ಲೇಖಕ ಮಹಾಬಲ ಸೀತಾಳಭಾವಿ ಅವರ ಕೃತಿ,‘ಚಾಟು ಕವಿತೆಗೆ ಚುಟುಕು ಕತೆ’. ಈ ಕೃತಿಯ ಬೆನ್ನುಡಿಯಲ್ಲಿ ಹಿರಿಯ ಪತ್ರಕರ್ತ, ಲೇಖಕ ಜೋಗಿ ಅವರ ಮಾತುಗಳಿದ್ದು, "ಸಂಸ್ಕೃತವೆಂದರೆ ನಮ್ಮ ಮನಸ್ಸಿಗೆ ಬರುವುದು ಗಂಭೀರ ಸಾಹಿತ್ಯ ಮಾತ್ರ. ಆದರೆ, ಹಾಸ್ಯ, ಶ್ಲೇಷೆ, ವಿಡಂಬನೆ, ಸಮಸ್ಯಾಪೂರಣ, ಚಾಟು ಸೇರಿದಂತೆ ಬೇರೆ ಬೇರೆ ಪ್ರಕಾರದ ಹಗುರದ, ಆದರೆ ವಿಶಿಷ್ಟವಾದ ರಚನೆಗಳು ಅದರಲ್ಲಿ ಸಾಕಷ್ಟಿವೆ. ಸಂಸ್ಕೃತ ಕವಿಗಳ ತುಂಟತನ ಮತ್ತು ಶೃಂಗಾರಪ್ರಿಯತೆಯನ್ನು ತೋರುವ ನೂರು ಚಾಟೋಕ್ತಿಗಳು ಇಲ್ಲಿವೆ. ಅವುಗಳ ಸ್ವಾರಸ್ಯ, ಸಂದರ್ಭವನ್ನು ವರ್ಣಿಸುವ ಕತೆಯನ್ನು ಮಹಾಬಲ ಸೀತಾಳಭಾವಿ ಬರೆದಿದ್ದಾರೆ” ಎಂಬುದಾಗಿ ಬರೆದಿದ್ದಾರೆ.
ಮಹಾಬಲ ಸೀತಾಳಭಾವಿ ಅವರು ಮೂಲತಃ ಲೇಖಕರು ಹಾಗೂ ಅನುವಾದಕರು. ಕೃತಿಗಳು: ಕಾಳಿದಾಸ ಮಹಾಕವಿಯ ಅಭಿಜ್ಞಾನ ಶಾಕುಂತಲ (ಅನುವಾದಿತ ನಾಟಕ), ಚಾಟು ಕವಿತೆಗೆ ಚುಟುಕು ಕತೆ (ಚಾಟೋಕ್ತಿಗಳ ಸಂಗ್ರಹ ಕೃತಿ), 108 ಹಳೆ ಆಚಾರ ಹೊಸ ವಿಚಾರ, ಆಂಟೆನ ಚೆಕಾಫ್ ಕಥೆಗಳು (ಅನುವಾದ), ಮ್ಯಾನೇಜ್ ಮೆಂಟ್ ಕತೆಗಳು (ಯಶಸ್ವಿಗೆ 150 ಅಡ್ಡದಾರಿಗಳು), ಚಾಣಕ್ಯ ನೀತಿ, ಮ್ಯಾನೇಜ್ ಮೆಂಟ್ ಭಗವದ್ಗೀತೆ, ನಿತ್ಯ ಜೀವನಕ್ಕೆ ಹತ್ತಿರದ ಸುಭಾಷಿತಗಳು, ಈ ತಪ್ಪು ನೀವು ಮಾಡಬೇಡಿ. ...
READ MORE