ಡಾ. ನಾ ಮೊಗಸಾಲೆ ಅವರ ’ದೇವರು ಮತ್ತೆ ಮತ್ತೆ’ ಎನ್ನುವ ಕವನ ಸಂಕಲನವು 85 ಕವಿತೆಗಳನ್ನು ಒಳಗೊಂಡಿದೆ.
ನನ್ನ ದೇವರು, ಹುಡುಕಾಟ, ನೇಂದ್ರಬಾಳೆಕಾಯಿಯ ಚಿಪ್ಸ್, ತಿರೂರಿನ ಉತ್ಸವ, ಎಲ್ಲದರಲ್ಲೂ, ಪಂಚವಾದ್ಯಗಳಲ್ಲಿದ್ದ ಕವಿತೆ, ಸ್ಪಷ್ಟ ಅಸ್ಪಷ್ಟ, ಮಳೆ ಎಂದರೆ, ಬಿಡುಗಡೆ, ಮನವಿ, ಗೊತ್ತಿಲ್ಲದ ಹಾಗೆ, ರಾಮಾಯಣ, ಹಸಿವೆ, ಕಾಡನ್ನು ನೋಡುವುದೆಂದರೆ, ಸಾಮರ್ಥ್ಯ, ಹೂವನ್ನು ನೋಡುವ ಬಗೆ, ಅವಳಲ್ಲಿ ಅವಳು, ಗುಹೇಶ್ವರನಲ್ಲಿ ಇಲ್ಲದ್ದು, ದಿಕ್ಕುಗಳನ್ನು ಮೀರುವ, ಅರ್ಧನಾರೀಶ್ವರ, ದಡ ಇನ್ನೂ ಹಲವಾರು ಕವಿತೆಗಳನ್ನು ರಚಿಸಿದ್ದಾರೆ.
ಮೊಗಸಾಲೆ ಅವರ ಕೆಲವು ಕವಿತೆಗಳ ಸಾಲು ಹೀಗಿವೆ ;
ಆಕೆಗೆ ಉಪ್ಪು ಬೇಡ
ಕಣ್ಣೀರಿದೆ
ಸಮುದ್ರ ಬೇಡ
ಹೃದಯ ಇದ್ದ ಮೇಲೆ
ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಕ ಚಟುವಟಿಕೆ ನಡೆಸುತ್ತಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ, ಇದಲ್ಲ, ಇಹಪರದ ಕೊಳ, ಕಾಮನ ಬೆಡಗು, ದೇವರು ಮತ್ತೆ ಮತ್ತೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ...
READ MORE