‘ಚುಟುಕು ರಶ್ಮಿ’ ಎಂಬುದು ಹೆಸರೇ ಸೂಚಿಸುವಂತೆ ಚುಟುಕುಗಳ ಸಂಗ್ರಹ ಕೃತಿ. ಕವಿ ಜಿ.ಕೆ. ಕುಲಕರ್ಣಿ ಅವರು ರಚಿಸಿದ್ದಾರೆ. ಸಣ್ಣ ಸಣ್ಣ ಪದಗಳ ಮೂಲಕ ಹಿರಿದಾದ ಅರ್ಥವನ್ನು ತುಂಬಿ ಕಾವ್ಯದಷ್ಟೇ ಗಂಭೀರ ಪರಿಣಾಮ ಹಾಗೂ ಮನರಂಜನೆಯ ಮೋಹಕತೆ ಬೀರಬಲ್ಲ ಕವಿತೆಗಳೆಂದರೆ-ಚುಟುಕುಗಳು. ಗಾತ್ರದಲ್ಲಿ ಚುಟುಕಾಗಿದ್ದರೂ ಅವು ಉಂಟು ಮಾಡುವ ಪರಿಣಾಮದಲ್ಲಿ ತುಂಬಾ ಶಕ್ತಿಶಾಲಿಯಾಗಿರುತ್ತವೆ. ಕವಿಗಳು, ಚುಟುಕುಗಳ ಮೂಲಕ ಕವಿಗಳು ತಮ್ಮ ಒಲವು-ನಿಲುವುಗಳನ್ನು ಪ್ರಕಟಿಸಿದ್ದು, ಓದುಗರ ಗಮನ ಸೆಳೆಯುವಂತಿವೆ. .
ಹಿರಿಯ ಲೇಖಕ ಜಿ.ಕೆ. ಕುಲಕರ್ಣಿ ಅವರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದವರು. ತುಮಕೂರು ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾಗಿ ನಿವೃತ್ತರು. ಸದ್ಯ ತುಮಕೂರಿನಲ್ಲಿ ವಾಸವಿದ್ದಾರೆ. ಎಚ್ ಐವಿ, ಏಡ್ಸ್ ಸೇರಿದಂತೆ ಸಾಂಕ್ರಾಮಿಕ ರೋಗಗಳ ಕುರಿತು ಜನಜಾಗೃತಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಧಾರವಾಡ, ಹೊಸಪೇಟೆ ಸೇರಿದಂತೆ ರಾಜ್ಯದ ವಿವಿಧ ಆಕಾಶವಾಣಿ ಕೇಂದ್ರಗಳಿಂದ ಇವರ ಕವನ-ಬರಹಗಳು ಪ್ರಸಾರಗೊಂಡಿವೆ. ಕತ್ತಲೆ ಕರಗಿತು ಎಂಬ ರೇಡಿಯೋ ನಾಟಕವು ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ ಪ್ರಸಾರಗೊಂಡಿದೆ. ನಗೆ ಮಲ್ಲಿಗೆ, ಹಾಸ್ಯಸಿಂಚನ ಹಾಗೂ ಹಾಸ್ಯಲೋಕ ಹೀಗೆ ವಿವಿಧ ವೇದಿಕೆಗಳಲ್ಲಿ ಹಾಸ್ಯ ಕಾರ್ಯಕ್ರಮ ನೀಡಿದ್ದಾರೆ. ಅಧ್ಯಾತ್ಮಿಕ ಉಪನ್ಯಾಸ, ಜೀವನ ...
READ MORE