‘ಚೈತನ್ಯದ ಚಿಗುರು’ ಕೃತಿಯು ಎಂ.ಎನ್. ಮಂಜೇಗೌಡ ಅವರ ಕವನಸಂಕಲನವಾಗಿದೆ. ಪ್ರಸ್ತುತ ಕವನಸಂಕಲನದಲ್ಲಿ ‘ಸೂರ್‍ಯನೆಲ್ಲಿ ಮರೆಯಾದ?’ ‘ಸಂಜೆ ಕೆಂಪು’ ಎಂಬ ಪ್ರಕೃತಿ ಗೀತೆಗಳಿವೆ. ಗಾಂಧೀಜಿಯ(ಮಿಂಚು), ವೀರಪ್ಪನ್ ನಿಂದ ಅಪಹರಣಗೊಂಡ ರಾಜಕುಮಾರರು, ಅಕಾಲ ಮರಣಕ್ಕೆ ತುತ್ತಾದ ಸಂಗೀತಗಾರ- ಅತ್ರಿಯ ವ್ಯಕ್ತಿಚಿತ್ರಗಳಿವೆ; ಹೆದ್ದಾರಿಯ ನಾಯಿಮರಿ ಮತ್ತು ಗುಜರಾತಿನ ಭೂಕಂಪದಿಂದ ನೊಂದು ಬೆಂದ ಕಂದಮ್ಮಗಳ ಬಗೆಗಿನ ಶೋಕಗೀತೆಗಳಿವೆ; ಕಾರ್ಗಿಲ್ಲಿನಲ್ಲಿ ಪ್ರಾಣಾರ್ಪಣೆ ಮಾಡಿದ ಯೋಧರರನ್ನು ಕುರಿತ ಚರಮ ಕವಿತೆಯಿದೆ; ಸಾಂಸಾರಿಕ ಮತ್ತು ಸಾಮಾಜಿಕ ಕವನಗಳೂ ಇವೆ. ಸಮಾಜದ ಸಂರಕ್ಷಣೆಗೆಂದು ರಚಿಸುವ ಕಾನೂನು ಕಸದ ಬುಟ್ಟಿಗೆ ಸೇರುತ್ತಲಿದೆ, ವಕೀಲರು ಮಧ್ಯೆ ಪ್ರವೇಶಿಸಿ ‘ಹಣವ ದೋಚಲು ಸತ್ಯಕ್ಕೆ ತೊಡಿಸಿ ಸುಳ್ಳಿನ ವೇಷ’ ಕಾನೂನನ್ನು ಮುರಿಯುತ್ತಾರೆ. ಕೋರ್ಟುಗಳಲ್ಲಿ ನಡೆಯುವ ದುರಂತವನ್ನು ‘ಜಡ್ಜ್ ಸಾಹೇಬರು..’ ಎಂಬ ಕವಿತೆಯಲ್ಲಿ ಚಿತ್ರಿಸಿದ್ದಾರೆ.
ಎಂ.ಎನ್. ಮಂಜೇಗೌಡ ಅವರು ಹಾಸನ ಜಿಲ್ಲೆಯ ಮೈಲ್ನ ಹಳ್ಳಿಯವರು. ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಕೃತಿಗಳು: ಎಪ್ಪತ್ತರ ಅರಿವು ...
READ MORE