ಗೂಡು ಕಟ್ಟಿದ ಹಕ್ಕಿ

Author : ಕಾ.ವೆಂ. ಶ್ರೀನಿವಾಸಮೂರ್ತಿ

Pages 80

₹ 50.00




Year of Publication: 2011
Published by: ಬರಹ ಪಬ್ಲಿಷಿಂಗ್‌ ಹೌಸ್
Address: #119, 3ನೇ ತಿರುವು, 8ನೇ ಮುಖ್ಯರಸ್ತೆ, ಹಂಪಿನಗರ ಆರ್.ಪಿ.ಸಿ ಲೇಔಟ್ \nಬೆಂಗಳೂರು- 04\n
Phone: 8023409512

Synopsys

 ‘ಗೂಡು ಕಟ್ಟಿದ ಹಕ್ಕಿ’ ಕೃತಿಯು ಕಾ.ವೆಂ. ಶ್ರೀನಿವಾಸಮೂರ್ತಿ ಅವರ ಭಾವಗೀತಾ ಕವನಸಂಕಲನವಾಗಿದೆ.  ಕಳೆದುಹೋದಂತಹ ಉತ್ತಮ ನಡವಳಿಕೆಗಳು ಮತ್ತು ಮನುಷ್ಯರಲ್ಲಿರಬೇಕಾದ ಸದ್ಗುಣಗಳೆಲ್ಲ ಮರಳಿ ಬರಲೆಂಬ ಆಶಯ ಇಲ್ಲಿದೆ. ಜಗತ್ತೇಕೆ ಹೀಗೆ ಬದಲಾವಣೆ ಕ೦ಡಿದೆ ಮತ್ತು ಅದು ಕೆಡುಕಿನೆಡೆಗೇ ಯಾಕೆ ಹೆಜ್ಜೆ ಹಾಕುತ್ತಿದೆ ಎಂಬುದು ಪ್ರಶ್ನೆಯಾದರೆ ಅದಕ್ಕುತ್ತರವಾಗಿ ಬೇವು ಬಿತ್ತಿದರೆ ಮಾವು ಬೆಳೆಯುವುದೇ ಎಂಬ ಪ್ರಶ್ನೆ ತಿರುಗುಬಾಣವಾಗಿ ಬರುತ್ತದೆ. ಮಾನವನೇ ಎಸಗಿದ ಅಕೃತ್ಯ- ಕುಕೃತ್ಯ ಗಳಿಂದಲೇ ನಮ್ಮ ಪರಿಸರ ಹಾನಿಗೊಳ್ಳುತ್ತಿರುವುದೆಂದು ಕೆಲ ಕವಿತೆಗಳು ಹೇಳಿದರೆ, ಭೂಮಿಯ ಮಕ್ಕಳೆಲ್ಲ ಒಂದೇ ಆಗಿದ್ದರೂ ಮನುಷ್ಯರಲ್ಲಿ ಬೇರೂರಿದ ಹೊಣೆಗೇಡಿತನ, ಮತೀಯ ಭಾವನೆಯಂಥ ಸೂಕ್ಷ್ಮ ವಿಚಾರಗಳಿಂದಾಗುವ ಅನಾಹುತಗಳನ್ನು ಇತರ ಪದ್ಯಗಳು ಎತ್ತಿತೋರುತ್ತಿವೆ. ಬುದ್ಧಿವಂತನಾದ ಮಾನವ ಸ್ವಲ್ಪ ವಿವೇಕದಿಂದ ವರ್ತಿಸಿದರೆ ಬಹಳಷ್ಟು ಕೆಡುಕುಗಳಿಂದ ಪಾರಾಗಬಹುದೆಂಬ ಸಂದೇಶ ಕವಿತೆಗಳಲ್ಲಿ ಅಡಕವಾಗಿದೆ.

About the Author

ಕಾ.ವೆಂ. ಶ್ರೀನಿವಾಸಮೂರ್ತಿ
(06 September 1969)

ಡಾ. ಕಾ. ವೆಂ. ಶ್ರೀನಿವಾಸಮೂರ್ತಿ ಅವರು ಬೆಂಗಳೂರು ಉತ್ತರಕಾವಲು ಭೈರಸಂದ್ರದವರು. ಉಪನ್ಯಾಸಕರಾಗಿದ್ದಾರೆ. ಚಂದ್ರತಾರೆ ಊರಿನಲ್ಲಿ, ಹೃದಯ ವಿಹಾರಿ, ಬದುಕು, ಕಾವ್ಯಕೋಗಿಲೆ, ನಿತ್ಯಶ್ರಾವಣ, ಅಭಿಮಾನದ ಹಣತೆ, ಮಣ್ಣಿನ ದೋಣಿ, ಆಯ್ದ ಭಾವಗೀತೆಗಳು (ಕಾವ್ಯ), ನೆಲದ ಕಣ್ಣ, ಮೌನ ಮಾತಾದಾಗ, ಕನ್ನಡ ರಂಗಭೂಮಿ, ಕನ್ನಡ ಚಳುವಳಿ ಮತ್ತು ಚಿಂತನ, ಉರಿಯಪೇಟೆ (ವಿಮರ್ಶೆ), ಕನ್ನಡ ಸಾಹಿತ್ಯ ಮತ್ತು ಕರ್ನಾಟಕತ್ವ, ಅಭಿರಾಮ, ಕನ್ನಡ ಭೇರಿ, ಬಂಡಾಯ ಕಾಲು ಶತಮಾನ (ಸಂಪಾದನೆ), ಕನ್ನಡ ಕಾವ್ಯದಲ್ಲಿ ನಾಡು ನುಡಿ ಚಿಂತನೆ (ಪಿಎಚ್‌ಡಿ ಮಹಾಪ್ರಬಂಧ). ...

