ಗೊಂಬೆಯಾಟ ಶಂಕರಗೌಡ ಸಾತ್ಮಾರ ಅವರ ದ್ವಿತೀಯ ಕವನ ಸಂಕಲನ. ಈ ಸಂಕಲನದ ಬಹುತೇಕ ಕವನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಾತ್ಮಾರ ಅವರ ಕಾವ್ಯ ಆಪ್ತವಾಗುವುದು ಹಲವಾರು ಕಾರಣಕ್ಕಾಗಿ. ಪ್ರೀತಿ, ಪ್ರೇಮ, ರಾಜಕಾರಣ ಮುಂತಾದ ವಸ್ತು ವೈವಿದ್ಯತೆಗಳಿಂದ ಕೂಡಿದ ಇವರ ಕವಿತೆಗಳು ಸ್ವಾನುಭವವನ್ನೇ ನೆಲೆಯಾಗಿಸಿಕೊಂಡಿವೆ. ಸರಳ, ನೇರ, ಸ್ಪಷ್ಟ ಅಭಿವ್ಯಕ್ತಿಯೇ ಇವರ ಕಾವ್ಯದ ಪ್ರಧಾನ ಲಕ್ಷಣ. ಇವರ ಕಾವ್ಯಕ್ಕೆ ತಟ್ಟುವ ಗುಣವಿದೆ.
ಭಾರತ ಜ್ಞಾನ ವಿಜ್ಞಾನ ಸಮಿತಿ, ಬಂಡಾಯ ಸಾಹಿತ್ಯ ಸಂಘಟನೆ, ಸಮಾಜವಾದಿ ಅಧ್ಯಯನ ಕೇಂದ್ರ ಸಾಕ್ಷರತಾ ಆಂದೋಲನಗಳೊಟ್ಟಿಗೆ ಬೆಳೆದ ಸಾತ್ಮಾರ ಅವರ ಕಾವ್ಯದಲ್ಲಿ ಜೀವಪರ ನಿಲುವು ಸಹಜವಾಗಿ ಕಂಡು ಬರುತ್ತದೆ. ಸಾತ್ಮಾರ ಓರ್ವ ಕನಸುಗಾರ. ಅದ್ಭುತ ಕಾವ್ಯ ಸೃಷ್ಟಿಯ ಕನಸು ಕಾಣುತ್ತಾರೆ. ಕನಸು ಕಾಣುವ ಕವಿ ಸ್ಥಗಿತಗೊಳ್ಳಲಾರ. ಕಾವ್ಯ ಕಟ್ಟುವ ಕ್ರಿಯೆಯನ್ನು ಮುಂದುವರೆಸುತ್ತಾನೆ.