ಗಿರಿ ನವಿಲ ನೆನಪುಗಳು

Author : ಶಿವಲೀಲಾ ಹುಣಸಗಿ

Pages 124

₹ 155.00




Year of Publication: 2022
Published by: ಅನುಪ್ರಕಾಶನ
Address: ಸುಬ್ರಮಣ್ಯ ನಗರ, ಮೈಸೂರು

Synopsys

`ಗಿರಿ ನವಿಲ ನೆನಪುಗಳು’ ಶಿವಲೀಲಾ ಹುಣಸಗಿ ಅವರ ಮುಕ್ತಕಗಳ ಸಂಕಲನವಾಗಿದೆ. ಇಲ್ಲಿ ನಮ್ಮ ಸನಾತನ ಪರಂಪರೆಯ ಅನನ್ಯ ಪ್ರೇಮ ಸಂಕೇತವಾದ ರಾಧಾ ಕೃಷ್ಣರ ಅನುಬಂಧವನ್ನು ಲೇಖಕಿ ಅದ್ಭುತವಾಗಿ ಚಿತ್ರಿಸಿದ್ದಾರೆ, “ಅವರು ಕೊಳಲಾಗಿ ಮೀಟುವ ನಿನ್ನ ಗಾನಕೆ ಯುಗ ಯುಗಗಳು ತತ್ತರಿಸಿಹವು ನಿನ್ನಾಗಮನಕ್ಕ ಪ್ರೇಮವೆಂದೂ ಕಾಮವಲ್ಲ ನಾನಂತೂ ಅಹಲ್ಯೆ ಸೀತೆಯಲ್ಲ ನಿನ್ನ ಪ್ರಾಣ ಸಖಿ, ನೀ ಬಿತ್ತಿ ಬೆಳೆದ ಪ್ರೇಮಾನುರಾಗದ ದಾಸಿ ಎಂಬ ವಾಕ್ಯಗಳು ಪ್ರೇಮದ ವ್ಯಾಖ್ಯಾನವನ್ನು ಅಂತ್ಯಂತ ನಮರ್ಥವಾಗಿ ಅಭಿವ್ಯಕಿಸುತ್ತಿವೆ, ಜೊತೆಗೆ ಅವರು ಇಲ್ಲಿ ಇನ್ನೊಂದು ಮೂಲರೂಪ ಪ್ರಶ್ನೆಯನ್ನೆತ್ತಿದ್ದಾರೆ.

ಬೆತ್ತಲಾದ ಬಯಲಿಗೆ ಮಡಿಯುಂಟೆ?...ಖಗ ಮೃಗಗಳಿಗೆ ಅಂಗಿ ತೊಡಿಸಿದ್ದುಂಟೆ?.ತೊಟ್ಟಿಕ್ಕುವ ಹನಿಗಳು ಕಾದ ವಿರಹದೆದೆಯ ತಂಪಾಗಿಸಲು ಹವಣಿಸಿದಂತೆ ಪ್ರೇಮಾನುಭಾವ ಪ್ರೇಮವೆಂದರೆ ಶಕ್ತಿ. ಧೈರ್ಯ...ಪ್ರೇಮವೇ ಜಗತ್ತಿನ ಭಾಷೆ ಕಳೆದುಹೋಗುವದು ಪರಮ ಸುಖದ ಪರಮಾವಧಿ, ಪ್ರೇಮದ ಅಂತರ್ಯವನ್ನೆ ಬಗೆದು ಇಟ್ಟಿರುವಂತೆ ಈ ವಾಕ್ಯಗಳು ಇಡೀ ಪುಸ್ತಕದ ಆಶಯವನ್ನು ಅತ್ಯಂತ ಸಮರ್ಥವಾಗಿ ಬಿಂಬಿಸುತ್ತಿವೆ.

About the Author

ಶಿವಲೀಲಾ ಹುಣಸಗಿ

ಕವಯತ್ರಿ ಶಿವಲೀಲಾ ಹುಣಸಗಿ ಅವರು ಎಂ.ಎ, ಬಿ.ಎಡ್ ಪದವೀಧರರು. ಉತ್ತರ ಕನ್ನಡ ಜಿಲ್ಲೆಯ ಅರಬೈಲ್ ಗ್ರಾನಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ದ್ದಾರೆ. ಕಥೆ,ಕವನ,ಲಹರಿ,ಲೇಖನ, ಟಂಕಾ, ಹಾಯ್ಕುಗಳು, ರುಬಾಯಿ,ಗಝಲ್, ಪುಸ್ತಕ ವಿಮರ್ಶೆ, ಅಂಕಣ ರಹಗಳು, ಹಾಡುವುದು, ಓದುವುದು, ಚಿತ್ರಬಿಡಿಸುವುದು, ಉಪನ್ಯಾಸ, ನೃತ್ಯ, ರೇಡಿಯೋದಲ್ಲಿ ಸ್ವರಚಿತ ಕವನ ವಾಚನ, ಹಿರಿಯ ಸಾಹಿತಿ-ಕಲಾವಿದರ ಸಂದರ್ಶನ ನಡೆಸುವುದು, ಶಾಲಾ ಮಕ್ಕಳಿಗೆ ಅನುಕೂಲವಾಗುವ ಕಿರು ನಾಟಕಗಳು, ರೂಪಕಗಳು. ನಿರೂಪಣೆ.ಇತ್ಯಾದಿ ಇವರ ಹವ್ಯಾಸಗಳು. ಬೆಂಗಳೂರು, ಕಾರವಾರ, ಧಾರವಾಡ ಕೇಂದ್ರದಿಂದ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ.  ಮಕ್ಕಳಿಗೆ ವಿಶೇಷವಾಗಿ ಬಾಂಧವ್ಯದ ಮೆರಗು ಅಂಕಣ ಪ್ರಕಟಗೊಳ್ಳುತ್ತಿದೆ. ಶಿಕ್ಷಕರ ಕಲ್ಯಾಣ ನಿಧಿಯಿಂದ ನಡೆಸುವ ರಾಜ್ಯ  ಮಟ್ಟದ ಭಾಷಣ ಸ್ಪರ್ಧೆಯಲ್ಲಿ ...

READ MORE

Related Books