READ MORE

Reviews

(ಹೊಸತು, ಫೆಬ್ರವರಿ 2012, ಪುಸ್ತಕದ ಪರಿಚಯ)

ಇಂದಿನ ಮನುಷ್ಯನಿಗೆ ಸದ್ಭಾವನೆಗಳು - ಸದಾಶಯಗಳು ಉಂಟಾಗಲೆಂದು ಹಾರೈಸಿ ಬರೆದ ಈ ಭಾವಗೀತೆ-ಕವಿತೆಗಳು ನಾವಿಂದು ಬದುಕುತ್ತಿರುವ ಪರಿಸ್ಥಿತಿಯಲ್ಲಿ ಅವೆಲ್ಲ ಇಲ್ಲವೆಂಬ ಸತ್ಯವನ್ನು ಮನಗಾಣಿಸುತ್ತವೆ, ಕಳೆದುಹೋದಂತಹ ಉತ್ತಮ ನಡವಳಿಕೆಗಳು ಮತ್ತು ಮನುಷ್ಯರಲ್ಲಿರಬೇಕಾದ ಸದ್ಗುಣಗಳೆಲ್ಲ ಮರಳಿ ಬರಲೆಂಬ ಆಶಯ ಇಲ್ಲಿದೆ. ಜಗತ್ತೇಕೆ ಹೀಗೆ ಬದಲಾವಣೆ ಕ೦ಡಿದೆ ಮತ್ತು ಅದು ಕೆಡುಕಿನೆಡೆಗೇ ಯಾಕೆ ಹೆಜ್ಜೆ ಹಾಕುತ್ತಿದೆ ಎಂಬುದು ಪ್ರಶ್ನೆಯಾದರೆ ಅದಕ್ಕುತ್ತರವಾಗಿ ಬೇವು ಬಿತ್ತಿದರೆ ಮಾವು ಬೆಳೆಯುವುದೇ ಎಂಬ ಪ್ರಶ್ನೆ ತಿರುಗುಬಾಣವಾಗಿ ಬರುತ್ತದೆ. ಮಾನವನೇ ಎಸಗಿದ ಅಕೃತ್ಯ- ಕುಕೃತ್ಯ ಗಳಿಂದಲೇ ನಮ್ಮ ಪರಿಸರ ಹಾನಿಗೊಳ್ಳುತ್ತಿರುವುದೆಂದು ಕೆಲ ಕವಿತೆಗಳು ಹೇಳಿದರೆ, ಭೂಮಿಯ ಮಕ್ಕಳೆಲ್ಲ ಒಂದೇ ಆಗಿದ್ದರೂ ಮನುಷ್ಯರಲ್ಲಿ ಬೇರೂರಿದ ಹೊಣೆಗೇಡಿತನ, ಮತೀಯ ಭಾವನೆಯಂಥ ಸೂಕ್ಷ್ಮ ವಿಚಾರಗಳಿಂದಾಗುವ ಅನಾಹುತಗಳನ್ನು ಇತರ ಪದ್ಯಗಳು ಎತ್ತಿತೋರುತ್ತಿವೆ. ಬುದ್ಧಿವಂತನಾದ ಮಾನವ ಸ್ವಲ್ಪ ವಿವೇಕದಿಂದ ವರ್ತಿಸಿದರೆ ಬಹಳಷ್ಟು ಕೆಡುಕುಗಳಿಂದ ಪಾರಾಗಬಹುದೆಂಬ ಸಂದೇಶ ಕವಿತೆಗಳಲ್ಲಿ ಅಡಕವಾಗಿದೆ. ಈ ಸಂಕಲನದ ಕವಿ ಶ್ರೀ ಕಾ. ವೆ. ಶ್ರೀನಿವಾಸಮೂರ್ತಿ ಎಡಪಂಥೀಯ ಸಮಾಜವಾದೀ ದೃಷ್ಟಿಕೋನ ಉಳ್ಳವರು. ಕ್ರಾಂತಿಕಾರಿ ಹೋರಾಟದ ಬಗ್ಗೆ ಒಲವುಳ್ಳವರು. ಕನ್ನಡ ಪರವಾದ ಕಾಳಜಿ ಇವರಲ್ಲಿ ವಿಶೇಷವಾಗಿದ್ದು, ಇಲ್ಲಿನ ಕೆಲವು ಹಾಡುಗಳು ಪ್ರಸಿದ್ಧ ಗಾಯಕರಿಂದ ಹಾಡಲ್ಪಟ್ಟು, ಧ್ವನಿಸುರುಳಿಗಳಾಗಿ ಮೆಚ್ಚುಗೆ ಪಡೆದಿದ್ದು ವಿವಿಧ ಪತ್ರಿಕೆಗಳಲ್ಲೂ ಪ್ರಕಟವಾಗಿವೆ.

 

 

 

Related Books