ಚುಕ್ಕಿ ಹೂಗಳ ಗೆಳತಿ

Author : ರವಿ ಹಿರೇಮಠ

Pages 60

₹ 50.00




Year of Publication: 2017
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

’ಪ್ರೇಮ’ ಸಾಹಿತ್ಯ ಹುಟ್ಟುತ್ತಿಲ್ಲ ಎಂಬ ಮಾತುಗಳು ಆಗಾಗ ಕೇಳಿಬರುತ್ತದೆ. ಆದರೆ ಅದು ಪೂರ್ಣ ನಿಜವಲ್ಲ ಎಂಬುದನ್ನು ’ಚುಕ್ಕಿ ಹೂಗಳ ಗೆಳತಿ’ಯಂತಹ ಕೃತಿಗಳು ಸಾಬೀತುಪಡಿಸುತ್ತಲೇ ಇರುತ್ತವೆ. ಸಹಜತೆ ಇಲ್ಲಿನ ಕವಿತೆಗಳ ಜೀವಾಳ. ಕವಿ ತನ್ನ ಸಂಗಾತಿಯನ್ನು ಬಗೆ ಬಗೆಯಾಗಿ ವರ್ಣಿಸಿದ್ದಾರೆ. ಪ್ರಥಮ ಕವನ ಸಂಕಲನದ ಮಿತಿಗಳನ್ನೂ ಕೃತಿ ಮೀರಿದೆ. 

ಸಾಹಿತಿ ಆನಂದ ಪಾಟೀಲರು ರವಿ ಹಿರೀಮಠರ ಕವಿತೆ ಕುರಿತು ’ ಪ್ರೇಮ ಪ್ರೀತಿಯ ನವಿರು ಹಸಾದದ ಒಸಗೆಯ ಸಾಲುಗಳು ಅಲ್ಲಿನವು. ಇವು ಹಸಿ ಹುಸಿ ಆವೇಶದ ಫಲಶುಗಳಲ್ಲ. ಸಹಜದ ಹರಿವುಗಳು. ವಯಸ್ಸು ಮಾಗುತ್ತ, ಅನುಭವ ಗೂಡುಕಟ್ಟುತ್ತ, ತಿರುಗಿ ಒಮ್ಮೆ ನೋಡುವಾಗ ಚೆಂದದ ನಗುವಿನಲ್ಲಿ ತುಂಬಿಕೊಳ್ಳುವಂಥವು’ ಎಂದಿದ್ದಾರೆ. 

ಲೇಖಕ ಹಣಮಂತ್ರಾಯ ಬಿರಾದಾರ ಅವರು, ’ಕನ್ನಡದ ಹೆಸರಾಂತ ಪ್ರೇಮಕವಿಯಾದ ಕೆ.ಎಸ್. ನರಸಿಂಹಸ್ವಾಮಿಯಿಂದ ಹಿಡಿದು ಸಾಕಷ್ಟು ಜನರು ಪ್ರೀತಿ, ಪ್ರೇಮ, ಪ್ರಣಯದ ಕುರಿತು ನವಿರಾಗಿ ಬರೆದಿದ್ದಾರೆ. ಅದರಂತೆ ರವಿ ಹಿರೇಮಠ ಅವರು ನೈಜವಾಗಿ ಸಂಗಾತಿಯನ್ನು, ಗೆಳತಿಯನ್ನು ಹಾಡಿ ಹೊಗಳಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ರವಿ ಹಿರೇಮಠ
(21 June 1965)

ಲೇಖಕ ರವಿ ಸಿ. ಹಿರೇಮಠ ಅವರು ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ತಾಳಿಕೋಟೆಯವರು. ತಂದೆ ಚನ್ನಬಸಯ್ಯ, ತಾಯಿ ಶಾಂತಾಬಾಯಿ. ಪ್ರಾಥಮಿಕ-ಪ್ರೌಢಶಿಕ್ಷಣವನ್ನು ಮುದ್ದೆಬಿಹಾಳ ಹಾಗೂ ವಿಜಯಪುರದಲ್ಲಿ ಮುಗಿಸಿದರು. ಬಿ..ಎ. ಬಿ. ಇಡಿ, ಹಾಗೂ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವೀಧರರು. ಕಲಬುರಗಿ ಆಕಾಶವಾಣಿಯಲ್ಲಿ 5 ವರ್ಷ ಸಹಾಯಕರಾಗಿ, ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ನಂತರ ವಿವಿಧ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ವರದಿಗಾರರಾಗಿ ಜೊತೆಗೆ, ಮಕ್ಕಳ ಸಾಹಿತ್ಯ ವೃದ್ಧಿಗಾಗಿ ( 1993) ಸಂಧ್ಯಾ ಸಾಹಿತ್ಯ ವೇದಿಕೆ ಹಾಗೂ ಮಕ್ಕಳ ಸಾಹಿತ್ಯ ವಿಮರ್ಶೆ ಪತ್ರಿಕೆಯಾಗಿ ‘ಸಂಧ್ಯಾ’ ಆರಂಭಿಸಿದ್ದಾರೆ. ಪರಿಸರ ಜಾಗೃತಿಗಾಗಿ ಸೃಷ್ಟಿ ನೇಚರ್ ಕ್ಲಬ್ ...

READ MORE

Related Books