ನಾಗರಾಜ ಬಸರಕೋಡ ಅವರ ಚೊಚ್ಚಲ ಕವನ ಸಂಕಲನ 'ಎದೆಯ ಬೋಧಿ ಚಿಗುರು'ವಿನಲ್ಲಿ ಕಾವ್ಯ ಪ್ರೀತಿ ಮತ್ತು ತಮ್ಮ ಅನುಭವವನ್ನು ಕೇಂದ್ರೀಕರಿಸಿದ್ದಾರೆ. ಕವಿಯ ಹೃದಯದಲ್ಲಿ ಬೆಚ್ಚಗಿರುವ ಮಾನವ ಪ್ರೇಮದ ಬುದ್ಧ ಸದಾ ಜಾಗೃತ. ಸ್ವಾರ್ಥವನ್ನು ಉಸಿರಾಡುತ್ತ, ಲೋಕಕ್ಕೆ ಕ್ಷೋಭೆ ಉಂಟು ಮಾಡುವ ಸ್ಥಿತಿಗೆ ಕಳವಳಿಸುವ, ಭ್ರಷ್ಟಾಚಾರ, ಅತ್ಯಾಚಾರ, ದಬ್ಬಾಳಿಕೆ, ಜೀವವಿರೋಧಿ ರಕ್ಕಸ ನಿಲುವುಗಳಿಗೆ ಪ್ರತಿರೋಧ ಒಡ್ಡುವಂತಹ ಕವಿಯ ಸಾಲುಗಳು ಸಾಕ್ಷಿಪ್ರಜ್ಞೆಯಂತಿದೆ.
ಕವಿ ನಾಗರಾಜ ಬಸರಕೋಡ 1979 ಜೂನ್ 30 ರಂದು ವಿಜಯಪುರ ಜಿಲ್ಲೆ ನಿಡಗುಂದಿ ತಾಲ್ಲೂಕಿನ ಬೇನಾಳ ಗ್ರಾಮದಲ್ಲಿ ಜನಿಸಿದರು. ಪ್ರಸ್ತುತ ಹುಬ್ಬಳ್ಳಿಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ‘ಎದೆಯ ಬೋಧಿ ಚಿಗುರು’ ಅವರ ಮೊದಲ ಕವನ ಸಂಕಲನ. ಅವರ ಹಲವಾರು ಕತೆ, ಕವಿತೆಗಳು ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಓ ಮನಸೇ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ...
READ MORE