ಲೇಖಕಿ ಶ್ರೀದೇವಿ ಹೂಗಾರ ಅವರ ಕವನ ಸಂಕಲನ-ಎಲ್ಲರ ಒಡಲಲ್ಲೂ ಕಣ್ಣೀರ ಕಡಲು’. ಒಟ್ಟು 63 ಕವಿತೆಗಳಿವೆ. ಕನ್ನಡಮನ ಕಂದಮ್ಮಗಳು, ತಬ್ಬಲಿಗಳು, ನಾವು ನನ್ನ ಸರ್ಕಾರಿ ಶಾಲೆ,ಅನಾಥ ಶಿಶುಗಳು,ಕಂಬನಿಯ ಎಂಬ ವಾಸ್ತವದ ಬೆಳಕು, ನನ್ನ ಹೆಸರು ಕವಿ ಎಂದು,ದಿಕ್ಕಿಲ್ಲದ ಮಕ್ಕಳು,ಕಾವ್ಯದ ಕಡಲು ಎದೆಯ ಹಾಡು,ತೋಳಿನ ಜೋಳಿಗೆ, ತಬ್ಬಲಿಗಳು, ಹೃದಯ ಸಪ್ಪಳ, ಗುಡಿಸಲ ಮಡಿಲು ಹೀಗೆ ಹಲವಾರು ಕವಿತೆಗಳು ಓದುಗರ ಗಮನ ಸೆಳೆಯುತ್ತವೆ. ಕಾವ್ಯಗಳಲ್ಲಿ ನೋವಿದೆ, ನಲಿವಿದೆ,ಹುಡುಕಾಟವಿದೆ. ಜೀವನದಲ್ಲಿ ಅಲೆಗಳ ಹಾಗೆ ಒಂದಾದ ನಂತರ ಇನ್ನೊಂದರಂತೆ ಬರುವ ಕಷ್ಟಗಳಿವೆ. ಎಲ್ಲವೂ ಸಹಿಸಿ ಸಮಾಧಾನ ಪಡುವಂತೆ ಕವಿತೆ ಆಪ್ತವಾಗುತ್ತವೆ.
ಕವಯತ್ರಿ ಶ್ರೀದೇವಿ ಬಿ. ಹೂಗಾರ ಅವರು ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಮತ್ಕಟ್ಟಿ ಗ್ರಾಮದವರು. ತಂದೆ ವೀರಣ್ಣ ಹೂಗಾರ ತಾಯಿ ನೀಲಮ್ಮ. ಎಂ.ಎ. ಹಾಗೂ ಪಿ.ಎಚ್.ಡಿ ಪದವೀಧರರು. ವೃತ್ತಿಯಲ್ಲಿ ಸರ್ಕಾರಿ ಶಿಕ್ಷಕಿ. ದೇಶಪಾಂಡೆ ಸಾಹಿತ್ಯಕ, ಸಾಂಸ್ಕೃತಿಕ ಪ್ರತಿಷ್ಠಾನದಿಂದ ಅವರಿಗೆ ಆದರ್ಶ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. `ಎಲ್ಲರ ಒಡಲಲ್ಲೂ ಕಣ್ಣೀರ ಕಡಲು’ ಅವರ ಇತ್ತಿಚಿನ ಕೃತಿ. ...
READ MORE