ಎದೆ ಬಿಗಿದ ಕ್ಷಣಗಳು ಎಂಬ ಪುಸ್ತಕವು ಶ್ರೀ ಕೃಷ್ಣಯ್ಯ ಆನಂತಪುರ ಅವರ ಕೃತಿಯಾಗಿದೆ. ಈ ಕೃತಿಯಲ್ಲಿ ಹಲವು ದಶಕಗಳಿಂದ ಕಾವ್ಯ ಕೃಷಿ ನಡೆಸುತ್ತ ಬಂದಿರುವ ಶ್ರೀಕೃಷ್ಣಯ್ಯ ಅನಂತಪುರ ಅನೇಕ ಒಳ್ಳೆಯ ಹನಿಗವನಗಳನ್ನೂ ಬರೆದಿದ್ದಾರೆ. 'ಬಿಂದು' ಎಂಬ ಇವರ ಮೊದಲ ಹನಿಗವನಗಳ ಸಂಕಲನ ಕಾವ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಶ್ರೀಯುತರು ಇನ್ನೊಂದು ಹನಿಗವನ ಸಂಕಲನ ಪ್ರಕಟಿಸುವ ಮೂಲಕ ಈ ಕಾವ್ಯ ಪ್ರಕಾರಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ಹನಿಗವನ, ಚುಟುಕು, ಮುಕ್ತಕ, ಶಾಯಿರಿ ಮುಂತಾದ ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತಿರುವ ಕಿರುಗವನಗಳು ಅತ್ಯಂತ ಈಗ ಜನಪ್ರಿಯವಾಗಿವೆ. ಮೊದ ಮೊದಲು ಪತ್ರಿಕೆಗಳ ಮೂಲೆಯಲ್ಲಿ ಸ್ಥಳ ಭರ್ತಿಗೆಂಬಂತೆ ಪ್ರಕಟವಾಗುತ್ತಿದ್ದ ಕಿರುಗವನಗಳು ಕ್ರಮೇಣ ಓದುಗರ ಹೃದಯದ ಮೂಲೆಯಲ್ಲೂ ಸ್ಥಾನ ಪಡೆದುಕೊಂಡವು. ಈಗಂತೂ ಸಾಮಾಜಿಕ ಜಾಲತಾಣಗಳಿಂದಾಗಿ ಇವುಗಳ ಪ್ರಸಾರ ಇನ್ನಷ್ಟು ವ್ಯಾಪಕವಾಗಿದೆ. ಯಾರು ಬೇಕಾದರೂ ನಾಲ್ಕಾರು ಸಾಲು ಟೈಪಿಸಿ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್ ಇತ್ಯಾದಿಗಳ ಮೂಲಕ ಸುಲಭವಾಗಿ ತೇಲಿಬಿಡಬಹುದು ಎಂದು ಎಚ್. ಡುಂಡಿರಾಜ್ ಪುಸ್ತಕದ ಬಗ್ಗೆ ತಿಳಿಸಿದ್ದಾರೆ.
ಕವಿತೆಯ ಬಗ್ಗೆ ವಿಭಿನ್ನವಾಗಿ ಯೋಚಿಸುವ, ಅಭಿವ್ಯಕ್ತಿಗೂ ತಮ್ಮದೇ ಮಾರ್ಗವನ್ನು ಕಂಡುಕೊಂಡಿರುವ ಹಿರಿಯ ಕವಿ ಶ್ರೀಕೃಷ್ಣಯ್ಯ ಅನಂತಪುರ. ಈಗಾಗಲೇ ಸಂಕಲನ ರೂಪದಲ್ಲಿಯೂ ಅವರು ತಮ್ಮ ಕವಿತೆಗಳನ್ನು ಪ್ರಕಟಿಸಿದ್ದಾರೆ. ಕೃತಿಗಳು: ಬೇರುಗಳು ಅಮ್ಮನ ಹಾಗೆ, ಎದೆ ಬಿಗಿದ ಕ್ಷಣಗಳು ಅವರ ಕವನಸಂಕಲನಗಳಾಗಿವೆ. ...
READ MORE