ಎದೆ ಹಾಲಿನ ಪಾಳಿ

Author : ಆರಿಫ್ ರಾಜಾ

Pages 160

₹ 150.00




Year of Publication: -2021
Published by: ಸಂಗಾತ ಪುಸ್ತಕ
Address: ರಾಜೂರ ಅಂಚೆ, ಗಜೇಂದ್ರಗಡ ತಾಲ್ಲೂಕು, ಗದಗ ಜಿಲ್ಲೆ- 582114
Phone: 9341757653

Synopsys

ಆರೀಫ್ ರಾಜಾ ಅವರ ಕವನ ಸಂಕಲನ ಎದೆ ಹಾಲಿನ ಪಾಳಿ. ಇತಿಹಾಸ ತಜ್ಞ ಮನು ವಿ ದೇವದೇವನ್ ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಕತೆಗಾರ ಮಂಜುನಾಥ್ ಲತಾ ಮುಖಪುಟ ವಿನ್ಯಾಸ ಮಾಡಿದ್ದಾರೆ. ಮುನ್ನುಡಿಯಲ್ಲಿ ಇತಿಹಾಸ ತಜ್ಞ ಮನು ವಿ ದೇವದೇವನ್, ‘ಆರಿಫ್ ರ ಬಹುತೇಕ ಕವಿತೆಗಳು ಭಾವನೆ, ವಿಚಾರ ಹಾಗೂ ಪ್ರತಿಮೆಯ ಸಮನ್ವಯ ಹೊಂದಿರುವುದು ಅವರ ಕಲೆಗಾರಿಕೆಯ ಅಸಾಮಾನ್ಯ ಗುಣವಾಗಿದೆ. ಇದು ಅವರನ್ನು ಆಧುನಿಕ ಕನ್ನಡದ ಇತರ ಕವಿಗಳಿಗಿಂತ ಭಿನ್ನರಾಗಿ ನಿಲ್ಲುವಂತೆ ಮಾಡಿದೆ’ ಎಂದು ಹೇಳಿದ್ದಾರೆ.

About the Author

ಆರಿಫ್ ರಾಜಾ
(06 December 1983)

2012ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ  ಆರಿಫ್‌ ರಾಜ ಅವರು ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಆರಕೆರಾ ಗ್ರಾಮದವರಾದರು. 1983 ಡಿಸೆಂಬರ್‌ 6ರಂದು ಜನಿಸಿದ ಅವರು ರಾಯಚೂರಿನ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪಡೆದಿರುವ ಇವರು ಪ್ರಸ್ತುತ ಬಾಗಲಕೋಟೆಯ ಗವರ್ನಮೆಂಟ್ ಫಸ್ಟ್ ಗ್ರೇಡ್ ಡಿಗ್ರಿ ಕಾಲೇಜ್, ಇಳಕಲ್ ನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಇವರು ಬರೆದಿರುವ ಹಲವು ಕವಿತೆಗಳು ವಿವಿಧ ಭಾಷೆಗಳಿಗೆ ಅನುವಾದಗೊಂಡಿದೆ. ದಿನಕರ ದೇಸಾಯಿ ಪ್ರಶಸ್ತಿ, ಬೇಂದ್ರೆ ಪುಸ್ತಕ ಬಹುಮಾನ, ಗುಲ್ಬರ್ಗ ವಿಶ್ವವಿದ್ಯಾಲಯದ ಪುಸ್ತಕ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ದೊರೆತಿವೆ. ಇವರು ಅನುವಾದಿತ ಕವಿತೆಗಳು ಪರ್ಷಿಯನ್ ಭಾಷೆಯಲ್ಲಿ ರಚಿತವಾದ ಭಾರತದ ...

