ಕವಿ ಎ.ಎಸ್. ನದಾಫ್ ಅವರ ಕವನ ಸಂಕಲನ-ಬುದ್ಧ ನಡೆದ ದಾರಿ.40 ಕವನಗಳಿವೆ. ನಿಸರ್ಗ, ದೇಶಭಕ್ತಿ, ಅನುಭಾವ,
ಕೃತಿಗೆ ಮುನ್ನುಡಿ ಬರೆದ ಸಾಹಿತಿ ಸಂಗಮೇಶ ತಮ್ಮನಗೌಡ್ರ ‘ಸಂಕಲನದ ಪ್ರತಿ ಕವಿತೆಯು ಕವಿಯ ಬದುಕಿನ ಅನುಭವದ ದ್ರವ್ಯವಾಗಿ ಪೊಗರದಸ್ತಾಗಿ ಮೂಡಿಬಂದಿವೆ. ನಿರಾಶೆ ಇಲ್ಲ; ಆಶಾವಾದವೇ ಇದೆ. ಬುದ್ಧ ನಡೆದ ದಾರಿಯಂತೆ ಇಲ್ಲಿಯ ಕವಿತೆಗಳು ಜೀವನ ಮೌಲ್ಯವನ್ನು ಗಂಭೀರವಾಗಿ ಸ್ವೀಕರಿಸಿವೆ ಮತ್ತು ಚಿಕಿತ್ಸಕ ಗುಣವನ್ನು ಹೊಂದಿವೆ’ ಎಂದು ಪ್ರಶಂಸಿಸಿದ್ದಾರೆ.
ಎ.ಎಸ್. ನದಾಫ್ (ಅಲ್ಲಾಸಾಬ್ ನದಾಫ್) ಅವರು ಗದಗ ಜಿಲ್ಲೆಯ ಚಿಂಚಿಲಿ-ಕಲ್ಲೂರು ಗ್ರಾಮದವರು. ಹಿಂದಿ ಭಾಷಾ ಶಿಕ್ಷಕರಾಗಿ ನಿವೃತ್ತರಾಗಿದ್ದಾರೆ. ಬುದ್ಧ ನಡೆದ ದಾರಿ-ಕವನ ಸಂಕಲನ. ರಂಗಭೂಮಿ ಇವರ ಆಸಕ್ತಿಯ ಕ್ಷೇತ್ರ. ಗಾಳಿಪಟ ಮತ್ತು ಬಾಲಂಗೋಸಿ, ಜುಂ ಜುಂ ಸ್ವಾಮೀಜಿ, ಮಕ್ಕಳ ರಂಗ ಕುಸುಮ, ಬದುಕಿನ ಬೆಲೆ, ಕಾಗೆ ಮತ್ತು ಗೀಜುಗ, ಮಾತೃಹೃದಯ, ಅದ್ಭುತ ಶಕ್ತಿ, ಸಿಂಧೂರ ತಿಲಕ, ನಿಸರ್ಗ ರಹಸ್ಯ ಹೀಗೆ ಒಟ್ಟು 12 ರಂಗ ಕಿರು ನಾಟಕಗಳನ್ನು ಸೇರಿಸಿ ಮಕ್ಕಳ ರಂಗ ತೋರಣ ಎಂಬ ಏಕಾಂಕ ನಾಟಕಗಳ ಕೃತಿಯನ್ನುಪ್ರಕಟಿಸಿದ್ದಾರೆ. ನಾಟಕಗಳು ವಸ್ತು ವೈವಿಧ್ಯತೆಯಿಂದ ಕೂಡಿವೆ. ...
READ MORE