‘ಭಾವಕ್ಷೀರ’ ಬಿದರಹಳ್ಳಿ ನರಸಿಂಹಮೂರ್ತಿ ಅವರ ಕವನ ಸಂಕಲನ. ತೀವ್ರತೆಯಿಂದ ತುಡಿಯುವ ಇಲ್ಲಿಯ ಕವಿತೆಗಳಲ್ಲಿ ವಿಚಾರ ಮತ್ತು ಭಾವಗಳ ಡಿಕ್ಕಿ ಸೆಣಸಾಟದಲ್ಲಿ ಮುಳುಗುತ್ತದೆ. ಜೀವಧಾತುವಿನ ಹುಡುಕಾಟ ಕೂಡ ಇದರೊಂದಿಗೆ ಹುದುಗಿಕೊಂಡಿರುತ್ತದೆ. ಕವಿತೆಗಳನ್ನು ಕಟ್ಟುವಾಗ ನಾವಿನ್ಯತೆಯಿಂದ ಒಡಮೂಡುವ ಹೊಸಪದಗಳ ಸೃಷ್ಟಿಯೂ ಇಲ್ಲೆಲ್ಲಾ ಕುಣಿದಾಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಸಾಂಸ್ಕೃತಿಕ ಬೇರುಗಳತ್ತ ಹೊರಳುವ ಮನೋಭೂಮಿಕೆ ಈ ಕವಿಯಲ್ಲಿ ಬಸವಣ್ಣ, ಬುದ್ಧ, ಏಸುವಿನಂಥವರ ಪ್ರಸ್ತುತತೆಗೆ ಪ್ರತಿಬಿಂಬಾತ್ಮಕ ಭಿತ್ತಿಯೂ ಆಧ್ಯಾತ್ಮಿಕ ತಳಮಳವೂ ಕಾಣಿಸಿಕೊಳ್ಳುತ್ತವೆ.
ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಸಂಪಾದಕ, ಅನುವಾದಕ ಹೀಗೆ ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಬಿದರಹಳ್ಳಿ ನರಸಿಂಹಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ. ಇಂಗ್ಲಿಷ್ ಉಪನ್ಯಾಸಕರಾಗಿ ಸರ್ಕಾರಿ ಸೇವೆಗೆ ಸೇರಿ ಪ್ರಿನ್ಸಿಪಲ್ ಆಗಿ ನಿವೃತ್ತರಾಗಿ ಹೊನ್ನಾಳಿಯಲ್ಲೇ ನೆಲೆಸಿದ್ದ ಬಿದರಹಲ್ಳಿಯವರು ಹೆಚ್ಚೂ ಕಡಿಮೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿಮಾಡಿದ್ದಾರೆ. ಅವರ ಪ್ರಕಟಿತ ಕೃತಿಗಳು: ಕಾವ್ಯ: ಕಾಡಿನೊಳಗಿದೆ ಜೀವ(1979), ಸೂರ್ಯದಂಡೆ(1996), ಅಕ್ಕಿಕಾಳು ನಕ್ಕಿತಮ್ಮ(2001), ಭಾವಕ್ಷೀರ(2006), ಅಕ್ಕನೆಂಬ ಅನುಭಾವಗಂಗೆ(2017) ಕಥಾಸಂಕಲನ: ಶಿಶು ಕಂಡ ಕನಸು(1993, 2005), ಹಂಸೆ ಹಾರಿತ್ತು(2000, 2010), ನೀರಾಳ ಸೊಲ್ಲು(2017), ಸಸಿಯ ...
READ MORE