ಭಾವೋನ್ಮಾದಿನಿ

Author : ಬಾಗೂರು ಮಾರ್ಕಾಂಡೇಯ

Pages 56




Year of Publication: 1998
Published by: ಶ್ರೀ ರಾಘವೇಂದ್ರ ಪ್ರಕಾಶನ
Address: ನಂ 21, 2ನೇ ತಿರುವು, 10ನೇ ಮುಖ್ಯರಸ್ತೆ, ಗುರುರಾಜ ಬಡಾವಣೆ, ಬನಶಂಕರಿ ಮೂರನೇ ಹಂತ, ಬೆಂಗಳೂರು-85
Phone: 9845313583

Synopsys

ಭಾವೋನ್ಮಾದಿನಿ-ಕವಿ ಬಾಗೂರು ಮಾರ್ಕಾಂಡೇಯ ಅವರು ಬರೆದ ಭಾವಗೀತೆಗಳ ಸಂಕಲನ. 39 ಕವಿತೆಗಳಿವೆ. ಸಾಹಿತಿ ವಿಜಯ ಸಾಸನೂರ ಅವರು ಬರೆದ ಮುನ್ನುಡಿಯಲ್ಲಿ ‘ಕವಿಯಲ್ಲಿ ಭಾವನೆಗಳು ಇವೆ, ಅವುಗಳಿಗೆ ಸುಂದರ ಸ್ವರೂಪವನ್ನು ಕೊಡುವ ಕಲ್ಪನಾ ಶಕ್ತಿಯೂ ಇದೆ. ಅವರ ಕವಿತೆಗಳಲ್ಲಿ ಪ್ರೀತಿ ಪ್ರಕೃತಿ ದೇಶಭಕ್ತಿ, ನಾಡು ನುಡಿಯ ಬಗ್ಗೆ ಸುಂದರವಾಗಿ ಮೂಡಿಬಂದಿದೆ’ ಎಂದು ಪ್ರಶಂಸಿಸಿದ್ದಾರೆ.

‘...ತಾಯೆ ಭಾರತಿ ಹೃದಯದಾರತಿ ನಿನಗೆ ನಮ್ಮಯ ಪ್ರಣಾಮವು ವಿಶ್ವಮಾನ್ಯತೆ ಪಡೆದ ಸಂಸ್ಕೃತಿ ನಿನಗೆ ಜಯ ಜಯಘೋಷವು....’  ಎಂಬ ದೇಶಭಿಮಾನ ಅನುರಣಿಸುತ್ತದೆ. ‘..ಹೆಂಡ್ತಿ ಅಂದ್ರೆ ಏನಂದ್ಕೊಂಡ್ರಿ ಬೂದಿ ಮುಚ್ಚಿದ ಕೆಂಡ ಹೇಳೋದಕ್ಕೆಲ್ಲಾ ತಲೆ ಆಡಿಸದಿದ್ರೆ ಬೀಳುತ್ತೆ ತಲೇಗೆ ದಂಡ...’ ಎಂಬ ನವಿರಾದ ಹಾಸ್ಯವೂ ಕವಿತೆಗಳ ಜೀವಾಳವಾಗಿವೆ. 

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books