‘ಗಂಡ ಹೆಂಡರ ಜಗಳ ಗಂಧ ತಿಡಿದ್ಹಾಂಗ’ ಕೃತಿಯು ಸೋಮಶೇಖರ ಇಮ್ರಾಪುರ ಅವರ ಕಾವ್ಯಸಂಕಲನವಾಗಿದೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ ದೊರಕಿರುತ್ತದೆ. ಸಂಬಂಧಗಳ ನಡುವಿನ ಜಗಳ, ವೈವಾಹಿಕ ಜೀವನದಲ್ಲಿ ಗಂಡ ಹೆಂಡತಿ ಅನುಭವಿಸುವ ಕೆಲವೊಂದು ಕಷ್ಟಗಳನ್ನು ಇಲ್ಲಿ ಕಾವ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ ಸೋಮಶೇಖರ ಇಮ್ರಾಪುರ.
ಜನಪದ ತಜ್ಞ, ಕವಿ ಸೋಮಶೇಖರ ಇಮ್ರಾಪುರ ಅವರು 1940 ಫೆಬ್ರುವರಿ 14 ರಂದು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಅಬ್ಬಿಗೇರಿಯಲ್ಲಿ ಜನಿಸಿದರು. ತಾಯಿ ಸಂಗವ್ವ, ತಂದೆ ಗುರಪ್ಪ. ಅಬ್ಬಿಗೇರಿಯಲ್ಲಿ ಪ್ರಾಥಮಿಕ -ಪ್ರೌಢಶಿಕ್ಷಣ ಪಡೆದ ನಂತರ ಅವರು ಧಾರವಾಡದಲ್ಲಿ ಶಿಕ್ಷಣ ಮುಂದುವರಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಹಾಗೂ ಭಾಷಾ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ನಂತರ ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಅಧ್ಯಾಪಕರಾಗಿ, ತದನಂತರ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ ಪಡೆದರು. ಗ್ರಂಥ ಸಂಪಾದನೆ, ಕಥೆ, ಕವನ, ವಿಮರ್ಶೆ ಇವರ ಆಸಕ್ತಿ ವಲಯವಾಗಿತ್ತು. ಕೆಲಕಾಲ ದಲಿತ ದ್ವೈ ಮಾಸಿಕ ಪತ್ರಿಕೆ ಸಂಪಾದಕರಾಗಿದ್ದರು. . ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ - 1971