ಚಿಟ್ಟೆ ರೆಕ್ಕೆಯ ರೇಟು

Author : ರಾಜಶೇಖರ ಬಂಡೆ

Pages 108

₹ 100.00




Year of Publication: 2019
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು-577417, ಸಾಗರ, ಶಿವಮೊಗ್ಗ, ಕರ್ನಾಟಕ

Synopsys

ಚಿಟ್ಟೆ ರೆಕ್ಕೆಯ ರೇಟು- ಕವಿ ರಾಜಶೇಖರ ಬಂಡೆ ಅವರ ಮೊದಲ ಕವನ ಸಂಕಲನ. ಸದಾ ಅಮಲಿನಲ್ಲಿರು ಎನ್ನುವ ಫ್ರೆಂಚ್ ನವ್ಯ ಕವಿ ಬೋದಿಲೇರ್ ಅವರ ಪ್ರಭಾವಕ್ಕೆ ಒಳಗಾಗಿ, ಕಾವ್ಯದ ಅಮಲತ್ತಿಸಿಕೊಂಡ ವಿಶಿಷ್ಟ ಕವಿ ಬಂಡೆ. ತೀವ್ರವಾಗಿ ಬದುಕುತ್ತಾ, ಬದುಕಿದಷ್ಟೇ ತೀವ್ರವಾಗಿ ಬರೆಯುತ್ತಾ, ಮಹಾನಗರದ ಬೆರಗಿಗೆ ದಂಗಾಗುತ್ತಲೇ, ತನ್ನ ಒದ್ದಾಟಗಳನ್ನೂ ಕವಿತೆಯಾಗಿಸಿಬಿಡುವ ರಾಜಶೇಖರ ಅವರ ಕಾವ್ಯ ಶೈಲಿಗೆ  ಮಾರುಹೋಗದವರಿಲ್ಲ. ಓದುಗರ ಒತ್ತಡದಲ್ಲಿ ರೂಪುಗೊಂಡ ರಾಜಶೇಖರ ಬಂಡೆಯವರ ಮೊದಲ ಕವನ ಸಂಕಲನವಿದು. ಈ ಪುಸ್ತಕಕ್ಕೆ ಹಿರಿಯ ಲೇಖಕಿ ಪ್ರತಿಭಾ ನಂದಕುಮಾರ್ ಮುನ್ನುಡಿ ಬರೆದಿದ್ದಾರೆ.

‘ಕೂಡಿಟ್ಟ ಕವಿತೆಗಳಲ್ಲಿ ಜೀವನ್ಮರಣದ 

ಕುರಿತಾಗಿ ಏನೂ ಇಲ್ಲ. 

ತೇಯ್ದ ಪದಗಳು ಪುಸ್ತಕದ ಪೇಜು ಪೇಜಿಗೂ 

ಸಾಲಲ್ಲಿ ನಿಂತು ಚಿಕ್ಕ ಮಕ್ಕಳ ಹಾಗೆ

ಮೂಲಕ್ಕೆ ಮೂತ್ರಮಾಡುತ್ತಿವೆ…

ಕವಿತೆಗೆ ಕೈಬೆರಳಿನ ಸಲಿಗೆ ಒಳ್ಳೆಯದಲ್ಲ..’

