ಧಾರವಾಡ ಜಿಲ್ಲೆಯ ಒಂಬತ್ತನೇ ಸಾಹಿತ್ಯ ಸಮ್ಮೇಳನದ ನಿಮ್ಮಿತ್ತ ವಿವಿಧ ಕವಿಗಳ ಕಾವ್ಯ ಸಂಚಿಕೆ- ‘ಗಿಡಗಂಟೆಗಳ ಕೊರಳು’. ವಸ್ತುವಿನ ಮಿತಿ ಇಲ್ಲದ ಇವು ಕೇವಲ ಹಿತಾನುಭವದಿಂದ ಮೂಡಿ ಬಂದುವೆಂಬಂತೆ ಆಪ್ತಗೊಳ್ಳುತ್ತವೆ. ಚಿಗುರುತ್ತಿರುವ ಹರೆಯದ ಬರಹಕ್ಕೆ ಹಿರಿಯ ಬರಹಗಾರರ ಬೇರುಗಳು ಇಲ್ಲಿವೆ. ಈ ಕೃತಿಯನ್ನು ಚನ್ನಪ್ಪ ಅಂಗಡಿ ಅವರು ಸಂಪಾದಿಸಿದ್ದಾರೆ.
ಚನ್ನಪ್ಪ ಅಂಗಡಿ ಅವರು ಎಮ್ ಎಸ್ ಸಿ (ಕೃಷಿ) ಸಹಾಯಕ ಕೃಷಿ ನಿರ್ದೇಶಕರಾಗಿದ್ದಾರೆ. ಇವರು ಜನಿಸಿದ್ದು15.04.1970, ಬಮ್ಮನಹಳ್ಳಿ ಹಾವೇರಿ ಜಿಲ್ಲೆಯಲ್ಲಿ. ಮಂದ ಬೆಳಕಿನ ಸಾಂತ್ವನ, ಭೂಮಿ ತಿರುಗುವ ಶಬ್ದ (ಕವನಸಂಕಲನ), ಮಣ್ಣಿನೊಳಗಣ ಮರ್ಮ, ಕಿಬ್ಬದಿಯ ಕೀಲುಳುಕಿ (ಕಥಾಸಂಕಲನ), ಎದೆಯ ಒಕ್ಕಲಿಗ (ವೈಚಾರಿಕ), ಕೃಷಿ ಕಾರಣ ಸಂಪಾದನೆ : ಮಡಿಲು, ಕಾಯಕಯೋಗಿ, ಕದಂಬ, ಬಿತ್ತೋಣ ಹತ್ತಿ ಬೆಳೆಯೋಣ, ಗಿಡಗಂಟೆಗಳ ಕೊರಳು ಕೃತಿಗಳನ್ನು ರಚಿಸಿದ್ದಾರೆ. ಭೂಚೇತನ ಪ್ರಶಸ್ತಿ , ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಕಾವ್ಯ), ಮುದ್ದಣ ರತ್ನಾಕರವರ್ಣಿ ಅನಾಮಿಕ (ಕಸಾಪ) ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ, ...
READ MORE