‘ದೇವರ ಗೂಳಿ’ ಕೃತಿಯು ಪಿ. ಆರ್. ವೆಂಕಟೇಶ್ ಅವರ ಕವನ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಎಂ. ಡಿ. ಒಕ್ಕುಂದ ಅವರು, ಈ ಸಂಕಲನದಲ್ಲಿರುವ ಕವಿತೆಗಳು ಕಳೆದ ಮೂರು ದಶಕಗಳಲ್ಲಿ ಅನುಭವಿಸಿದ ಸಂಕಷ್ಟದ ದಿನಚರಿಗಳನ್ನು ದಾಖಲಿಸುತ್ತವೆ. ಗ್ಯಾಟ್ ಒಪ್ಪಂದದಿಂದ ಹಿಡಿದು ಇತ್ತೀಚಿನ ಕೊರೊನಾ ಕಾಲದ ತನಕ ಜನಸಾಮಾನ್ಯನ ಬವಣೆ ಹಾಗೂ ನಮ್ಮದೆ ನೆಲದ ಜನರ ಬಗೆಗೆ ಪ್ರಭುತ್ವ ಹೊಂದಿರುವ ಕೌರ್ಯ, ಅಮಾನವೀಯ ದೌರ್ಜನ್ಯ, ಜನಮಾನಸದ ದುಗುಡ ದುಮ್ಮಾನ, ಆಕ್ರಂದನ, ನಿಟ್ಟುಸಿರನ್ನು ಇಲ್ಲಿನ ಕವಿತೆಗಳು ಸಮರ್ಥವಾಗಿ ದಾಖಲಿಸುತ್ತವೆ. ಅರ್ಥಪೂರ್ಣ ಉಪಮೆ, ರೂಪಕ, ಪ್ರತಿಮೆಗಳಿಂದ ಹಾಗೂ ಸಹಜ ಲಯಗಾರಿಕೆಯಿಂದ ಇಲ್ಲಿನ ಕವಿತೆಗಳು ಓದುಗರಿಗೆ ಆಪ್ತವೆನ್ನಿಸುತ್ತವೆ ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ಪಿ. ಆರ್. ವೆಂಕಟೇಶ್ ಅವರು ಕವಿಗಳು, ಲೇಖಕರು. ಕೃತಿಗಳು: ದೇವರ ಗೂಳಿ, ಹನುಮನ ಹಲಿಗೆ ...
READ MORE