ಈ ಜಗವೇ ಬೊಮ್ಮಲಿಂಗನ ಸಗ್ಗ

Author : ವೈಲೇಶ್ ಪಿ. ಎಸ್

Pages 144

₹ 125.00




Year of Publication: 2021
Published by: ಬೊಮ್ಮಲಿಂಗೇಶ್ವರ ಪ್ರಕಾಶನ
Address: ವಿರಾಜಪೇಟೆ ತಾಲ್ಲೂಕು, ವಿರಾಜಪೇಟೆ,ತಾಲ್ಲೂಕು, ಕೊಡಗು ಜಿಲ್ಲೆ-571218

Synopsys

ಕವಿ ವೈಲೇಶ್ ಪಿ. ಎಸ್ ಅವರ ’ ಈ ಜಗವೇ ಬೊಮ್ಮಲಿಂಗನ ಸಗ್ಗ’ ಕೃತಿಯು ಕವನಸಂಕಲನವಾಗಿದೆ. ಸುಮಾರು 262 ಮುಕ್ತಕಗಳು ಇವೆ. ಈ ಮುಕ್ತಕಗಳ ವೈಶಿಷ್ಟ್ಯವೆಂದರೆ ಒಂದೇ ಬಂಧದಲ್ಲಿ ಎರಡು ಪದ್ಯಗಳನ್ನು ಕಾಣಬಹುದು. ಒಂದು ಕಡೆಯಿಂದ ನೋಡಿದರೆ ನಾಲ್ಕು ಸಾಲಿನ ಮುಕ್ತಕ ಚೌಪದಿಯು ಕಂಗೊಳಿಸಿದರೆ ಮತ್ತೊಂದು ಕಡೆಯಿಂದ ಆರು ಸಾಲಿನ ಷಟ್ಪದಿ ರಂಜಿಸುತ್ತದೆ. ಇದನ್ನು ಮುಕ್ತಕ ಕುಸುಮವೆಂದೂ ಕರೆಯಲಾಗಿದೆ. ಕವಿಗಳು ತಮ್ಮ ಧೀಃಶಕ್ತಿಯನ್ನು ತೋರಿಸಲು ಗರ್ಭ ಕವಿತೆ, ಉಭಯಸಮಾನಬಂಧ, ಸಮಸ್ಯಾಪೂರ್ಣ ಮುಕ್ತಕ, ಷಟ್ಪದಿ, ವೃತ್ತ, ಕಂದಕಗಳನ್ನು ವಿಭಿನ್ನವಾಗಿ ರಚಿಸುತ್ತಾರೆ. ಈ ಮುಕ್ತಕ ಕುಸುಮದಲ್ಲಿರುವ ಕವನಗಳು ಹೀಗಿವೆ: ಯೋಗವನು ಮಾಡುತಿಹ ಲೋಗರನು ನೋಡಿದೊಡೆ ರೋಗವದು ಕಾಣದಲೆ ಮಾಯವಾಯ್ತು ಯೋಗದೊಳ ಹಾದಿಯೊಳು ಭಾಗ್ಯವನು ಪಡೆಯಲದು ಭಾಗಿಯಾಗಿರಿ ನೀವು ಬೊಮ್ಮಲಿಂಗ ಇಲ್ಲಿ ಕವಿಯು ಒಂದೇ ಮುಕ್ತಕದಲ್ಲಿ ಭೂತಾಯಿ ನವತರುಣಿ, ಸೂರ್ಯದೇವ ನವತರುಣ ಇವರೀರ್ವರೂ ಮೋಹದಲ್ಲಿ ಕಾಯುತ್ತಿದ್ದಾರೆ. ಮಳೆರಾಯ ಭುವಿಗಿಳಿದಾಗ ಸಂತಾನೋತ್ಪತ್ತಿ ವೃದ್ಧಿಸುತ್ತದೆ. ಜೀವಿಗಳೆಲ್ಲರು ಹರ್ಷದಿಂದ ಫಲವನ್ನು ಸವಿಯುತ್ತಾ ಆನಂದಿಸುತ್ತವೆಂದು ತಿಳಿಸಿದ್ದಾರೆ. ಕವಿಗಳ ಪದ ಜೋಡಣೆ ಸುಲಲಿತವಾಗಿ ಹೊರಹೊಮ್ಮಿರುವುದು ಇಲ್ಲಿ ಕಾಣುತ್ತದೆ. ಅತಿಯಾದರೆ ಅಮೃತವು ವಿಷವೆಂಬಂತೆ ಇತಿಮಿತಿಯಲ್ಲಿ ಕೃತಿಯನ್ನು ಸಂಕ್ಷಿಪ್ತವಾಗಿ ಉಲ್ಲೇಖಿಸಿದ್ದಾರೆ.

About the Author

ವೈಲೇಶ್ ಪಿ. ಎಸ್

ಲೇಖಕ ವೈಲೇಶ್ ಪಿ. ಎಸ್ ಅವರು ಮೂಲತಃ ಕೊಡಗಿನವರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರಾಗಿದ್ದಾರೆ.   ಕೃತಿಗಳು: ಅಮ್ಮ ನಿನಗಾಗಿ (2018) , ಕಣ್ಮರೆಯಾದ ಹಳ್ಳಿ(2020), ಬೊಮ್ಮಲಿಂಗನ ಸಗ್ಗ(2021) (ಕವನಸಂಕಲನ) ...

READ MORE

Related Books