ಭೂಮಿ ತಿರುಗುವ ಶಬ್ದ

Author : ಚನ್ನಪ್ಪ ಅಂಗಡಿ

Pages 80

₹ 60.00




Year of Publication: 2014
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಚನ್ನಪ್ಪ ಅಂಗಡಿ ಅವರ ಕವನ ಸಂಕಲನ ’ಭೂಮಿ ತಿರುಗುವ ಶಬ್ದ’. ಸುಮಾರು ೬೦ ಕವನ ಸಂಕಲನಗಳು ಕೃತಿಯಲ್ಲಿದ್ದು 2011ರ ವಿಭಾ ಸಾಹಿತ್ಯ ಪುರಸ್ಕಾರಕ್ಕೆ ಪಾತ್ರವಾಗಿದೆ. 

ಸಣ್ಣ ಸಣ್ಣ ಸಂಗತಿಗಳಲ್ಲೇ ಅಧ್ಯಾತ್ಮದ  ಹೊಳಹುಗಳನ್ನು ಕಾಣುವ, ಪರಿಸರದ ವಿಸ್ಮಯಗಳನ್ನು ಬೆರಗುಗಣ್ಣಿನಿಂದ ನೋಡುವ ಕವಿತೆಗಳು ಇಲ್ಲಿವೆ. ಕೃತಿ ಕುರಿತು ಕವಿ ಎಸ್‌. ಜಿ. ಸಿದ್ದರಾಮಯ್ಯ ಅವರು ಆಡಿರುವ ಮಾತು ಹೀಗಿದೆ: ’ತಳಸಮುದಾಯಗಳ ಸಾಂಸ್ಕತಿಕ ಸಮೃದ್ಧಿಯಿಂದ ಮಾತನಾಡುವ ಇಲ್ಲಿನ ಕವನಗಳು ಸಾಮಾಜಿಕ ರಾಜಕೀಯ ವಿಚಾರಗಳಿಗೆ ಪರ್ಯಾಯ ಚಿಂತನೆಯನ್ನು ಬಳಸುವ ಸೂಕ್ಷತೆಯಿಂದ ಕೂಡಿವೆ. ವಚನ ಚಳುವಳಿಯ ಆಶಯಗಳನ್ನು ಚಿಂತನೆಯ ಗರ್ಭದಲ್ಲಿ ತುಂಬಿಕೊಂಡಿದ್ದರೂ ಅದು ಸಮಮೂಲದ ವಚನಕಾರರ ಸಂವೇದನೆಯ ನೆಲೆಯಲ್ಲಿ ಬೇರುಬಿಟ್ಟ ಬೆಳೆಯಾಗಿದೆ. ಸಹಜವಾಗಿ ಜನಪದ ಬದುಕಿನ ಜೀವಪರ ಮೌಲ್ಯಗಳ ಹಾದಿಯಲ್ಲಿ ಬದುಕಿನ ಗಂತವ್ಯವನ್ನು ನಿರೀಕ್ಷಿಸುವದಾಗಿದೆ. ಘಟವೃಕ್ಷ, ಗಳಿಗೆಬಟ್ಟಲು, ತಾಯಿಪದ ಕಲ್ಯಾಣದ ಮುಂದಿನ ದಾರಿ ಮುಂತಾದ ಕವನಗಳು ಈ ಪರಿಯ ದಾರಿಯಲ್ಲಿ ಕ್ರಮಿಸಿವೆ. ಇನ್ನು ಹಲವು ಕವನಗಳು ನಗರ-ಹಳ್ಳಿ ಬದುಕಿನ ಸಂಘರ್ಷಾತ್ಮಕ ನಡೆಯನ್ನು ವಿಶ್ಲೇಷಣೆಗೆ ಒಡ್ಡಿದಂತೆ ಮೂಡಿವೆ. ಕವಿತೆಗಳು ಇಲ್ಲೆಲ್ಲಾ ಬಳಕೆಯಾದ ರೂಪಕ ಶೈಲಿಯ ಭಾಷೆ ಕನ್ನಡದ ವ್ಯವಸಾಯ ಸಂಸ್ಕೃತಿಯ ಮೂಲದಿಂದ ಬೆಳೆದ ಬೆಳಸಾಗಿದೆ.’

About the Author

ಚನ್ನಪ್ಪ ಅಂಗಡಿ
(15 April 1970)

ಚನ್ನಪ್ಪ ಅಂಗಡಿ ಅವರು  ಎಮ್ ಎಸ್ ಸಿ (ಕೃಷಿ)  ಸಹಾಯಕ ಕೃಷಿ ನಿರ್ದೇಶಕರಾಗಿದ್ದಾರೆ.   ಇವರು ಜನಿಸಿದ್ದು15.04.1970, ಬಮ್ಮನಹಳ್ಳಿ ಹಾವೇರಿ ಜಿಲ್ಲೆಯಲ್ಲಿ.   ಮಂದ ಬೆಳಕಿನ ಸಾಂತ್ವನ, ಭೂಮಿ ತಿರುಗುವ ಶಬ್ದ (ಕವನಸಂಕಲನ), ಮಣ್ಣಿನೊಳಗಣ ಮರ್ಮ, ಕಿಬ್ಬದಿಯ ಕೀಲುಳುಕಿ (ಕಥಾಸಂಕಲನ), ಎದೆಯ ಒಕ್ಕಲಿಗ (ವೈಚಾರಿಕ), ಕೃಷಿ ಕಾರಣ ಸಂಪಾದನೆ : ಮಡಿಲು, ಕಾಯಕಯೋಗಿ, ಕದಂಬ, ಬಿತ್ತೋಣ ಹತ್ತಿ ಬೆಳೆಯೋಣ, ಗಿಡಗಂಟೆಗಳ ಕೊರಳು ಕೃತಿಗಳನ್ನು ರಚಿಸಿದ್ದಾರೆ. ಭೂಚೇತನ ಪ್ರಶಸ್ತಿ , ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಕಾವ್ಯ), ಮುದ್ದಣ ರತ್ನಾಕರವರ್ಣಿ ಅನಾಮಿಕ (ಕಸಾಪ) ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ, ...

READ MORE

Awards & Recognitions

Related Books