ಎಂದು ಬರೆದ ಕವಿಯ ಕಾವ್ಯ ಸೆಲೆಯ ಬಗ್ಗೆ ಏನು ಬರೆಯುವುದು ಎಂದು ಪ್ರಶ್ನಿಸಿಕೊಳ್ಳುತ್ತಾರೆ ಲೇಖಕಿ ಪ್ರತಿಭಾ ನಂದಕುಮಾರ್. ಬಂಡೆ ಬರೆಯುವುದೆಲ್ಲಾ ಉತ್ಕಟ ಅಭಿವ್ಯಕ್ತಿಯೇ. ಅದರಲ್ಲಿ ನೀರು ಬೆರೆಸಿದ ತೆಳುತನ ಖಂಡಿತಾ ಇರುವುದಿಲ್ಲ ಎಂಬುದು ಅವರ ಅಭಿಪ್ರಾಯ. ಮಿಲನದ ಉತ್ಕಟ ಗಳಿಗೆಯಲ್ಲೂ ಅಗಲಿಕೆಯನ್ನು ಮರೆಯಲಾಗದ ಮಹಾನುಭಾವ ಈತ. ಅದಕ್ಕೆ ಬಂಡೆಯ ಕವನಗಳನ್ನು ತಿದ್ದುವ ಧೀರರು ಯಾರೂ ಇಲ್ಲ. ಕಾಮ, ಪ್ರೇಮ, ಬದುಕು, ಜಗತ್ತು, ಹೆಣ್ಣು, ಗಂಡು, ಪ್ರಕೃತಿ ಎಲ್ಲವನ್ನೂ ಅನುಭವಿಸುವ ಒಂದು ರೀತಿಯ ಶಾಪಗ್ರಸ್ಥ ಜೀವ ಅದು. ಓದುಗರ ಗ್ರಹಿಕೆಯಲ್ಲಿ ಕವಿತೆಯ ಪ್ರತಿಮೆಗಳನ್ನು ಶಿಲ್ಪಗಳಂತೆ ಕಾಣುವರೀತಿ ಬರೆಯುವುದು ಸವಾಲಿನದು. ಕವಿತೆಗೆ ಅಂತಹ ಶಕ್ತಿ ದಕ್ಕಲು ಹೊಸನುಡಿಗಟ್ಟಿನ ಶೋಧ ಮತ್ತು ತೀವ್ರತೆರನಾದ ಅನುಭವಿಸುವಿಕೆಯ ಒಡಲಲ್ಲಿ ಕವಿತೆ ಜೀವತಳೆದಿದ್ದರೆ ಮಾತ್ರ ಸಾಧ್ಯ. ಅಂತಹ ಶಕ್ತಿ ಕವಿ ರಾಜಶೇಖರ ಬಂಡೆಗ ದಕ್ಕಿದೆ ಎಂಬುದಕ್ಕೆ ಸಾಕ್ಷಿ ಚಿಟ್ಟೆ ರೆಕ್ಕೆಯ ರೇಟು. 

About the Author

ರಾಜಶೇಖರ ಬಂಡೆ
(26 March 1990)

ಕವಿ ರಾಜಶೇಖರ ಬಂಡೆ ಮೂಲತಃ ಕನಕಪುರದವರು. ರಾಮನಗರ ಜಿಲ್ಲೆ, ಕನಕಪುರ ತಾಲೂಕಿನ ಚಿಕ್ಕಕುರುಬರಹಳ್ಳಿ ಅವರ ಹುಟ್ಟೂರು. ಪಕ್ಕದ ಮನೆಯನ್ನ ಸುಡುತ್ತಿರುವ ಬೆಂಕಿ ತನ್ನದೇ ಮನೆಗೆ ತಾಗುವವರೆಗೆ ಅದೊಂದು ಚರ್ಚೆಯ ವಿಷಯವಾಗಿರುತ್ತದೆ. ಆಮೇಲಷ್ಟೇ ಅದನ್ನ ನಂದಿಸುವ ಕೆಲಸಗಳು ಜಾರಿಯಾಗುತ್ತವೆ' ಎನ್ನುವ ರಾಜಶೇಖರ್ ಸದ್ಯ ಕನ್ನಡ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಫ್ರೆಂಚ್ ನ ನವ್ಯಕವಿ ಚಾರ್ಲ್ಸ್ ಬೋದಿಲೇರ್ ಪ್ರಭಾವಕ್ಕೆ ಒಳಗಾಗುತ್ತಲೇ ಕನ್ನಡ ಕಾವ್ಯಲೋಕಕ್ಕೆ ಸಿಕ್ಕ ಪ್ರತಿಭಾವಂತ ಕವಿ ರಾಜಶೇಖರ ಬಂಡೆ. ರಾಜಶೇಖರ್ ಅವರಿಗೆ ಸೃಜನಶೀಲ ಬರವಣಿಗೆಗಾಗಿ 2017ನೇ ಸಾಲಿನ ಟೋಟೋ ಪ್ರಶಸ್ತಿ ಲಭಿಸಿದೆ. ಅವರ ಮೊದಲ ಕವನ ಸಂಕಲನ ‘ಚಿಟ್ಟಿ ...

READ MORE

Related Books