'ಗಾಂಧಿ ನೆಟ್ಟ ಬಟ್ಟೆ' ಕವಿ ರಾಯಸಾಬ ಎನ್. ದರ್ಗಾದವರ ಅವರ ಚೊಚ್ಚಲ ಕವನ ಸಂಕಲನ. ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯ ಪಡೆದು ಪ್ರಕಟವಾಗಿದೆ. ಹಿರಿಯ ಲೇಖಕ ಕೇಶವ ಮಳಗಿ ಅವರು ಬೆನ್ನುಡಿ ಬರೆದು ‘ಕವಿತೆಗಳ ಕುರಿತು ಬರೆಯುತ್ತಾ 'ಇಲ್ಲಿರುವ ಕವಿತೆಗಳನ್ನು ಓದಿದರೆ ಮಂತ್ರ ಮುಗ್ಧತೆಗೆ ಒಳಗಾಗುವೆವು, ಗದ್ಯಲಯಕ್ಕೆ ಒಲಿದ ಅವರ ಕಾವ್ಯ ಉಜ್ವಲ ರೂಪಕಗಳನ್ನು ಹೊಂದಿಸುತ್ತ ಝಗ್ಗನೆ ಬೆಳಗುತ್ತದೆ. ನುಡಿಗಟ್ಟು, ವಸ್ತುವಿಷಯ ಹಳತಾದರೂ ಅದನ್ನು ಪ್ರಸ್ತುತಪಡಿಸುವ ನೇಕಾರಿಕೆ ಅಚ್ಚರಿ, ದಿಗ್ಬ್ರಮೆಯನ್ನು ಹುಟ್ಟಿಸುವವು . ಸೃಜನಶೀಲತೆಯ ಹಿಂದಿನ ಮರ್ಮ, ಮನುಷ್ಯನ ಆದಿಮ ಕೌರ್ಯ, ನಶಿಸುತ್ತಿರುವ ಹಳೆಯ ಲೋಳ, ಕೈಗೂಡದ ಅನುರಾಗ ಹೀಗೆ ಹತ್ತಾರು ವಿಷಯಗಳನ್ನು ಕವಿತೆಯಾಗಿಸಿದ ಪರಿ ಇಲ್ಲಿದೆ. ಕವಿಯ ಅಪ್ಪಟ ಕಸಬುದಾರಿಕೆಗೆ ಉಲ್ಲೇಖಿಸಬಹುದಾದರೆ ಕೆಲವು ಸಾಲುಗಳು ಹೀಗಿದೆ; “ಬೆವರಿಗೂ ರಕುತಕೂ ವ್ಯತಾಸ ಅರಿಯದಷ್ಟು ಪಾಪಿಗಳಾಗಿದ್ದರು,’ ಉಸಿರುಗಟ್ಟಿಸಿ ನಗುವ ಭಾವಚಿತ್ರವನ್ನು ಸ್ಟೇಟಸ್ ಇಟ್ಟುಬಿಟ್ಟು ನಿತ್ಯ ಕಾರ್ಯದಲ್ಲಿ ತಲ್ಲಿನವಾಗಿಬಿಡಬಹುದು" “ನೆತ್ತಿ ಮೇಲೆ ಇಟ್ಟ ಕತ್ತಿಗೂ ಒಂದು ಜಾತಿಯ ನಂಟಿದೆ” ಕವಿಯೊಬ್ಬನ ಮೊದಲ ಸಂಕಲನದಲ್ಲಿ ಹತ್ತು ಭರವಸೆಯ ಕವಿತೆಗಳಿದ್ದರೆ ಆತ ಮುಂದೆ ತೆಗೆಯಬಹುದಾದ ಫಸಲಿನ ಕಾಳಿನ ಗುಣಮಟ್ಟ ಅತ್ಯತ್ತಮವೆನಿಸುತ್ತದೆ' ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ರಾಯಸಾಬ ಎನ್ ದರ್ಗಾದವರ ಅವರು ಮೂಲತಃ ಹುಬ್ಬಳ್ಳಿ ತಾಲೂಕಿನ ಕಟ್ನೂರು ಗ್ರಾಮದವರು. ವೃತ್ತಿಯಿಂದ ಹುಬ್ಬಳ್ಳಿ ಶಹರದ ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಪೇದೆಯಾಗಿ 2012 ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹುಬ್ಬಳ್ಳಿ ನೆಹರು ಕಾಲೇಜಿನಿಂದ ಪದವೀಧರರು. ಕತೆ, ಕವಿತೆ ಬರೆಯುವ ಮೂಲಕ ಸಾಹಿತ್ಯಿಕವಾಗಿ ತಮ್ಮನ್ನುಗುರುತಿಸಿಕೊಂಡಿದ್ದಾರೆ. ದಿನಪತ್ರಿಕೆ, ವೆಬ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವರ ಕವಿತೆಗಳು "ಕಾವ್ಯದ ಹುಳು"ತಂಡದವರು ನಡೆಸಿಕೊಡುವ 'ಚಿತ್ರ ನೋಡಿ ಕವಿತೆ ಬರೆಯಿರಿ' ಸ್ಪರ್ಧೆಯಲ್ಲಿ ದ್ವಿತೀಯ ಮತ್ತು ಕನ್ನಡ ಕಲರವ ಮತ್ತು ಅವ್ವ ಪುಸ್ತಕಾಲಯದವರು ನಡೆಸಿದ ಕಾವ್ಯ ಸ್ಪರ್ಧೆಯಲ್ಲಿ ಟಾಪ್ 5 ಸರಣಿಯಲ್ಲಿ ಬಹುಮಾನ ಪಡೆದಿವೆ. ...
READ MORE