READ MORE

Reviews

‘ಎದೆ ಹಾಲಿನ ಪಾಳಿ’ ಕೃತಿಯ ವಿಮರ್ಶೆ

ಆರಿಫ್ ರಾಜಾ ಅವರ ಹೊಸ ಸಂಕಲನ 'ಎದೆ ಹಾಲಿನ ಪಾಳಿ' ಕುರಿತು ಮನು ವಿ.ದೇವದೇವನ್ ಅವರು ಬರೆಯುತ್ತಾರೆ. ಕನ್ನಡದಲ್ಲಿ ಕಳೆದ ಎರಡು ದಶಕಗಳಲ್ಲಿ ಕಾವ್ಯರಚನೆ ಆರಂಭಿಸಿದ ಕವಿಗಳ ಪೈಕಿ ತೂಕದ ಹೆಸರು ಹೊಂದಿರುವವರಲ್ಲಿ ಆರಿಫ್ ರಾಜಾ ಅಗ್ರಗಣ್ಯರು. ಇವರು ಈಗಾಗಲೇ 'ಸೈತಾನನ ಪ್ರವಾದಿ' 'ಜಂಗಮ ಫಕೀರನ ಜೋಳಿಗೆ', 'ಬೆಂಕಿಗೆ ತೊಡಿಸಿದ ಬಟ್ಟೆ' ಮತ್ತು 'ನಕ್ಷತ್ರ ಮೋಹ' ಎಂಬ ನಾಲ್ಕು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಇದೀಗ ಇವರ ಐದನೆಯ ಸಂಕಲನ ಬೆಳಕು ಕಾಣುತ್ತಿದೆ. 'ಸಂಗಾತ ಪುಸ್ತಕ'ದ ಟಿ.ಎಸ್. ಗೊರವರ ಅವರು ಇದನ್ನು ಪ್ರಕಟಿಸಲು ಮುಂದಾಗಿದ್ದಾರೆ. 'ಎದೆ ಹಾಲಿನ ಪಾಳಿ' ಎಂಬ ಈ ಸಂಕಲನಕ್ಕೆ ಮೊದಲ ಮಾತುಗಳನ್ನು ಬರೆಯುವ ಹೆಮ್ಮೆ ನನ್ನದಾಗಿದೆ. ಕನ್ನಡದಲ್ಲಿ ಕಳೆದ ಎರಡು ದಶಕಗಳಲ್ಲಿ ಕಾವ್ಯರಚನೆಯಲ್ಲಿ ತೊಡಗಿಕೊಂಡಿರುವ ಆರಿಫ್ ಕವಿತೆಗಳಲ್ಲಿ ಹಿಂದಿನಿದಲೂ ನಾನು ಗಮನಿಸಿದ ವಿಶಿಷ್ಟ ಅಂಶವೊAದಿದೆ. ತಮ್ಮ ಕವಿತೆಯ ಮೂಲಕ ಕೆಲವು ಕವಿಗಳು ಭಾವನೆಯೊಂದನ್ನು ಅಭಿವ್ಯಕ್ತಿಗೊಳಿಸುತ್ತಾರಾದರೆ ಇನ್ನಿತರರು ತಾವು ಬರೆಯುವ ಸಾಲುಗಳನ್ನು ವಿಚಾರವೊಂದರ ಅಭಿವ್ಯಕ್ತಿಗೆಂದು ಬಳಸಿಕೊಳ್ಳುತ್ತಾರೆ. ಇನ್ನೂ ಕೆಲವರ ಆಸಕ್ತಿ ಇರುವುದು ಪ್ರತಿಮಾ ನಿರ್ಮಾಣದಲ್ಲಿ ಕಳೆದ ನೂರು ವರ್ಷಗಳಲ್ಲಿ ಕನ್ನಡದಲ್ಲಿ ಈ ಮೂರನ್ನೂ ತಮ್ಮ ರಚನೆಗಳಲ್ಲಿ ಯಶಸ್ವಿಯಾಗಿ ಅಳವಡಿಸಿಕೊಂಡ ಕವಿಗಳು ನಾಕೈದು ಮಂದಿ ಮಾತ್ರ. ಅವರು ಕೂಡ ತಮ್ಮ ಎಲ್ಲ ಬರಹಗಳಲ್ಲೂ ಇದನ್ನು ನೆರವೇರಿಸಿಲ್ಲ. ಒಮ್ಮೆ ಭಾವನೆಗೆ ಒತ್ತು ನೀಡುವ ಕವಿತೆ ಬರೆದರೆ ಇನ್ನೊಮ್ಮೆ ವಿಚಾರದ ತುಣುಕೊಂದು ಗೋಚರಿಸುವ ಕವನ ರಚನೆ ನಡೆಸಿದ್ದಾರೆ ಹಾಗೂ ಮತ್ತೊಂದು ಸಲ ಪ್ರತಿಮೆ ಕಟ್ಟುವಲ್ಲಿ ನಿರತರಾಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಅವರು ಈ ಮೂರರಲ್ಲಿ ಎರಡನ್ನೋ ಅಥವಾ ಮೂರನ್ನು ಕೂಡವೋ ಒಂದೇ ಕವಿತೆಯಲ್ಲಿ ಆವಿಷ್ಕರಿಸುವಲ್ಲಿ ಯಶಸ್ವಿಯಾಗಿರಬಹುದು. ಆದರೆ ಅಂಥ ಉದಾಹರಣೆಗಳು ವಿರಳ ಹಾಗೂ ಪ್ರಾಸಂಗಿಕ. ಆರಿಫ್ರೆ ಬಹುತೇಕ ಕವಿತೆಗಳು ಭಾವನೆ, ವಿಚಾರ ಹಾಗೂ ಪ್ರತಿಮೆಯ ಸಮನ್ವಯ ಹೊಂದಿರುವುದು ಅವರ ಕಲೆಗಾರಿಕೆಯ ಅಸಾಮಾನ್ಯ ಗುಣವಾಗಿದೆ. ಇದು ಅವರನ್ನು ಆಧುನಿಕ ಕನ್ನಡದ ಇತರ ಕವಿಗಳಿಗಿಂತ ಭಿನ್ನರಾಗಿ ನಿಲ್ಲುವಂತೆ ಮಾಡಿದೆ ಎಂಬುದು ನನ್ನ ಅನಿಸಿಕೆ.  

(ಕೃಪೆ ; ಫೇಸ್ ಬುಕ್, ಬರಹ ; ವಿ. ದೇವದೇವನ್)

-----

ಎಚ್‌.ಆರ್‌. ರಮೇಶ್‌ ಅವರ ಓದು

Related Books