‘ಬಿಳಿ ಮುಗಿಲ ಕೆಳಗೆ’ ಸಿ.ಜೀ ಹಿರೇಮಠ ಅವರ ಕವನ ಸಂಕಲನವಾಗಿದೆ. ಈ ಕವನಗಳು ಬರಗಾಲದ ಭೀಕರತೆಯನ್ನು ಬರದ ಕಾರಣದಿಂದ ಸ್ಥಗಿತಗೊಂಡ ಗ್ರಾಮೀಣ ಅಂತರ್ ಸಂಬಂಧೀ ಬದುಕನ್ನು ಸ್ಪಷ್ಟವಾಗಿ ಚಿತ್ರಿಸುತ್ತವೆ. ಕವಿಯಾದವನು ಬದುಕು ಪ್ರಿಯ, ಅವನು ಯುದ್ಧವಿರೋಧಿ ಯಾಗಬೇಕು. ಇಲ್ಲದಿದ್ದರೆ ಅವನು ಕವಿಯಾಗಲಾರ. ಹೆಣಗಳ ಲೆಕ್ಕ ಕೊಡುವ ಗುಮಾಸನಾಗುತಾನೆ. "ಕದನದ ನಂತರದ ಕಳವಳ' ಎಂಬ ಹಿರೇಮಠರ ಕವನ ಯುದ್ಧಸಂಬಂಧೀ ಸಾವುಗಳು, ಕಳೆದುಕೊಂಡ ಸಂಬಂಧಗಳು ಈ ಹಿನ್ನೆಲೆಯು ಕಳವಳವನ್ನು ತಿಳಿಸಿಕೊಡುತ್ತದೆ.
ಹೊಸತು- ಆಗಸ್ಟ್-2002
ಪ್ರಸಾದ ತಲೆಮಾರಿನಿಂದ ತಲೆಮಾರಿಗೆ ಕಾವ್ಯದ ವಸ್ತುವಿನಲ್ಲಿ ಭಿನ್ನತೆ ಎದ್ದು ಕಾಣುವ ಅಂಶ. ಅದಕ್ಕೆ ಸಮಾಜದ ಪರಿವರ್ತನೆಯೂ ಒಂದು ಮುಖ್ಯ ಕಾರಣ. ಒಂದು ಕಾಲದ ಮೌಲ್ಯ ಇಂದಿಗೆ ಪ್ರಸ್ತುತವಲ್ಲ ವೇನೋ ಎಂಬಷ್ಟರ ಮಟ್ಟಿನ ಬದಲಾವಣೆ ಕಾಣಬಹುದು. ಬದಲಾದ ಸಮಾಜಕ್ಕೆ ಸ್ಪಂದಿಸುವ ಹೊಸ ಆಶಯಗಳಿಗೆ ತೆರೆದುಕೊಳ್ಳುವ ಕಾವ್ಯಗುಣ ಇಲ್ಲಿ ಬಿಂಬಿಸಿದೆ. ಒಂದು ವ್ಯವಸ್ಥೆಯಲ್ಲಿನ ದೋಷಗಳನ್ನು ಫಕ್ಕನೆ ನಮ್ಮ ಗಮನಕ್ಕೆ ತಂದು ಅದರಲ್ಲಿನ ಪಾತ್ರವನ್ನು ವಿವರಿಸಲು ಈ ಸಂಕಲನದ ''ಸಾಲಿ ಮಾಸ್ತರ " ಅತ್ಯುತ್ತಮ ಉದಾಹರಣೆಯೆಂದು ಹೇಳಬಹುದು. ಓದಿನೋಡಿ !