ವರ್ತಮಾನದ ವಿದ್ಯಮಾನಗಳಿಗೆ ಮುಖಾಮುಖಿಯಾಗುತ್ತಾ, ಇಂದಿನ ವಾಸ್ತವವನ್ನು ಪ್ರಶ್ನಿಸುತ್ತಾ, ಚಿಂತನೆಗೆ ಓರೆಹಚ್ಚುವ ಮೈಲಾರಪ್ಪನವರ ಆಲೋಚನೆ ಓದುಗರಲ್ಲಿ ಅರಿವು ಮೂಡಿಸುತ್ತದೆ. ದಾಟಬೇಡ ಹೊಸ್ತಿಲು ಸಾಮಾನ್ಯವಾಗಿ ಹಿರಿಯರು ಮಕ್ಕಳಿಗೆ ಹೇಳುವ ಎಚ್ಚರಿಕೆ ಮಾತಾಗಿರುತ್ತದೆ. ಇದನ್ನೇ ರೂಪಕವಾಗಿ ಬಳಸಿರುವ ಲೇಖಕರು ಧರ್ಮ, ಜಾತಿ, ಪಕ್ಷ ಆಚರಣೆ ಹೆಸರಲ್ಲಿ ಅಮಾನವೀಯ ವರ್ತನೆಗಳು ಮತ್ತು ರಕ್ತಪಾತಗಳಿಗೆ ಇಂದಿನ ಯುವಕರು ಮಿಡಿಯಬೇಕು, ಅದಕ್ಕೆ ಬಲಿಯಾಗಬಾರದು ಎಂಬ ಸೂಕ್ಷ್ಮಾರ್ಥದಲ್ಲಿ ತಿಳಿಸಿದ್ದಾರೆ.
ವೃತ್ತಿಯಲ್ಲಿ ಮಕ್ಕಳ ನೆಚ್ಚಿನ ಶಿಕ್ಷಕರು ಹಾಗೂ ಯುವಕವಿ ಮೈಲಾರಪ್ಪ ಬೂದಿಹಾಳ ಅವರು ಜನಿಸಿದ್ದು ಗದಗ ಜಿಲ್ಲೆಯ ಹೊಸೂರು ಗ್ರಾಮದಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಹಾಗೂ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಪ್ರಸ್ತುತ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಹಳೇ ಜೀರಾಳ ಕಲ್ಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನಪದ ಕಲಾವಿದರೂ ಆಗಿರುವ ಮೈಲಾರಪ್ಪನವರೂ ಕನಕಗಿರಿ ಉತ್ಸವ, ಆನೆಗೊಂದಿ ಉತ್ಸವ, ಹಂಪಿ ಉತ್ಸವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಲಾವಿದರಾಗಿ ಭಾಗವಹಿಸಿದ್ದಾರೆ. ...
READ MORE