ಚತುರೋಕ್ತಿ ಮತ್ತು ಇತರ ಕವಿತೆಗಳು

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 56

₹ 40.00




Year of Publication: 1978
Published by: ಶ್ರೀಮಾತಾ ಪ್ರಕಾಶನ
Address: ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003

Synopsys

ದ,ರಾ, ಬೇಂದ್ರೆಯವರ ಚತುರೋಕ್ತಿ ಮತ್ತು ಇತರ ಕವನಗಳು ಮೊದಲ ಬಾರಿಗೆ ಪ್ರಕಟವಾದ್ದು ೧೯೭೮ರಲ್ಲಿ. ಈ ಸಂಕಲನದಲ್ಲಿ 43 ಕವಿತೆಗಳಿವೆ. ಈ ಎಲ್ಲ ಕವಿತೆಗಳು 1964ರಲ್ಲಿ ರಚಿತವಾದವುಗಳು. ಅದೇ ವರ್ಷ ಪ್ರಕಟವಾದ ನಾಕುತಂತಿ ಸಂಕಲನದ ಕವಿತೆಗಳಿಗಿಂತ ಭಿನ್ನವಾದ ನಿಲುವು ಹೊಂದಿದವುಗಳಾಗಿವೆ. “ ಆ ಕಾಲಕ್ಕೆ ನನ್ನಲ್ಲಿಯ ಕಾವ್ಯ ಪ್ರವಾಹವು ಇಮ್ಮುಖವಾಗಿ ಹರಿಯುತ್ತಿತ್ತು ಎಂದು ತೋರುತ್ತದೆ. ನನ್ನ ಪ್ರತಿಭೆಗೆ ಇನ್ನೊಂದು ಬಗೆಯ ಹಂತವನ್ನು ತರುವ ಕಾರ್ಯವನ್ನು ಈ ಚತುರೋಕ್ತಿ ಮಾಡಿರುವುದು ಸಾಕು ಎಂದು ಬೇಂದ್ರೆಯವರು ಮೊದಲ ಮಾತಿನಲ್ಲಿ ಹೇಳಿದ್ದಾರೆ. 1973ರಲ್ಲಿ ಮತ್ತೆ ಶ್ರಾವಣ ಬಂತು ಕವಿತೆಯನ್ನು ಬೇಂದ್ರೆ ಪ್ರಕಟಿಸಿದ್ದರು. ಆ ಕಾವ್ಯ ಸಂಕಲನದ ಮುನ್ನುಡಿಯಲ್ಲಿ ದಶಪನ ಎಂಬ ಕವನ ಸಿದ್ದವಾಗಲಿದೆ ಎಂದು ಸೂಚಿಸಲಾಗಿತ್ತು. ಅದೇ ಚತುರೋಕ್ತಿ ಮತ್ತು ಇತರ ಕವನಗಳು ಎಂಬ ಹೊಸ ಹೆಸರಿನಿಂದ ಪ್ರಕಟವಾಗಿದೆ. ಈ ಸಂಕಲನದಲ್ಲಿ ಎರಡು ಭಾಗಗಳಿವೆ. ಮೊದಲನೆ ಭಾಗ ದ್ವನಿಯಿಂದ ನಿಶ್ಯಬ್ದದವರೆಗೆ ಚತುರೋಕ್ತಿಗಳಿಂದ ಕೂಡಿದೆ. ಎರಡನೆಯ ಭಾಗದಲ್ಲಿ ಕಾಳಿಯೋ, ಮಾಳೆಯೋದಿಂದ ಹಾರ್ದಿಕ ಮೈತ್ರಿಗೆ ಜಯವಾಗಲಿ ವರೆಗೆ ಇತರ ಕವನಗಳಿವೆ. ಅಕ್ಷರ ಛಂದಸ್ಸಿನಲ್ಲಿ ಅಕ್ಷರಗಳ ಬಂಧನ, ಮಾತೃ ಛಂದಸ್ಸಿನಲ್ಲಿ ಮಾತೃಗಳ ಬಂಧನ, ಅಂಶಿ ಛಂದಸ್ಸಿನಲ್ಲಿ ಅಂಶಗಳ ಬಂಧನ ಇರುತ್ತದೆ. ಚತುರೋಕ್ತಿ ಕವನಗಳಗೆ ಮೇಲೆ ನಮೂದಿಸಿದ ಯಾವ ಬಂಧನಗಳೂ ಇಲ್ಲ.ಹೇಳಬೇಕಾದ ಮಾತನ್ನು ಒಂದೇ ಒಂದು ಸಾಲಿನಲ್ಲಿ ,ಎರಡು ಸಾಲಿನಲ್ಲಿ, ಮೂರು ಸಾಲಿನಲ್ಲಿ, ಮತ್ತು ನಾಲ್ಕು ಸಾಲಿನಲ್ಲಿ ಪ್ರಭಾವಿಯಾಗಿ ಹೇಳಬೇಕು ಎಮಬ ಒಂದೇ ಒಂದು ಬಂಧನ ಇಲ್ಲಿದೆ. ಈ ರೀತಿ ಬೇಂದ್ರೆ ಕಾವ್ಯ ನಿರ್ಮಾಣದಲ್ಲಿ ಹೊಸದು, ಹೊಸ ಅನುಭೂತಿ, ಮತ್ತು ಹೊಸ ಅಭಿವ್ಯಕ್ತಿಯಿಂದ ಕೂಡಿದ ಕವಿತೆಗಳು ಚತುರೋಕ್ತಿಯಲ್ಲಿವೆ ಎಂದು ಹಿನ್ನುಡಿಯಲ್ಲಿ ವಾಮನ್ ಬೇಂದ್ರೆಯವರು ವಿವರಿಸಿದ್ದಾರೆ. “ರಾಮ ದಾಸರ ದಾಸ ಭೋಧ’ ಕನಕದಾಸರ ಮುಂಡಿಗೆ ಮತ್ತು ವಚನಕಾರರ ಬೆಡಗು ಅಂಬಿಕಾತನಯ ದತ್ತರ ಅಂತರಂಗದಲ್ಲಿ ಪಾಕಗೊಂಡು ಈ ಚತುರೋಕ್ತಿದಳು ಹೊರಬಂದಿವೆ. ಮುಂಡಿಗೆ ಬೆಡಗು, ಒಗಟುಗಳಿಗೆ ಇರುವ ಕ್ಲಿಷ್ಟತೆ ಇಲ್ಲಿಯ ಕವನಗಳಿಗೆ ಇಲ್ಲ.ಇವೆಲ್ಲ ಕವಿಯ ರಸಿಕೊಕ್ತಿಗಳು. ಇವುಗಳಿಗೆ ನಾಟುನುಡಿ, ಗಾದೆಮಾತು, ಸಾಮತಿ ಸೂಕ್ತಿಗಳಗೆ ಇರಬೇಕಾದ ಭಾವಶ್ರೀಮಂತಿಕೆ ಎನ್ನುತ್ತಾರೆ ವಾಮನ್ ಬೇಂದ್ರೆ. ಬೆಳಕಾದ ಮಾತು ಬೆಂಕಿಯಾಗಿತ್ತು. ಭಾವಕ್ಕೆ ಭಾಷೆ ಆತಂಕವಲ್ಲ, ಅದು ಪೂರಕ. ಬೇಂದ್ರೆಯವರು ಕನ್ನಡ ಚತುರೋಕ್ತಿಯನ್ನು ರಚಿಸುತ್ತಿರುವಾಗಲೇ ಇಂಗ್ಲೀಷ ಮತ್ತು ಮರಾಠಿಯಲ್ಲಿಯೂ ಇದೇ ಮಾದರಿಯ ಕವಿತೆಗಳನ್ನು ಬರೆದಿದ್ದರು ಎನ್ನುವುದಕ್ಕೆ ಕೆಲವು ಸಾಕ್ಷಿಗಳನ್ನು ಹಿನ್ನುಡಿಯಲ್ಲಿ ಒದಗಿಸಲಾಗಿದೆ.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books