ಚಂದ್ರಶೇಖರ ಪಾಟೀಲರ ಚಿಕ್ಕ ಪುಟ್ಟ ಪದ್ಯಗಳ ಸಂಕಲನ ‘ಚಂಪಾ ಲಹರಿ’. ಲೇಖಕರು ಹೇಳುವಂತೆ ಕಳೆದ ಐದು ದಶಕಗಳಲ್ಲಿ ಅವರು ಹೊರತಂದ ಹನ್ನೊಂದು ಕವನ ಸಂಕಲನಗಳಲ್ಲಿ ಚೆದುರಿ ಹೋದ ಚಿಕ್ಕಪುಟ್ಟ ಪದ್ಯಗಳು ಈ ಕೃತಿಯಲ್ಲಿವೆ. ಇಲ್ಲಿಯ ತೀರ ಚಿಕ್ಕ ಪದ್ಯದಲ್ಲಿ ಇರುವುದು ನಾಲ್ಕೇ ಶಬ್ದಗಳು: ತೀರ ಪುಟ್ಟ ಪದ್ಯ ಒಂದು ಪುಟದಷ್ಟಿವೆ. ಒಟ್ಟು ಕಾವ್ಯಸೃಷ್ಟಿಯಲ್ಲಿ ಎರಡು ಅಥವಾ ಮೂರು-ನಾಲ್ಕು ಪುಟಗಳ ಕವನಗಳೇ ಹೆಚ್ಚು ಎಂದಿದ್ದಾರೆ.
ಕೃತಿಯ ಪರಿವಿಡಿಯಲ್ಲಿ ಅಂಗಿ, ಅಂಗೀ ಸಮಾಚಾರ, ಅಂತೂ ಕೊನೆಗೊಮ್ಮ, ಅಂಬೋಣ, ಅಡ-ಕಡ, ಅಡ್ಡಗೋಡೆ, ಅದೇ ಶೈಲಿಯಲ್ಲಿ, ಅಧ್ಯಾತ್ಮ, ಅನ್ನಬಾರದೇಕೆ, ಅಭಾವ, ಅಮ್ಮಾವ್ರಿಗೊಂದು ಮಾತು, ಅಲ್ಲಿಇಲ್ಲಿ, ಅಹುದು ಬಹುದು, ಆಹಾ ಅವನ ತಲೆ, ಆಂಟಿ ನೈಟಿ, ಆಲ್ ಡೌನ್, ಇಂದಿರಾ, ಇವಳು, ಐತಿಹ್ಯ, ಒಂದು ಡೈಲಾಗು, ಒಪ್ಪಂದ, ಕಂಪ, ಕಪ್ಪು, ಕಾಟ, ಕೆ…, ಖರೇ ಮಾತು, ಖುಶಿ ಖುಶಿ, ಗಂಡ ಹೆಂಡತಿ, ಗೋಡೆ-ಕಂದಕ, ಕಾಮ್ರೇಡ್, ಗೋರಿಯಲ್ಲೊಂದು ಗಿಣಿ, ಹೆಣ್ಣು, ಹೊದಿಕೆ, ಹುಡುಕಾಟ, ಸೇರೋದು, ಸ್ಪೂರ್ತಿ, ಸೆಳೆತ, ಸುಮ್ಮನೆ, ಸೀಟಿನವರು, ಸರಾಗ, ಸರಿ-ತಪ್ಪು, ಸೀತಾಯಣ, ಸುಖಿ ಸಂಸಾರ, ಸೇರಿದ್ದು, ಯಾವ ಕೃಷ್ಣ, ವ್ಯಾಕರಣ, ಶಬ್ದ ಹೇಳಿತು, ಶಿವ-ಶಿವಾ, ಸಂತ-ಭಕ್ತ, ಮೂಲ, ಮಾಲಾಶ್ರೀ, ಮಾತ್ರಕ್ಕೆ ಭಗವಂತ, ಬೇಡ, ಬೆದರು, ಬಾನುಲಿ, ಪ್ರೀತಿ ಇಲ್ಲದೆ, ಪಾನ ನಿರೋಧ, ಪ್ರಸಾದ, ಪಾಪು ಪುರಾಣ ಸೇರಿದಂತೆ ಅನೇಕ ಪದ್ಯಗಳಿವೆ.
'ಚಂಪಾ' ಎಂದೇ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಇರುವ ಚಂದ್ರಶೇಖರ ಪಾಟೀಲರು ಕವಿ-ನಾಟಕಕಾರ. ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಳುವಳಿಗಳ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ’ಚಂಪಾ’ ಅವರದು. ಹಾವೇರಿ ಜಿಲ್ಲೆಯ ಹತ್ತೀಮತ್ತೂರಿನಲ್ಲಿ ಜನಿಸಿದರು (1939). ತಂದೆ ಬಸವರಾಜ ಹಿರೇಗೌಡ ಪಾಟೀಲ, ತಾಯಿ ಮುರಿಗೆವ್ವ. ಹತ್ತೀಮುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ, ಹಾವೇರಿಯಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ 'ಚಂಪಾ' ಅವರ ಅಕ್ಷರಗಳಿಗೆ ಕಾವ್ಯದ ಗರಿ ಮೂಡಿದವು. ಆಗ ಖ್ಯಾತ ಕವಿ ಗೋಕಾಕರು ಕರ್ನಾಟಕ ಕಾಲೇಜಿನಲ್ಲಿದ್ದರು. ’ನಮಗೆಲ್ಲ ...
READ MORE