ್ತಿ ಆರಂಭಿಸಿದ ಇವರು ವಿನಾಯಕ ಟುಟೋರಿಯಲ್ಸ್ನ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಲಿಲ್ಲಿ ಪುಟ್ಟಿಯ ಹಂಬಲ, ಶಾಂಗ್ರಿ-ಲಾ, ಅಪರಾಧಂಗಳ ಮನ್ನಿಸೊ, ಗೋಪಿ ಮತ್ತು ...
READ MORE