ಕವಿ ಲಿಂಗಾರೆಡ್ಡಿ ಸೇರಿ ಅವರ ಕವನ ಸಂಕಲನ-ಬೇಸೂರಿನ ಹಾಡು. ವಸ್ತು ವೈವಿಧ್ಯತೆ, ನಿರೂಪಣಾ ಶೈಲಿ, ಸಾಮಾಜಿಕ ಹೊಣೆಗಾರಿಕೆಯ ಎಚ್ಚರ ಇರುವ ಕವನಗಳು ತಮ್ಮದೇ ವೈಶಿಷ್ಟ್ಯತೆಯಿಂದ ಓದುಗರ ಗಮನ ಸೆಳೆಯುತ್ತವೆ. ಸಾಮಾಜಿಕ ವಿದ್ಯಮಾನಗಳಿಗೆ ಇಲ್ಲಿಯ ಕವನಗಳು ಸ್ಪಂದಿಸಿವೆ. ಮೋಸ-ವಂಚನೆಗಳಿಗೆ ವ್ಯಂಗ್ಯವಾಡಿವೆ. ಸಂಕಲನದಲ್ಲಿ ಒಟ್ಟು 30 ಕವನಗಳಿವೆ. ಖ್ಯಾತ ಕಾದಂಬರಿಕಾರ ಕುಂ. ವೀರಭದ್ರಪ್ಪ (ಕುಂವೀ) ಕೃತಿಗೆ ಮುನ್ನುಡಿ ಬರೆದು ‘‘ನನಗೆ ತುಂಬ ಇಷ್ಟವಾದ ಕವಿತೆ ಎಂದರೆ 'ಹೋದವನು ಕರಿ ಹನುಮ' ಎಂಬ ನೀಳ್ಗವನ. ಇದು ಕನ್ನಡ ಕಾವ್ಯ ಲೋಕದಲ್ಲಿ ಕೆಲಕಾಲ ಉಳಿಯಬಹುದಾದ ಕಾವ್ಯ. ಉತ್ತರ ಕರ್ನಾಟಕದ ಆಡುನುಡಿಯನ್ನು ಸಮರ್ಥ ರೀತಿಯಲ್ಲಿ ದುಡಿಸಿಕೊಳ್ಳಬಲ್ಲ ಛಾತಿಯುಳ್ಳವರು’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ಲಿಂಗಾರೆಡ್ಡಿ ಸೇರಿ ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಜಾಕನಹಳ್ಳಿ ಗ್ರಾಮದವರು. ತಂದೆ ಬಸರೆಡ್ಡಿ, ತಾಯಿ ವೀರಮ್ಮ. ಜಾಕನಹಳ್ಳಿ, ಕೊಲಕುಂದಾ ಹಾಗೂ ಮದನಾ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಪೂರೈಸಿದರು. ಕಲಬುರಗಿಯ ಎಸ್.,ಬಿ. ಕಲಾ ಮಹಾವಿದ್ಯಾಲಯದಲ್ಲಿ ಪಿಯುಸಿ, ಕರ್ನಾಟಕ ವಿವಿ ಯಿಂದ ಬಿ.ಎ, ಹಾಗೂ ಬೆಂಗಳೂರು ವಿ.ವಿ.ಯಿಂದ ಬಿ.ಇಡಿ, ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಿಂದ ತೆಲುಗು ಭಾಷೆಯಲ್ಲಿ ಡಿಪ್ಲೊಮಾ ಹಾಗೂ ಕರ್ನಾಟಕ ವಿ.ವಿ.ಯಿಂದ ಎಂ.ಎ. (ಬಾಹ್ಯ) ಪದವೀಧರರು. ಸಿರಿಗೆರೆಯ ಶ್ರೀ ತರಳಬಾಳು ವಿದ್ಯಾ ಸಂಸ್ಥೇಯಲ್ಲಿ ಶಿಕ್ಷಕ ವೃತ್ತಿ ಆರಂಭ, ನಂತರ ಅವರು ಕಡಕೋಳ, ತೂಲಹಳ್ಳಿ, ರಾಣೇಬೆನ್ನೂರು ಹೀಗೆ ...
READ MORE