ಇಲ್ಲಿಯ ಬಹುಪಾಲು ಕವಿತೆಗಳಲ್ಲಿ ವರ್ತಮಾನದ ರಾಜಕೀಯ ಎಚ್ಚರ ಕಣ್ಣಿಗೆ ರಾಚುತ್ತದೆ. 'ಬಿಕರಿಗಿಟ್ಟ ಕನಸು', 'ಮತದ ಅಂಧರು', 'ವಿಷದ ಸಸಿ', 'ಯಾಕೆ ಬಿಟ್ಟು ಹೋದಿರಿ', 'ಸಮಾಜದ ಸಂತೆ', 'ಎಲ್ಲಿದೆಯೋ ಸ್ವಾತಂತ್ರ್ಯ' ಮುಂತಾದ ಕವಿತೆಗಳು ಭಾರತೀಯ ವರ್ತಮಾನದ ರಾಜಕೀಯ ತಲ್ಲಣಗಳಿಗೆ ಕೈಗನ್ನಡಿಯಾಗಿವೆ. ಇಂದು ಬಿಯಾಸ್, ಜೀಲಂ, ಸತ್ತೆಜಗಳು/ಹನಿ ಹನಿ ಹರಿಯುವ ರಕುತದ ಹೊಂಡಗಳು/ಖೈಬರ್, ಬೋಲಾನ್ಗಳು ಭಯದ ಗುಡಿಸಲುಗಳು/ಅಲ್ಲಲ್ಲಿ ಬಿದ್ದಿರುವ ಹೆಣದ ರಾಶಿಗಳು/ ಬೆಡಗು ಬಿನ್ನಾಣದ ಲತೆ ತರುಲತೆಗಳ/ಬಡಿದೇಳಿಸುತ್ತವೆ ಮದ್ದು, ಗುಂಡು ಬಾಂಬುಗಳು/ಕನವರಿಸುತ ನರಕವೇ ಆಯಿತು' ಎನ್ನುವ ಸಾಲುಗಳಲ್ಲಿ ಕವಿಯ ಆತಂಕವನ್ನು ಕಾಣಬಹುದು.
ಯುವ ಬರಹಗಾರ ದೇವು ಮಾಕೊಂಡ ಅವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದವರು. ಸಿಂದಗಿಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದಾರೆ. ‘ಬಿಕರಿಗಿಟ್ಟ ಕನಸು, ಹೆಗ್ಗೇರಿಸಿದ್ದ ಚರಿತೆ’ ಅವರ ಪ್ರಕಟಿತ ಕವನ ಸಂಕಲನಗಳು. ಹಲವಾರು ಲೇಖನಗಳು ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ. ಗುರುರತ್ನ, ವಿದ್ಯಾಸಿರಿ ವಿಷಾರದ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹಸ್ತಪ್ರತಿ ಬಹುಮಾನ, ಆಕಾಶವಾಣಿ ಭದ್ರಾವತಿಯಿಂದ ಪ್ರತಿಭಾ ಪ್ರಶಂಸಾ ಪ್ರಶಸ್ತಿಗಳು ಲಭಿಸಿವೆ. ಅಲ್ಲದೇ ವಿಜಯಪುರ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮೀರವಾಡಿ ದತ್ತಿ ಪ್ರಶಸ್ತಿಯೂ ದೊರೆತಿದೆ. ...
READ MORE