ಗಂಡೊಂದು ಹೆಣ್ಣಾರು

Author : ಶಿವರಾಮಯ್ಯ

Pages 65

₹ 20.00




Year of Publication: 1976
Published by: ಕಲಾ ಪ್ರಕಶನ
Address: 3ನೇ ಮುಖ್ಯರಸ್ತೆ, ವಿಜಯನಗರ ಬಡವಣೆ, ಬೆಂಗಳೂರು. 560040

Synopsys

’ಗಂಡೊಂದು ಹೆಣ್ಣಾರು’ ಶಿವರಾಮಯ್ಯನವರ ಕವನ ಸಂಕಲನ.  ವಿವಿಧ ಸಂದಂರ್ಭದಲ್ಲಿ ರಚಿಸಿದ ಕವನಗಳನ್ನು ಈ ಸಂಕಲನದಲ್ಲಿ ನೀಡಲಾಗಿದೆ. ಈ ಪುಸ್ತಕದಲ್ಲಿ ಒಟ್ಟು 36 ಕವನಗಳಿದ್ದು, ’ಕವಿ ವಿಭೂತಿಗೆ ನಮೋ’, ’ಕಾಲ ಕೆಟ್ಟಿತು’, ಚೀನಿ ದುರಾಕ್ರಮಣ, ವಸ್ತ್ರಧಾರಿ, ಒಬ್ಬಂಟಿತನ, ಮುಂತಾದ ಕವನಗಳನ್ನೊಳಗೊಂಡಿದೆ.

About the Author

ಶಿವರಾಮಯ್ಯ
(10 August 1940)

ಪ್ರೊ. ಶಿವರಾಮಯ್ಯ ನವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕ್ ಅವಿನಮಡು ಗ್ರಾಮದಲ್ಲಿ 1940 ರ ಆಗಸ್ಟ್‌ 10ರಂದು ಜನಿಸಿದರು. ತಂದೆ ಕಂಪಲಪ್ಪ, ತಾಯಿ ಬೋರಮ್ಮ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ ಹಾಗೂ ಸಂಶೋಧನ ವೃತ್ತಿಯ ಜೊತೆಯಲ್ಲಿಯೇ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು. ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ.  ಸ್ವಪ್ನ ಸಂಚಯ (ಕವನ ಸಂಕಲನ), ಬೌದ್ಧ ಭಿಕ್ಷಣಿ (ಮಕ್ಕಳ ಪುಸ್ತಕ ), ಸಾಹಿತ್ಯ ಪರಿಸರ, ಉರಿಯ ಉಯಾಲೆ (ವಿಮರ್ಶೆ), ಹರಿಹರ-ರಾಘವಾಂಕ (ಜಾನಪದ ಅಧ್ಯಯನ), ದನಿ ಇಲ್ಲದವರ ದನಿ, ಕುದುರೆಮುಖ (ವೈಚಾರಿಕ), ಇವರ ಕೆಲವು ಪ್ರಕಟಿತ ಕೃತಿಗಳು. ''ನಾಡೋಜ ...

READ MORE

Related Books