ಬೆಂಕ(ಬೆಂಗಳೂರು ಕನ್ನಡಿಗ) ಕನ್ನಡ ನಾಡು-ನುಡಿಯ ಸೇವೆಗೆ ತಮ್ಮ ಬದುಕನ್ನೇ ಸಮರ್ಪಿಸಿಕೊಂಡು ಕನ್ನಡ ಭಾಷೆ-ಇತಿಹಾಸ-ಪರಂಪರೆಯನ್ನು ಹಾಡಿ ಹೊಗಳಿ ಕನ್ನಡಿಗರ ಗೌರವವನ್ನುಹೆಚ್ಚಿಸಿದ ಪ್ರಾತಃಸ್ಮರಣೀಯರನ್ನು ಚೌಪದಿಗಳ ಮೂಲಕ ಪ್ರಶಂಶಿಸಿರುವ ಕೃತಿ ಇದು. ಎನ್. ರವೀಂದ್ರಕುಮಾರ ಅವರು ಕೃತಿ ರಚಿಸಿದ್ದು, ದ.ರಾ. ಬೇಂದ್ರೆ, ಮಾಸ್ತಿ, ದಿನಕರ ದೇಸಾಯಿ, ಅನಕೃ, ಪುತಿನ, ಕುವೆಂಪು ಹೀಗೆ ಕನ್ನಡ ಸಾಹಿತಿ ಕಲಾವಿದರನ್ನು ಚೌಪದಿಗಳ ಮೂಲಕ ಸ್ಮರಿಸುವುದು, ಆ ಮೂಲಕ ಮಕ್ಕಳಿಗೆ ಕನ್ನಡ ನಾಡಿನ ಭವ್ಯ ಪರಂಪರೆಯನ್ನು ಮನದಟ್ಟು ಮಾಡುವುದು. ಈ ಸಂಕಲ್ಪ ಸಾಧನೆಯಿಂದ ಕವಿ ಎನ್. ರವೀಂದ್ರಕುಮಾರ ಅವರು 150 ಚೌಪದಿಗಳನ್ನು ಬರೆದಿದ್ದು, ಭಾಷೆ ಸರಳ, ಸುಲಲಿತ, ಮಧುರವಾಗಿದೆ. ಮಕ್ಕಳು ಕನ್ನಡ ನಾಡು-ನುಡಿಯ ಅಭಿಮಾನವನ್ನು ಸಂಭ್ರಮಿಸುವಂತೆ ಮಾಡುತ್ತವೆ.
---