ಈವರೆಗಿನ ಕವಿತೆಗಳು

Author : ಸಬಿಹಾ ಭೂಮಿಗೌಡ

Pages 184

₹ 160.00




Year of Publication: 2020
Published by: ಕವಿ ಪ್ರಕಾಶನ
Address: ಕವಲಕ್ಕಿ. ಹೊನ್ನಾವರ ತಾಲೂಕು, ಉತ್ತರಕನ್ನಡ ಜಿಲ್ಲೆ
Phone: 9480211320

Synopsys

ಕವಯತ್ರಿ ಸಬಿಹಾ ಭೂಮಿಗೌಡ ಅವರ ಪ್ರಕಟಿತ ಹಾಗೂ ಪ್ರಕಟವಾಗದೇ ಉಳಿದು ಅಲ್ಲಲ್ಲಿ ಚದುರಿಹೋದ ಕವನಗಳನ್ನೆಲ್ಲ ಒಟ್ಟುಗೂಡಿಸಿದ ಪ್ರಯತ್ನ -ʼಈವರೆಗಿನ ಕವಿತೆಗಳುʼ. ವಾನಪ್ರಸ್ತ, ಗೌರೀ ದುಃಖ, ನುಗ್ಗೆ ಮರ, ಸಖಿ, ಅವ್ವನಿಗೆ, ಮಮ್ತಾಜ್‌ ಮತ್ತು ಕನ್ನಡ, ಕರವಸ್ತ್ರ, ಶಿವಮ್ಮ, ಇನ್ನು ಹಲವು ಕವನಗಳು ಇಲ್ಲಿವೆ. ಈ ಕವನ ಸಂಕಲನಕ್ಕೆ ಲೇಖಕಿ ಡಾ. ದು. ಸರಸ್ವತಿಯವರು ಬರೆದ ಮುನ್ನುಡಿಯಲ್ಲಿ, ʼಕವನಗಳು ಇದ್ದಲ್ಲೆ ಧ್ಯಾನಿಸಿ, ಒಳಗೊಳಗೆ ಗುದ್ದಾಡಿ, ಸೆಣಸಾಡಿ. ಬಡಿದಾಡಿ, ನೊಂದು-ಬೆಂದು, ಒಂದು ಹದ ಕಂಡುಕೊಳ್ಳುವಂತಹವಾಗಿವೆʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.

 

About the Author

ಸಬಿಹಾ ಭೂಮಿಗೌಡ
(04 July 1959)

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿರುವ ಸಬಿಹಾ ಭೂಮಿಗೌಡ ಮೂಲತಃ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಜೇಂದ್ರಗಡದವರು.  ತಂದೆ ಎಂ.ಆರ್. ಗಜೇಂದ್ರಗಡ, ತಾಯಿ ಸಾಹಿರಾ. ಎಂ.ಎ., ಪಿಎಚ್.ಡಿ. ಪಡೆದು ಪ್ರಾಧ್ಯಾಪಕಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು, ಕರಾವಳಿ ಲೇಖಕಿಯರು ಮತ್ತು ವಾಚಕಿಯರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಗೆ (ವಿಮರ್ಶೆ) 2001, ಚಿತ್ತಾರ (ಕಾವ್ಯ) 2004, ಕನ್ನಡ ಭಾಷಾ ಪ್ರವೇಶ (ಸಹಲೇಖಕರೊಂದಿಗೆ) 2005, ನಿಲುಮೆ (ವಿಮರ್ಶೆ) 2005, ನುಡಿಗವಳ ...

READ MORE

Related Books