ತಮ್ಮನ್ನು ತಾವು ಅನುಭವಕ್ಕೆ ಒಡ್ಡಿಕೊಂಡು ರಮ್ಯ ಕೆ.ಜಿ. ಮೂರ್ನಾಡು ಅವರು ಕವಿತೆಗಳ ಬಳ್ಳಿ ಹಬ್ಬಿಸುವಿಕೆಯ ಅಭಿವ್ಯಕ್ತಿಸುವಲ್ಲಿ ನಾಜೂಕುತನ ತೋರಿದ್ದಾರೆ. 'ಇಸಂ' (ವಾದ)ಗಳ ಭಾರವಿಲ್ಲದ ನಡಿಗೆಯಿಂದ ನುಡಿಯುವ ಸಾಲುಗಳಲ್ಲಿ ಮಹತ್ವಾಕಾಂಕ್ಷೆಯ ಧ್ವನಿಯಾಗುತ್ತಾರೆ. ತಮ್ಮ ಪಾಡಿಗೆ ತಾವು ಗುನುಗಿಕೊಂಡಂತೆ ಬರೆದು ನಿರಾಳವಾಗುವ ರಮ್ಯಾ, ಮನುಷ್ಯರ ಆರದ ದಾಹಗಳ ಕೆಲ ಮಗ್ಗುಲುಗಳನ್ನು ಕವಿತೆಗಳ ಮೂಲಕ ತೆರೆದಿಟ್ಟಿದ್ದಾರೆ.
ಮೂಲತಃ ಕೊಡಗಿನವರಾದ ರಮ್ಯ ಕೆ.ಜಿ ಮೂರ್ನಾಡು ಪ್ರಸ್ತುತ ಮಡಿಕೇರಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ಧಾರೆ. 1986 ಅಕ್ಟೋಬರ್ 05 ಜನನ. ಈ ತಲೆಮಾರಿನ ಹೊಸ ತಲ್ಲಣಗಳನ್ನು ಕವಿತೆಗಳ ಮೂಲಕ ಮನಸ್ಸಿಗೆ ದಾಟಿಸುವ ಯುವ ಕವಯಿತ್ರಿ. ‘ದಾಹಗಳ ಮೈ ಸವರುತ್ತಾ’ -ಇವರ ಮೊದಲ ಕವನ ಸಂಕಲನ. ಹಲವಾರು ಕವಿತೆಗಳು ನಾಡಿನ ವಿವಿಧ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ...
READ MORE