ಲೇಖಕಿ ಶಿವಲೀಲಾ ಹುಣಸಗಿ ಅವರ ಕವನಗಳ ಸಂಕಲನ-ಬಿಚ್ಚಿಟ್ಟ ಮನ. ಅಂತರಂಗದ ಶೋಧನೆಯಿಂದ ಕವನಗಳು ಮೂಡಿಬಂದಿವೆ.ಪರಿಸರದ ಕಾಳಜಿ, ಮಾನವ ಸಂಬಂಧದ ಪ್ರೀತಿ, ಸಾಮರಸ್ಯ, ದೇಶಭಕ್ತಿ, ನಾಡಭಕ್ತಿ,ಜೀವನ ಪ್ರೀತಿ, ಸಖನ ಸಾಮೀಪ್ಯದಾ ರಂಗು, ಸಿಟ್ಟು, ಆಕ್ರೋಶ,ಸ್ನೇಹ ಹೀಗೆ ವಸ್ದತು ವೈವಿಧ್ಯತೆಗಳಿರುವ ಕವನಗಳಿವೆ. ಕವಿಯ ಮನೋಭಿಲಾಷೆಯನ್ನು ಕವನಗಳು ಸುಂದರವಾಗಿ ಹಿಡಿದಿವೆ.
ಕೃತಿಗೆ ಮುನ್ನುಡಿ ಬರೆದ ಹಿರಿಯ ಸಾಹಿತಿ ನಾ.ಸು. ಭರತನಳ್ಳಿ ‘ ಕವಯತ್ರಿ ಶಿವಲೀಲಾರವರಲ್ಲಿ ಹುಟ್ಟಿಕೊಂಡ ಮನದಾಳದ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡು ಅಭಿವ್ಯಕ್ತಿಗೊಂಡ ಅನೇಕ ಕವನಗಳನ್ನು ಈ ಸಂಕಲನದಲ್ಲಿ ಕಾಣಬಹುದು. ಒಮ್ಮೊಮ್ಮೆ ಅನುಭವಗಳ ಪ್ರಶ್ನೆಗಳು ಕವಿ ಸಮಯಕ್ಕೂ ದಕ್ಕದೇ ಪ್ರಶ್ನೆಗಳಾಗಿ ಉಳಿಯುವುದರುತ್ತದೆ. ‘ಭಾವನೆಗಳ ಕಲ್ಪನೆಗಳ ಹೊರಹೊಮ್ಮಿಸಿ ಕೆಣಕುವ ನಿನ್ನೆದೆಯಲಿ/ ನಾ ಏನೆಂದು ಬರೆಯಲಿ?’ಹೀಗೆಂದು ಕೇಳಿ ಬಿಡುವ ಕವನದ ಸಾಲುಗಳು ಅರ್ಥಗರ್ಭಿತವಾಗಿದೆ. ಕಾವ್ಯರಸವು ಉಕ್ಕಿ ಬರುವುದು ಪ್ರತಿಮಾರೂಪಕಗಳನ್ನು ಬಳಸುವುದರಲ್ಲಿರುತ್ತದೆ. ಮನುಷ್ಯ ತನ್ನ ಅವಸ್ಥಾಂತರ, ಸ್ಥಿತ್ಯಂತರಗಳನ್ನು ತನ್ನನ್ನೂ ತಾನೆ ಕಂಡುಕೊಳ್ಳಬಹುದಾದುದು.'ಮನದ ಕನ್ನಡಿಯಲ್ಲಿ' ಎಂಬ ಪ್ರೌಢ ಸಂಗತಿಯನ್ನು ಕವಯತ್ರಿ ತಮ್ಮ ದರ್ಪಣ ಎಂಬ ಕವನದಲ್ಲಿ ಬಹುಸುಂದರ ಪ್ರತಿಮಾ ರೂಪಕದಲ್ಲಿ ಕಟ್ಟಿಕೊಟ್ಟಿರುವುದು ಕವಿತ್ವದ ಸತ್ವವನ್ನು ಮೆರೆಸುತ್ತದೆ. ಈ ಕವಯತ್ರಿಯ ಕಾವ್ಯ ಕ್ರಿಯೆಯು ಬಾಹ್ಯ ಲೋಕದ ನಮ್ಮ ದೃಷ್ಟಿ ಗೋಚರ ಸಂಗತಿಯ ಪ್ರತಿಕ್ರಿಯೆಗಳಿಗಿಂತಲೂ ಮಿಕ್ಕಿ ಮನದಾಳದಲ್ಲಿ ಅಂತರಂಗವ ಕುಲಕುವ ಸ್ಪಂದನೆಗಳತ್ತ ಹೆಚ್ಚು ವಾಲಿರುವುದನ್ನೂ,ಅಲ್ಲೊಂದು ಪರಿಪಕ್ವ ತುಂಬಿ ಹೊರಬಂದುದನ್ನೂ ಕಾಣುತ್ತೇವೆ. ಭಾವಸ್ಪಂದನೆಯಲ್ಲಿಯೂ ಸಾಚಾತನ, ಅಪ್ಪಟತೆಯನ್ನೂ ಗುರುತಿಸಬಹುದು.ವಸ್ತು ಭಿನ್ನತೆಯಲ್ಲಿಯೂ ಕೂಡ ವಾಹಿನಿಯ ಏಕಾಗ್ರತೆಯನ್ನು ಸಾಧಿಸಿರುವುದು ವೇದ್ಯ’ ಎಂದು ಪ್ರಶಂಸಿಸಿದ್ದಾರೆ. .
ಕವಯತ್ರಿ ಶಿವಲೀಲಾ ಹುಣಸಗಿ ಅವರು ಎಂ.ಎ, ಬಿ.ಎಡ್ ಪದವೀಧರರು. ಉತ್ತರ ಕನ್ನಡ ಜಿಲ್ಲೆಯ ಅರಬೈಲ್ ಗ್ರಾನಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ದ್ದಾರೆ. ಕಥೆ,ಕವನ,ಲಹರಿ,ಲೇಖನ, ಟಂಕಾ, ಹಾಯ್ಕುಗಳು, ರುಬಾಯಿ,ಗಝಲ್, ಪುಸ್ತಕ ವಿಮರ್ಶೆ, ಅಂಕಣ ರಹಗಳು, ಹಾಡುವುದು, ಓದುವುದು, ಚಿತ್ರಬಿಡಿಸುವುದು, ಉಪನ್ಯಾಸ, ನೃತ್ಯ, ರೇಡಿಯೋದಲ್ಲಿ ಸ್ವರಚಿತ ಕವನ ವಾಚನ, ಹಿರಿಯ ಸಾಹಿತಿ-ಕಲಾವಿದರ ಸಂದರ್ಶನ ನಡೆಸುವುದು, ಶಾಲಾ ಮಕ್ಕಳಿಗೆ ಅನುಕೂಲವಾಗುವ ಕಿರು ನಾಟಕಗಳು, ರೂಪಕಗಳು. ನಿರೂಪಣೆ.ಇತ್ಯಾದಿ ಇವರ ಹವ್ಯಾಸಗಳು. ಬೆಂಗಳೂರು, ಕಾರವಾರ, ಧಾರವಾಡ ಕೇಂದ್ರದಿಂದ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಮಕ್ಕಳಿಗೆ ವಿಶೇಷವಾಗಿ ಬಾಂಧವ್ಯದ ಮೆರಗು ಅಂಕಣ ಪ್ರಕಟಗೊಳ್ಳುತ್ತಿದೆ. ಶಿಕ್ಷಕರ ಕಲ್ಯಾಣ ನಿಧಿಯಿಂದ ನಡೆಸುವ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ...
READ MORE