ಮಾನವೀಯತೆಗಾಗಿ ಸಹಜತೆಯಿಂದ ಮಿಡಿಯುವ ಇಲ್ಲಿಯ ಕವಿತೆಗಳು ಓದುಗನ ಹೃದಯದೊಂದಿಗೆ ಸ್ಪಂದಿಸುತ್ತವೆ. ಈ ಜೀವಸ್ಪಂದನೆಯೇ ‘ಬೊಗಸೆ ಜಲ ಒಂದು ಬೀಜಕ್ಕಾಗಿ’ ಸಂಕಲನದ ಕವಿತೆಗಳ ಜೀವಾಳ. ಜೀವಂತ ಅನುಭವದ ಧ್ವನಿ, ಅಭಿವ್ಯಕ್ತಿಯಾಗಿವೆ.
ಕಾವ್ಯ ಜೋಗಿ ಎಂದೆ ಹೆಸರುವಾಸಿಯಾದ ಎಸ್. ಮಂಜುನಾಥ್ ಅವರು 1960 ಜೋಗದಲ್ಲಿ ಜನಿಸಿದರು. ತಾಳಗುಪ್ಪ ಹಾಸನ ಹಾಗೂ ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಇಂಗ್ಲಿಷ್ ಎಂ.ಎ ಪದವೀಧರರು. ’ಹಕ್ಕಿ ಪಲ್ಟಿ', 'ಬಾಹು ಬಲಿ' 'ನಂದ ಬಟ್ಟಲು' 'ಮೌನದ ಮಣಿ' ಕಲ್ಲ ಪಾರಿವಾಳಗಳ ಬೇಟ' 'ಜೀವಯಾನ' ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ಮುದ್ದಣ ಪ್ರಶಸ್ತಿ, ಪು.ತಿ.ನ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿಗಳು ದೊರಕಿವೆ. ಇವರ ಮತ್ತೊಂದು ಕೃತಿ ‘ಸುಮ್ಮನಿರುವ ಸುಮಾನ’ ಎಂಬ ತಾವೋ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE