ಡಿ. ವಿ. ಪ್ರಹ್ಲಾದ್ ಅವರ ಮೂರನೇ ಕವನ ಸಂಕಲನ- ದಯಾ...ನೀ. ಭವಾ....ನೀ’ 14 ವರ್ಷಗಳ ನಂತರ ಪ್ರಕಟಣೆ ಕಾಣುತ್ತಿದೆ. ಇಲ್ಲಿಯ ಕವಿತೆಗಳು ನಿಂತ ನೀರಾಗದೇ, ತನ್ನ ಚಲನಶೀಲತೆಯನ್ನು ಸಮಕಾಲೀನ ಸ್ಥಿತಿಯೆಡೆಗೆ ಹರಿಸುತ್ತದೆ. ಲೋಕದ ಅತೀತವಾದ ಪ್ರಶ್ನೆಗಳನ್ನು ಎತ್ತುವ ಇಲ್ಲಿಯ ಕವನಗಳು ಸಿಹಿ ಕಹಿಯ ಸಮಪಾಕವಾಗಿವೆ.
ಕವಿತೆಯ ಶೀರ್ಷಿಕೆ ಸಾಲುಗಳು ಹೀಗಿವೆ. ಹೆಣ್ಣು ಅವಳು, ಹೆರುತ್ತಲೇ ಒರಲುವಳು ಸಣ್ಣ ಸಂಗತಿಗೂ ಸ್ವರಲೋಕದ ಸ್ವರ್ಗ ಜಾತ್ರೆಯ ನಡುವೆ ಕಳೆದುಹೋಗಳು ಅವಳು ಭದ್ರ ಹಿಡಿದ ಭವದ ಬೆರಳು ಕಾರ್ಯಕ್ಕೆ ಕಾರಣಗಳೆಲ್ಲ ನಿನ್ನ ಗಂಡು ತೆವಲು ಅವಳಿಗೆ ಯಾವಾಗಲೂ ವಿಜಯದ ಅಮಲು ಅದಕ್ಕೆ ಸುಮ್ಮಗೆ ಹೇಳಿದ್ದು ದಯಾನೀ ಭವಾನಿ, ದಯಾ… ನೀ ಭವಾ.... ನೀ
ಕವಿ ಡಿ. ವಿ. ಪ್ರಹ್ಲಾದ್ ಅವರು ಮೂಲತಃ ಬೆಂಗಳೂರಿನವರು. 'ಡೀಮರ್', 'ನಾಳೆಯಿಂದ', 'ದಯಾ... ನೀ ಭವಾ... ನೀ' - ಪ್ರಕಟಿತ ಕವನ ಸಂಕಲನ. 'ಹೊಳೆದದ್ದು ತಾರೆ' - ಆಯ್ದ ಸಂಪಾದಕೀಯ. 'ಅನುದಿನವಿದ್ದು' - ಅಗಲಿದ ಲೇಖಕರ ನೆನಪುಗಳ ಸಂಗ್ರಹ. ‘ಎ. ಕೆ. ರಾಮಾನುಜನ್ ಹೆಜ್ಜೆಗುರುತು' ಸಹ ಸಂಪಾದಿತ ಕೃತಿ, 'ಬಗೆ ತೆರೆದ ಬಾನು'- ಸಾಹಿತಿಗಳ ಸಂದರ್ಶನ ಸಂಕಲನ, 'ಮುಕ್ತ ಛಂದ'- ಶಾಂತಿನಾಥ ದೇಸಾಯಿ ವ್ಯಕ್ತಿ ಕುರಿತ ಅನೇಕ ಕೃತಿಗಳನ್ನು ಸಂಪಾದಿಸಿದ್ಧಾರೆ. `ಸಂಚಯ’ ಸಾಹಿತ್ಯ ಪತ್ರಿಕೆಯ ನಿರಂತರ ಮೂರು ದಶಕಗಳಿಂದ ಸಂಪಾದಿಸಿ ಪ್ರಕಟಿಸುತ್ತಿದ್ದರು. ...
READ MORE