‘ಭಾವನದಿ’ ಕೃತಿಯು ಎಂ.ಎನ್. ಮಂಜೇಗೌಡ ಅವರ ಕವನಸಂಕಲನವಾಗಿದೆ. ಇಲ್ಲಿನ ಕವನ ‘ನಮ್ಮ ಊಡರಿನ ಒಂದು ನೋಟ’ ದಲ್ಲಿ ಗ್ರಾಮೀಣ ಪರಿಸರದ ಚೆಲುವಿನ ಚಿತ್ರಣವನ್ನು ಕವಿ ಅನನ್ಯವಾಗಿ ನೀಡಿದ್ದಾರೆ. ಇನ್ನು ‘ಪುರುಷ ಶಕ್ತಿ’ ಕವನದಲ್ಲಿ ಯುವಶಕ್ತಿ ಎತ್ತ ಸಾಗಿದೆ? ಎಂಬುದರ ವಿಮರ್ಶಾತ್ಮಕ ದೃಷ್ಟಿಕೋನವಿದೆ. “ಬಸ್ಸು” ಕವನವು ಸಾಮಾಜಿಕ ಪರಿಸರದ ಬಗ್ಗೆ ಕಟಕಿ, ವ್ಯಂಗ್ಯನೋಟ ಕಾಣಿಸಿದೆ. “ನೆನಪು ಕನ್ನಡ ಸಾಹಿತ್ಯ ಸರಿತೆ ಹರಿದ ಬಗೆಯನ್ನು ಜ್ಞಾಪಿಸಿಕೊಂಡಿದೆ. ‘’ರೈತನ ಬಾಳು’ ನಿಜಕ್ಕೂ ವಾಸ್ತವ ಚಿತ್ರ ನೀಡುತ್ತದೆ.“ಮಿಡಿತ ” ದಲ್ಲಿ ನೂತನ ಲಯಗಾರಿಕೆ ಇಣುಕಿದೆ. “ಸಂದೇಶ” ದಲ್ಲಿ ಉಪದೇಶ ಪ್ರತಿಧ್ವನಿಸಿದೆ. “ಪ್ರತಿಮೆ” ವಿವೇಕಾನಂದರ ಬಗ್ಗೆ ಕವಿಯ “ನುಡಿ ನಮನ” ವಾಗಿದೆ. “ಬಾ ಶಾರದೆ, ಹೃದಯದ ಹತ್ತಿರಕೆ ನಾ ಏರಲಾರೆನು ನಿನ್ನ ಎತ್ತರಕೆ” -ಸಾಲುಗಳಲ್ಲಿ ಕವಿ, ವಾಗ್ದೇವಿಯ ದಿಗ್ದಿಗಿಂತ ಕೀರ್ತಿಯ ಎತ್ತರಕೆ ನಾ ಏರಲಾರೆ ಎಂಬ ಸಹಜ ಆತ್ಮವಿಮರ್ಶೆ ಇದೆ. ಅದು ಕವಿಯ ವಿನಯವಂತಿಕೆಯನ್ನೂ ನುಡಿ ನಮ್ರತೆಯನ್ನೂ ಚೆನ್ನಾಗಿ ಸೂಚಿಸುತ್ತದೆ. ‘ಪಶ್ಚಾತ್ತಾಆಪ” ಕವಿತೆಯಲ್ಲಿ ಕವಿಯ ಪರಿತಾಪದ ಮಾರ್ದನಿಯಿದೆ.
ಎಂ.ಎನ್. ಮಂಜೇಗೌಡ ಅವರು ಹಾಸನ ಜಿಲ್ಲೆಯ ಮೈಲ್ನ ಹಳ್ಳಿಯವರು. ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಕೃತಿಗಳು: ಎಪ್ಪತ್ತರ ಅರಿವು ...
READ MORE