`ಈ ಮಣ್ಣು ಅಪ್ಪಿಕೊಳ್ಳುವ ಮುನ್ನ’ ಗವಿಸಿದ್ಧ ಎನ್ ಅವರ ಕವನಸಂಕಲನವಾಗಿದೆ. ನೋವಿನ ಅಲೆಗಳಂತಿರುವ ನಿಜ ವಿಚಾರಗಳು, ನಿರ್ಗತಿಕರ ನೂರೊಂದು ಬವಣೆಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿ ಬಣ್ಣಿಸುವ ಇವು ಬಾಳಿನಲ್ಲಿ ನೋವುಗಳನ್ನೇ ಉಡುಗೊರೆಯಾಗಿ ಪಡೆದ ಹತಾಶ ವ್ಯಕ್ತಿತ್ವದ ಮನದಾಳದ ಸೂಕ್ಷ್ಮ ಅನಿಸಿಕೆಗಳು, ಹಾಗೆಂದು ತೀವ್ರ ನಿರಾಶೆಯೇನೂ ಇಲ್ಲ.
ಗವಿಸಿದ್ಧ ಎನ್.ಬಳ್ಳಾರಿ ಅವರು ಮೂಲತಃ ರಾಯಚೂರು ಜಿಲ್ಲೆಯ ಕೊಪ್ಪಳದವರು. ಸ್ಥಳೀಯ ಪತ್ರಿಕೆಯೊಂದನ್ನು ಸಂಪಾದಿಸಿದರು. ಜೊತೆಗೆ ಬಂಡಾಯ ಸಾಹಿತ್ಯದೊಡನೆಯು ಗುರುತಿಸಿಕೊಂಡಿದ್ದರು. ಅನೇಕ ಹೋರಾಟಗಳಲ್ಲಿಯು ಭಾಗವಹಿಸಿದ್ದಾರೆ. ಕೃತಿಗಳು: ಕತ್ತಲು ದೇಶದ ಪದ್ಯಗಳು, ಕಪ್ಪು ಸೂರ್ಯ ಪ್ರಶಸ್ತಿ: ರಾಜ್ಯ ಸರ್ಕಾರದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ. ...
READ MOREಹೊಸತು-2004- ಜೂನ್
ಇದೊಂದು ಬಂಡಾಯ ಕವಿತೆಗಳ ಸಂಕಲನ. ಜಗತ್ತಿಗೇ ಮಾರಕವಾಗಿ ನಿಂತಿರುವ ಮನುಷ್ಯನ ದುಷ್ಟತನಗಳ ವಿರುದ್ಧ ಧ್ವನಿಯೆಬ್ಬಿಸಿರುವ, ನೋವಿನ ಅಲೆಗಳಂತಿರುವ ನಿಜ ವಿಚಾರಗಳು, ನಿರ್ಗತಿಕರ ನೂರೊಂದು ಬವಣೆಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿ ಬಣ್ಣಿಸುವ ಇವು ಬಾಳಿನಲ್ಲಿ ನೋವುಗಳನ್ನೇ ಉಡುಗೊರೆಯಾಗಿ ಪಡೆದ ಹತಾಶ ವ್ಯಕ್ತಿತ್ವದ ಮನದಾಳದ ಸೂಕ್ಷ್ಮ ಅನಿಸಿಕೆಗಳು, ಹಾಗೆಂದು ತೀವ್ರ ನಿರಾಶೆಯೇನೂ ಇಲ್ಲ; ಕೈ ಚೆಲ್ಲಿ ಕೂರದೆ ಪ್ರತಿಯೊಬ್ಬನೂ ಅನ್ಯಾಯದ ವಿರುದ್ಧ ಬಂಡೇಳುವ ಅಗತ್ಯವನ್ನು ನೆನಪಿಸಿ ಭ್ರಷ್ಟ ವಿಚಾರಗಳನ್ನು ಖಂಡಿಸಲಾಗಿದೆ.