“ಭಾವಸಿರಿ” ಕವನ ಸಂಕಲನ ನವಿರಾದ 50 ಭಾವಪೂರ್ಣ ಕವಿತೆಗಳ ಸಂಗ್ರಹ. ಸರಾಗವಾಗಿ ಓದಿಸಿಕೊಳ್ಳುವ ಇಲ್ಲಿನ ಕವಿತೆಗಳು ಮನುಷ್ಯನ ಭಾವಕೋಷವನ್ನು ತಣ್ಣಗೆ ತಟ್ಟುವ ಕೆಲಸವನ್ನು ಮಾಡುತ್ತವೆ. ಲಯದ ನಡಿಗೆಯ ಸೊಗಸನ್ನು ಹೊಂದಿರುವ ಇಲ್ಲಿನ ಕವಿತೆಗಳು ಹಾಡಾಗಿ ಹೊರಹೊಮ್ಮುವಂತಿವೆ. ಇದೇ ಹೆಸರಿನ ಭಾವಸಿರಿ ಭಾವಗೀತೆಗಳ ಧ್ವನಿಸಾಂದ್ರಿಕೆಯಲ್ಲಿ ಇಲ್ಲಿನ ಹತ್ತು ಕವಿತೆಗಳು ಭಾವಗೀತೆಗಳಾಗಿ ಕೇಳುಗರ ಮನಸ್ಸನ್ನು ಮುದಗೊಳಿಸುತ್ತವೆ. ಭಾವ ಪ್ರಪಂಚದ ವ್ಯವಹಾರಗಳಿಗೆ ಪದವಾಗಿ, ಧ್ವನಿಯಾಗಿ ಮೂಡಿರುವ ಇವುಗಳಿಗೆ ಭಾವಸಿರಿಯೆಂಬುದು ಸೂಕ್ತವೆಂಬುದು ಕವಿಯ ಅಭಿಮತ… ಕವಿತೆಗೆ ಒಗ್ಗುವ ಚಿತ್ರಗಳೊಂದಿಗೆ ನವಿರಾಗಿ ಮೂಡಿಬಂದಿರುವ ಕವನ ಸಂಕಲನ ಓದುಗರಿಗೆ ಮುದನೀಡುವುದರಲ್ಲಿ ಸಂಶಯವಿಲ್ಲ
ಸರ್ವೇಶ್ ಬಂಟಹಳ್ಳಿ ಅವರು ಕನ್ನಡ ಅಧ್ಯಾಪಕರಾಗಿ ವೃತ್ತಿನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಕವಿ, ಹವ್ಯಾಸಿ ಫೋಟೋಗ್ರಫರ್, ಭಾವಗೀತೆಗಳ ಗಾಯಕ. ಎನ್.ಸಿ.ಸಿ. ಅಧಿಕಾರಿ. ಕವಿತೆ, ಕಥೆ, ಲಲಿತ ಪ್ರಬಂಧ, ಅಂಕಣ ಬರಹ ಆಸಕ್ತಿಯ ಕ್ಷೇತ್ರ. ಕೃತಿಗಳು : ಭಾವಸಿರಿ ...
READ MORE