‘ದೇವಬಾಗ’ ಚಂದ್ರಶೇಖರ ಪಾಟೀಲ ಅವರ ಕವನಸಂಕಲನವಾಗಿದೆ. ಚಂಪಾ ವಸ್ತುವಿಗಾಗಿ ತಡಕಾಡುವವರಲ್ಲ. ತಮ್ಮ ಅನುಭವಗಳನ್ನು ಹೊತ್ತು ತಂದು ಭಾವನೆಗಳ ಗೂಟಕ್ಕೆ ಬಿಗಿಯಾಗಿ ಕಟ್ಟಿಹಾಕಿ ತಮ್ಮ ಪರಿಧಿ ಮೀರದಂತೆ ಜೋಪಾನವಾಗಿ ಇರಿಸಬಲ್ಲವರು. ಅವರ ಪಕ್ವತೆಯ 60ಕ್ಕೂ ಮಿಕ್ಕಿ ಕವಿತೆಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.
'ಚಂಪಾ' ಎಂದೇ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಇರುವ ಚಂದ್ರಶೇಖರ ಪಾಟೀಲರು ಕವಿ-ನಾಟಕಕಾರ. ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಳುವಳಿಗಳ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ’ಚಂಪಾ’ ಅವರದು. ಹಾವೇರಿ ಜಿಲ್ಲೆಯ ಹತ್ತೀಮತ್ತೂರಿನಲ್ಲಿ ಜನಿಸಿದರು (1939). ತಂದೆ ಬಸವರಾಜ ಹಿರೇಗೌಡ ಪಾಟೀಲ, ತಾಯಿ ಮುರಿಗೆವ್ವ. ಹತ್ತೀಮುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ, ಹಾವೇರಿಯಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ 'ಚಂಪಾ' ಅವರ ಅಕ್ಷರಗಳಿಗೆ ಕಾವ್ಯದ ಗರಿ ಮೂಡಿದವು. ಆಗ ಖ್ಯಾತ ಕವಿ ಗೋಕಾಕರು ಕರ್ನಾಟಕ ಕಾಲೇಜಿನಲ್ಲಿದ್ದರು. ’ನಮಗೆಲ್ಲ ...
READ MOREಹೊಸತು- ಡಿಸೆಂಬರ್ -2003
ರಾಶಿ ರಾಶಿ ಪದ ಪುಂಜಗಳ ಹಂಗಿಲ್ಲದೆ ಚಿಕ್ಕದಾದ ಕವಿತೆಯ ಮೂಲಕ ಹಿರಿದರ್ಥವನ್ನು ಗ್ರಹಿಸುವಂತೆ ಬರೆಯುವ ಕವಿ ಚಂದ್ರಶೇಖರ ಪಾಟೀಲರ ಚಿಕ್ಕ ಹೆಸರೂ ಚಂಪಾ ಎಂದೇ ಪ್ರಸಿದ್ಧ. ಇದು ಅವರ ಹತ್ತನೆಯ ಕವನ ಸಂಕಲನವಾಗಿದ್ದು 60ಕ್ಕೂ ಮಿಕ್ಕಿ ಕವಿತೆಗಳಿವೆ. ಚಂಪಾ ವಸ್ತುವಿಗಾಗಿ ತಡಕಾಡುವವರಲ್ಲ. ತಮ್ಮ ಅನುಭವಗಳನ್ನು ಹೊತ್ತು ತಂದು ಭಾವನೆ ಗಳ ಗೂಟಕ್ಕೆ ಬಿಗಿಯಾಗಿ ಕಟ್ಟಿಹಾಕಿ ತಮ್ಮ ಪರಿಧಿ ಮೀರದಂತೆ ಜೋಪಾನವಾಗಿ ಇರಿಸಬಲ್ಲವರು.