ಬೆಳ್ಳಿ ರಥದ ಭಾವಯಾನ ಮಧುರಕಾನನ ಗಣಪತಿ ಭಟ್ಟ ಅವರ ಕೃತಿಯಾಗಿದೆ. ವೈವಿಧ್ಯಮಯವಾದ ರಚನೆಗಳಿಂದ ಕೂಡಿದ ಬೆಳ್ಳಿರಥದ ಭಾವಯಾನ ಕವನ ತೇಲುವಂತೆ ಮಾಡುತ್ತವೆ. ಸಂಕಲನವು ಓದುಗರಿಗೆ ಏಕತಾನತೆಯನ್ನು ಹೋಗಲಾಡಿಸಿ ಭಾವದಲೆಯಲ್ಲಿ ಪದಬಳಕೆ ಹಾಗೂ ರಚನಾ ಶೈಲಿಯು ಶ್ರೀಯುತ ಮಧುರಕಾನನ ಗಣಪತಿ ಭಟ್ಟರ ಕವಿತಾ ಸಾಮರ್ಥಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಹೃದ್ಯವಾಗಿದೆ, ವೇದ್ಯವಾಗಿದೆ ಎಂದು ಹರಿನರಸಿಂಹ ಉಪಾಧ್ಯಾಯ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ಮಧುರಕಾನನ ಗಣಪತಿ ಭಟ್ಟ ಅವರು ದಕ್ಷಿಣ ಕನ್ನಡದ ಪುತ್ತೂರಿನ ದರ್ಬೆ ಮೂಲದವರು. ಭೂಗರ್ಭ ಶಾಸ್ತ್ರದ ಬಿ ಎಸ್ ಸಿ ಪದವೀಧರರಾಗಿರುವ ಇವರು ಅಂತರ್ಜಲ ಸಂಶೋಧಕ ನಾಗಿ 35 ವರ್ಷಗಳ ಅನುಭವ ಹೊಂದಿದ್ದಾರೆ. ಕಾಲೇಜು ವಿದ್ಯಾರ್ಥಿಹಂತದಲ್ಲೇ ವಾಹಿನಿ ಕಲಾಸಂಘ ಸ್ಥಾಪನೆ ಮಾಡಿ ,2010ರಿಂದ ರಾಜ್ಯಮಟ್ಟ್ಟದ ಸಂಸ್ಥೆಯಾಗಿ ಕಟ್ಟಿದವರು. ಹಲವಾರು ಗಾಯನ ತರಭೇತಿ ಶಿಬಿರಗಳು, ಭಾವಗಾಯನ ಭಾವನರ್ತನ ಗೋಷ್ಠಿಗಳ ಆಯೋಜನೆ, ಕವಿಗೋಷ್ಠಿ ಕಥಾಗೋಷ್ಠಿ, ವಿಮರ್ಶಾಗೋಷ್ಠಿಗಳ ಆಯೋಜನೆಚಮಾಡಿದ್ದಾರೆ. ಕೃತಿಗಳು::ಮಧುರವಾಹಿನಿ (ಕವನ ಸಂಕಲನ) ಗಾನಮಧುರಂ (ಧ್ವನಿಮುದ್ರಣ 2017) ಸಂಪಾದಿತ ಕೃತಿ - ವಾಹಿನಿ(1982) ಸವಿಜೇನು(2019) ...
READ MORE