ಭಾವಶಿಲ್ಪ -ಕವಿ ಬಾಗೂರು ಮಾರ್ಕಾಂಡೇಯ ಅವರು ಬರೆದ ಭಾವಗೀತೆಗಳ ಸಂಕಲನ. 38 ಭಾವಗೀತೆಗಳಿವೆ ಕೆಲವು ಕವಿತೆಗಳನ್ನು ಸಂಗೀತ ನಿರ್ದೇಶಕರು ಸ್ವರಸಂಯೋಜನೆ ಮಾಡಿದ್ದು, ಗಾಯಕರು ಹಾಡಿದ್ದಾರೆ.
‘ಋಣಿಯು ಚಿರಋಣಿಯು ನಾನು ನಿಮಗೆ ಬರಿಮಣ್ಣಿಗಿಷ್ಟು ಆಕಾರ ಜೀವ ಕೊಟ್ಟ ಕೃಪೆಗೆ.... ’ ಎನ್ನುವ ಕೃತಜ್ಞತೆಯ ಮಾತುಗಳನ್ನು ಕವಿತೆಗಟ್ಟಿದ್ದಾರೆ. ತನ್ನ ನಲ್ಲೆಗೆ ‘ಸಂಗೀತಯಾಗುವುದಾದರೆ ಹೀಗೆ ಬಾ ಎಂದಿದ್ದಾರೆ.... ನಡೆದು ಬಾ ನನ್ನೊಡನೆ ಒಲವಿನ ದಾರಿಯಲೊಮ್ಮೆ ಎನ್ನೆದೆಯನಾಳುವ ಹೊಂಗನಸಿನ ಭಾವದರಸಿ..... ಕೊನೆಯ ಕವಿತೆಯಲ್ಲಿ ಎನ್ನ ಒಳ ಸಂವೇದನೆಯ ಭಾವಗಳನು ನುಡಿಯೊಡಲಲಿ ಕಟ್ಟಿಕೊಟ್ಟಿರುವೆನು ಎನ್ನುತ್ತಾರೆ.. ಪ್ರೀತಿ ಪ್ರಕೃತಿಯ ಬಗೆಗಿನ ಇವರ ಕವಿತೆಗಳೂ ಸಂಕಲನದಲ್ಲಿ ಅಡಕವಾಗಿವೆ.
ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ, ಚೈತ್ರ ಚೆಲುವು, ಸುವರ್ಣಪುತ್ಥಳಿ, ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...
READ MORE