ಲೇಖಕ ಆಲೂರು ದೊಡ್ಡನಿಂಗಪ್ಪ ಅವರ ಕವನ ಸಂಕಲನ 'ಎದೆಯ ಹೊಲದಲ್ಲಿ ಸೂರ್ಯಕಾಂತಿ'. ಕೃತಿಗೆ ಮುನ್ನುಡಿ ಬರೆದ ಸುನಂದಾ ಪ್ರಕಾಶ ಕಡಮೆ ‘ಯಾವ ಬರಹಗಳಿಗೆ ಬಡವರ ಕುರಿತು ಕಾಳಜಿ ಇರುತ್ತದೆಯೋ, ಹಸಿವಿನ ಕುರಿತು ತಿಳಿವಳಿಕೆಯಿರುತ್ತದೆಯೋ, ಮಹಿಳೆಯರ ಸಮಾನತೆಯ ಬಗ್ಗೆ ಅರಿವು ಇರುತ್ತದೆಯೋ, ದಲಿತರ ಕುರಿತು ಅಂತಃಕರಣವಿರುತ್ತದೆಯೋ ಅಂತಹ ಬರವಣಿಗೆಗಳು ಚಿಕ್ಕದಾದರೂ ಗೌರವಿಸಲು ಯೋಗ್ಯವಾದುದೆಂದೇ ನಾನು ನಂಬಿದ್ದೇನೆ. ಆ ಹಿನ್ನೆಲೆಯಲ್ಲಿ ವರ್ತಮಾನದ ತಲ್ಲಣಗಳಿಗೆ ಪ್ರತಿಕ್ರಿಯೆಯಾಗಿ ಈ ಎಲ್ಲ ರಚನೆಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಗುಡಿಸಲುಗಳ ನರಳಿಕೆ ನಿಲ್ಲಬೇಕೆಂಬುದೇ ಇಲ್ಲಿಯ ಕವಿತೆಗಳ ಹಾಗೂ ಈ ಕವಿಯ ಮನದಾಳದ ಆಶಯ. ಈ ಆಶಯ ನನ್ನದೂ ಕೂಡ.’ ಎಂದು ಪ್ರಶಂಸಿದ್ದಾರೆ.
ಲೇಖಕ ಆಲೂರು ದೊಡ್ಡನಿಂಗಪ್ಪ ಅವರು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಆಲೂರಿನವರು. ಸದ್ಯಕ್ಕೆ ಮೈಸೂರಿನ ರಂಗಾಯಣದಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲೂ ಸದಾ ಕ್ರಿಯಾಶೀಲರು. 'ಪಲ್ಲಟ' ಕನ್ನಡ ಚಲನಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಕೃತಿಗಳು: 'ನೇಕಾರ', 'ಮುಟ್ಟು' ಮತ್ತು 'ಎದೆಯ ಹೊಲದಲ್ಲಿ ಸೂರ್ಯಕಾಂತಿ,( ಕವನ ಸಂಕಲನಗಳು). ...
READ MORE