‘ಭಾವ ಬಾಂದಳದ ಗೇಯ ಗೀತೆಗಳು’ ಕೃತಿಯು ಶ್ಯಾಮಲಾ ಕುಲಕರ್ಣಿ ಅವರ ಕವನ ಸಂಕಲನವಾಗಿದೆ. ರಾಗ, ವಿವರಣೆಯೊಂದಿಗೆ ಲಯಬದ್ಧವಾಗಿ ಬರೆದ ಭಕ್ತಿಗೀತೆಗಳು, ಭಾವಗೀತೆಗಳು, ದೇವತೆಗಳ ಸ್ತುತಿ ಮಹತಿಗಳನ್ನು ಒಳಗೊಂಡಿದೆ. ಒಟ್ಟು 100 ಕವನಗಳಿವೆ. ಸಮಾಜದ ಆಗು-ಹೋಗುಗಳು ಸೇರಿದಂತೆ ವಸ್ತು ವೈವಿಧ್ಯತೆ ಇದೆ. ನಿರೂಪಣಾ ಶೈಲಿಯೂ ಆಕರ್ಷಕ ಹಾಗ ಪರಿಣಾಮಕಾರಿಯಾಗಿದೆ.
ಓದು, ಬರಹ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಾಹಿತ್ಯ ಲೋಕಕ್ಕೆ ಹೆಜ್ಜೆ ಇರಿಸಿದ ಲೇಖಕಿ ಶ್ಯಾಮಲಾಕುಮಾರಿ ಬೇವಿಂಜೆ. ಅವರು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಜನಿಸಿದರು. ತಂದೆ ಶ್ರೀಧರ ಕಕ್ಕಿಲ್ಲಾಯ ತಾಯಿ ಸರೋಜಿನೀದೇವಿ. ಕಾರ್ಕಳದ ಎಸ್.ವಿ.ಟಿ. ಮಹಿಳಾ ಪದವಿಪೂರ್ವ ವಿದ್ಯಾಲಯದಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿಯಾಗಿ ಹಾಗೂ ಪ್ರಾಂಶುಪಾಲೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಆಂಗ್ಲ ಭಾಷೆ ಹಾಗೂ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರೆ. ‘ಉದಯವಾಣಿ’ ಹಾಗೂ ‘ತರಂಗ’ ಪತ್ರಿಕೆಗಳಲ್ಲಿ ಅವರ ಬರಹಗಳು ಪ್ರಕಟವಾಗಿವೆ. ಕಾರ್ಕಳದ ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಸ್ಥಾಪಕ ಅಧ್ಯಕ್ಷೆ, ಉಡುಪಿ ಜಿಲ್ಲಾ ಪದವಿಪೂರ್ವ ಇಂಗ್ಲಿಷ್ ಉಪನ್ಯಾಸಕರ ಸಂಘದ ಸ್ಥಾಪಕ ಅಧ್ಯಕ್ಷೆ, ಉಡುಪಿ ಜಿಲ್ಲಾ ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷೆ ...
READ MORE