ಬೆಳಕಿದೆ..ಭಯ ಬೇಡ

Author : ಕಿರಣ ಅಂಕ್ಲೇಕರ

Pages 76

₹ 80.00




Year of Publication: 2021
Published by: ಅಯೋಧ್ಯ ಪಬ್ಲಿಕೇಶನ್ಸ್
Address: 36ನೇ ಕ್ರಾಸ್‌, ಔಟರ್‌ ರಿಂಗ್‌ ರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-
Phone: 91- 96209 1699

Synopsys

ಲೇಖಕ ಕಿರಣ ಅಂಕ್ಲೇಕರ ಅವರ ಕವನ ಸಂಕಲನ ಬೆಳಕಿದೆ ಭಯ ಬೇಡʼ.  “ಕಾವ್ಯ ಹೃದಯದ ಕಣ್ಣು ಎಂಬ ಮಾತಿದೆ. ಹೊರಗಣ್ಣು ಕಾಣದ್ದನ್ನು ಒಳಗಣ್ಣು ಕಾಣುತ್ತದೆ. ಕಂಡದ್ದನ್ನು ಕಾವ್ಯಾಭಿವ್ಯಕ್ತಿಯ ಮೂಲಕ ಜಗತ್ತಿನೆದುರು ಇಡುವಾತನೇ ಕವಿ. ಅದಕ್ಕೇ ಕವಿಯನ್ನು ಜಗತ್ತಿನ ಸಾಕ್ಷಿಪ್ರಜ್ಞೆ ಎನ್ನುತ್ತಾರೆ. ಕವಿ ಸಮಾಜಕ್ಕೆ ಧ್ವನಿಯಾಗಬೇಕು, ಅಶಕ್ತರ, ದೀನದಲಿತರ ನಾಲಗೆಯಾಗಬೇಕು. ಕವಿಯ ನಿಟ್ಟುಸಿರು ಸಮಾಜದ ನಿಟ್ಟುಸಿರು ಕೂಡ ಹೌದು. ಕಿರಣ ಅಂಕ್ಲೇಕರ ಅವರೊಳಗಿನ ಕವಿಯು ಪ್ರಕೃತಿಯನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಾನೆ. ದೇವರ ಸೃಷ್ಟಿಯ ವೈವಿಧ್ಯವನ್ನು ಕಂಡು ಬೆರಗಾಗುತ್ತಾನೆ. ಆ ಬೆರಗು ಆತನಲ್ಲಿ ವಿವೇಕವನ್ನು ಮೂಡಿಸಿದೆ. ಬಾಗುವುದನ್ನು ಕಲಿಸಿದೆ. ಇಲ್ಲಿರುವ ಬಹಳಷ್ಟು ಕವಿತೆಗಳಲ್ಲಿ ದೇವರು, ಪ್ರಕೃತಿ, ಮನುಷ್ಯನ ಗುಣಧರ್ಮ, ಹಾಸ್ಯ, ಸಂಸ್ಕೃತಿ ಮುಂತಾದವೇ ವಸ್ತುಗಳು. ನಾವು ದಿನನಿತ್ಯ ನೋಡುವ, ನೋಡಿ ಮರೆಯುವ ಹಲವು ಸಂಗತಿಗಳು ಕೂಡ ಕಿರಣ ಅಂಕ್ಲೇಕರ ಅವರ ಕವಿತೆಗಳಲ್ಲಿ ಸ್ಥಾಯಿಚಿತ್ರಗಳಾಗಿ ಮೂಡಿಬಂದಿರುವುದು ಮಾತ್ರವಲ್ಲ, "ಇದನ್ನೆಲ್ಲ ನೀನೇಕೆ ಚಿಂತಿಸಲಿಲ್ಲ?" ಎಂದು ನಮ್ಮ ಅಂತಃಸಾಕ್ಷಿಯನ್ನು ಚುಚ್ಚುತ್ತವೆ ಕೂಡ” ಎಂದು ಬೆನ್ನುಡಿಯಲ್ಲಿ ಹೇಳಲಾಗಿದೆ.

About the Author

ಕಿರಣ ಅಂಕ್ಲೇಕರ

ಡಾ. ಕಿರಣ ಅಂಕ್ಲೇಕರ ಉತ್ತರ ಕನ್ನಡ ಜಿಲ್ಲೆಯ  ಅಂಕೋಲೆಯವರು.  ಪ್ರಾಥಮಿಕ ವಿಧ್ಯಾಭ್ಯಾಸವನ್ನು ಗೋಕರ್ಣದಲ್ಲಿ ಮಾಡಿ, ಹೈಸ್ಕೂಲ್ ಹಾಗೂ ಕಾಲೇಜು ವ್ಯಾಸಂಗವನ್ನು ಅಂಕೋಲೆಯಲ್ಲಿ ಮುಗಿಸಿದ್ದಾರೆ. ಬಳಿಕ ಎಂ.ಎಸ್‌.ಸಿ. ಮತ್ತು ರಸಾಯನಶಾಸ್ತ್ರದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪದವಿ. ಬಹುರಾಷ್ಟ್ರೀಯ ಔಷಧ ಕಂಪೆನಿಯಲ್ಲಿ ಕೆಲಸಮಾಡುತ್ತಿದ್ದು, ಸದ್ಯ ಪುಣೆಯಯಲ್ಲಿ ಕುಟುಂಬದವರೊಂದಿಗೆ ವಾಸವಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಸಂಗೀತ, ಛಾಯಾ ಚಿತ್ರಗ್ರಹಣ ಮತ್ತು ಪರಿಸರ ಸಂರಕ್ಷಣೆಯಂತಹ ಸಾಮಾಜಿಕ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೃತಿಗಳು: ʻಬೆಳಕಿದೆ ಭಯ ಬೇಡʼ, ʼಬೂರಲ ಗದ್ದೆʼ. ...

READ MORE

Related Books